For Quick Alerts
  ALLOW NOTIFICATIONS  
  For Daily Alerts

  ತಮಿಳ್ ರಾಕರ್ಸ್ ಗೆ ಪಾಠ ಕಲಿಸಲು ರಜನಿ ಫ್ಯಾನ್ಸ್ ಹೊಸ ಪ್ಲಾನ್

  |

  ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ ದರ್ಬಾರ್ ಸಿನಿಮಾ ಜನವರಿ 9 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಎ ಆರ್ ಮುರುಗದಾಸ್ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಎರಡು ದಶಕದ ನಂತರ ರಜನಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ.

  ದರ್ಬಾರ್ ಟಿಕೆಟ್ ರೇಟ್ ತಮಿಳುನಾಡಿಗಿಂತ ಕರ್ನಾಟಕದಲ್ಲೇ ಜಾಸ್ತಿ | DARBAR | RAJNI KANTH | FILMIBEAT KANNADA

  ದರ್ಬಾರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆಯಲಿದೆ ಎಂಬ ನಿರೀಕ್ಷೆ ಇದೆ. ಆದರೆ, ಈ ಲೆಕ್ಕಾಚಾರಕ್ಕೆ ಪೈರಸಿ ವೆಬ್ ಸೈಟ್ ತಮಿಳು ರಾಕರ್ಸ್ ಅಡ್ಡಗಾಲು ಹಾಕಲಿದ್ದಾರೆ ಎಂಬ ಆತಂಕ ಕಾಡುತ್ತಿದೆ.

  ಸ್ಯಾಂಡಲ್ವುಡ್ ಗಿಲ್ಲ ಸಂಕ್ರಾಂತಿ ಸಡಗರ: ಕರ್ನಾಟಕದಲ್ಲೂ ಪರಭಾಷೆ ಚಿತ್ರಗಳದ್ದೇ ಅಬ್ಬರಸ್ಯಾಂಡಲ್ವುಡ್ ಗಿಲ್ಲ ಸಂಕ್ರಾಂತಿ ಸಡಗರ: ಕರ್ನಾಟಕದಲ್ಲೂ ಪರಭಾಷೆ ಚಿತ್ರಗಳದ್ದೇ ಅಬ್ಬರ

  ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಿನಿಮಾ ಪೂರ್ತಿ ಲೀಕ್ ಮಾಡುವ ತಮಿಳ್ ರಾಕರ್ಸ್ ವಿರುದ್ಧ ಈ ಸಲ ಹೋರಾಡಲು ರಜನಿ ಫ್ಯಾನ್ಸ್ ತಯಾರಾಗಿದ್ದಾರೆ. ಪೈರಸಿ ವಿರುದ್ಧ ದರ್ಬಾರ್ ಗೆಲ್ಲಿಸಬೇಕು ಎಂದು ಹೊಸ ಪ್ಲಾನ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಏನದು? ಮುಂದೆ ಓದಿ....

  ಥಿಯೇಟರ್ ನಲ್ಲೇ ನೋಡಲು ನಿರ್ಧಾರ

  ಥಿಯೇಟರ್ ನಲ್ಲೇ ನೋಡಲು ನಿರ್ಧಾರ

  ದರ್ಬಾರ್ ಸಿನಿಮಾ ಪೈರಸಿ ಆಗುವುದನ್ನು ತಡೆಯಲು ಕಷ್ಟಸಾಧ್ಯ ಎಂದು ತಿಳಿದಿರುವ ರಜನಿಕಾಂತ್ ಅಭಿಮಾನಿಗಳು, ಪೈರಸಿ ಕಾಪಿ ನೋಡದಿರಲು ತೀರ್ಮಾನಿಸಿದ್ದಾರೆ. ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡುವಂತೆ ಇತರೆ ಫ್ಯಾನ್ಸ್ ಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

  ಮತ್ತೆ ಮತ್ತೆ ನೋಡಲು ಚಿಂತನೆ

  ಮತ್ತೆ ಮತ್ತೆ ನೋಡಲು ಚಿಂತನೆ

  ದರ್ಬಾರ್ ಚಿತ್ರವನ್ನು ಮತ್ತೆ ಮತ್ತೆ ಚಿತ್ರಮಂದಿರದಲ್ಲಿ ನೋಡುವಂತೆ ಮಾಡುವ ಚಿಂತನೆ ಮಾಡಿದ್ದಾರೆ. ಇದರಿಂದ ದರ್ಬಾರ್ ಕಲೆಕ್ಷನ್ ಮೇಲೆ ಕೂಡ ಯಾವುದೇ ವ್ಯತಿರಿಕ್ತ ಪರಿಣಾಮ ಆಗದಂತೆ ಮಾಡುವುದು. ಆನ್ ಲೈನ್ ನಲ್ಲಿ ಲೀಕ್ ಆದರೆ ಆ ಕಾಪಿಗೆ ಮಹತ್ವ ಸಿಗಬಾರದು ಎನ್ನುವುದು ಅಭಿಮಾನಿಗಳು ಉದ್ದೇಶ.

  ರಿಲೀಸ್ ಗೂ ಮುಂಚೆ 'ದರ್ಬಾರ್' ದಾಖಲೆ ಕಲೆಕ್ಷನ್: ಗಳಿಕೆ ನಿರೀಕ್ಷೆ ಎಷ್ಟಿದೆ?ರಿಲೀಸ್ ಗೂ ಮುಂಚೆ 'ದರ್ಬಾರ್' ದಾಖಲೆ ಕಲೆಕ್ಷನ್: ಗಳಿಕೆ ನಿರೀಕ್ಷೆ ಎಷ್ಟಿದೆ?

  ಪೇಟಾ ಲೀಕ್ ಆಗಿತ್ತು

  ಪೇಟಾ ಲೀಕ್ ಆಗಿತ್ತು

  ಈ ಹಿಂದೆ ರಜನಿಕಾಂತ್ ಅಭಿನಯದ ಪೇಟಾ ಸಿನಿಮಾ ಮೊದಲ ಶೋ ಮುಗಿದ ತಕ್ಷಣ ಲೀಕ್ ಆಗಿತ್ತು. ಆದರೂ ಚಿತ್ರಕ್ಕೆ ಯಾವುದೇ ಸಂಕಷ್ಟ ಆಗಲಿಲ್ಲ. ಕಲೆಕ್ಷನ್ ಚೆನ್ನಾಗಿತ್ತು, ಸಿನಿಮಾಗೆ ಪ್ರತಿಕ್ರಿಯೆಯೂ ಚೆನ್ನಾಗಿತ್ತು. ಹಾಗಾಗಿ, ಪೇಟಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಯ್ತು.

  ಕನ್ನಡದ ಮುಖ್ಯ ಚಿತ್ರಮಂದಿರದಲ್ಲಿ ದರ್ಬಾರ್: ಒಡೆಯ ಜಾಗಕ್ಕೆ ತಲೈವಾ ಎಂಟ್ರಿ!ಕನ್ನಡದ ಮುಖ್ಯ ಚಿತ್ರಮಂದಿರದಲ್ಲಿ ದರ್ಬಾರ್: ಒಡೆಯ ಜಾಗಕ್ಕೆ ತಲೈವಾ ಎಂಟ್ರಿ!

  ಸಕ್ಸಸ್ ಆಗುತ್ತಾ ರಜನಿ ಫ್ಯಾನ್ಸ್ ಪ್ಲಾನ್?

  ಸಕ್ಸಸ್ ಆಗುತ್ತಾ ರಜನಿ ಫ್ಯಾನ್ಸ್ ಪ್ಲಾನ್?

  ಎಲ್ಲ ಭಾಷೆಯ ಎಲ್ಲಾ ಸ್ಟಾರ್ ನಟರ ಚಿತ್ರಗಳನ್ನು ಮೊದಲ ಶೋ ಮುಗಿಯುವಷ್ಟರಲ್ಲಿ ಲೀಕ್ ಮಾಡುತ್ತಿರುವ ಕುಖ್ಯಾತ ವೆಬ್ ಸೈಟ್ ತಮಿಳ್ ರಾಕರ್ಸ್ ವಿರುದ್ಧ ಯಾವುದೇ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜನರಲ್ಲಿ ಅರಿವು ಮೂಡಿಸಿದರೆ ಆ ಪೈರಸಿ ನೋಡುವುದು ಕಮ್ಮಿಯಾಗಬಹುದು ಎಂಬ ಅಭಿಪ್ರಾಯ ರಜನಿಕಾಂತ್ ಅಭಿಮಾನಿಗಳದ್ದು. ಒಂದು ವೇಳೆ ಇವರ ಈ ಪ್ಲಾನ್ ಸಕ್ಸಸ್ ಆದರೆ ಮುಂದಿನ ದಿನದಲ್ಲಿ ಸಿನಿಮಾ ಜಗತ್ತಿಗೆ ಅನುಕೂಲವೇ ಆಗುತ್ತೆ. ಆಗದಿದ್ದಲ್ಲಿ?

  English summary
  Superstar Rajinikanth fans set to fight against piracy website tamilrockers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X