ಜೈಲರ್ ಬಾಕ್ಸ್ ಆಫೀಸ್ ಕಲೆಕ್ಷನ್: 650 ಕೋಟಿ ರೂ. ಮೈಲಿಗಲ್ಲಿನತ್ತ ರಜನಿಕಾಂತ್ ಸಿನಿಮಾ
ನಟ ರಜನಿಕಾಂತ್ ಅಭಿನಯದ ಆಕ್ಷನ್ ಫಿಲಂ ಜೈಲರ್ ಥಿಯೇಟರ್‌ನಲ್ಲಿ ಭರ್ಜರಿ ಲಾಭ ಮಾಡಿದೆ. ಇಡೀ ತಂಡ ಸಿನಿಮಾ ಸಕ್ಸಸ್ ಏಂಜಾಯ್ ಮಾಡ್ತಿದೆ. ಜೈಲರ್ ಇದುವರೆಗೆ ವಿಶ್ವಾದ್ಯಂತ 640 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದ್ದು, ಶೀಘ್ರದಲ್ಲೇ 650 ಕೋಟಿ ಕ್ಲಬ್ ಸೇರುವ ನಿರೀಕ್ಷೆಯಿದೆ.
ಜೈಲರ್ ಬಿಡುಗಡೆಯಾದ 26 ದಿನಗಳಲ್ಲಿ, ನಾಲ್ಕನೇ ಸೋಮವಾರ ಚಿತ್ರಮಂದಿರಗಳಲ್ಲಿ 2.39 ಕೋಟಿ ಗಳಿಸಿದೆ. ಇದನ್ನು ಒಟ್ಟು ಮಾಡಿ ಜಾಗತಿಕವಾಗಿ 640.18 ಕೋಟಿ ಗಳಿಸಿದೆ. ಜೈಲರ್ ಆಗಸ್ಟ್ 10 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಅನ್ನಾತೆ ಸೋಲಿನ ಬಳಿಕ ತಲೈವರ್ ರಜನಿಕಾಂತ್ ಅವರಿಗೆ ಭರ್ಜರಿ ಯಶಸ್ಸು ನೀಡಿದೆ.

650 ಕೋಟಿ ಕ್ಲಬ್ ಸೇರುವತ್ತ ರಜನಿಕಾಂತ್ ಚಿತ್ರ
ಮಂಗಳವಾರ, ಮನೋಬಾಲಾ ವಿಜಯಬಾಲನ್ ಟ್ವಿಟರ್‌ನಲ್ಲಿ ಜೈಲರ್‌ನ ವಿಶ್ವಾದ್ಯಂತ ಬಾಕ್ಸ್ ಆಫೀಸ್ ಗಳಿಕೆಯನ್ನು ಹಂಚಿಕೊಂಡಿದ್ದಾರೆ. ಮೊದಲ ವಾರದಲ್ಲಿ, ಜೈಲರ್ ವಿಶ್ವಾದ್ಯಂತ 450.8 ಕೋಟಿ ಗಳಿಸಿತು. 2 ನೇ ವಾರದಲ್ಲಿ, ಚಲನಚಿತ್ರವು ವಿಶ್ವಾದ್ಯಂತ ಒಟ್ಟು 124.18 ಕೋಟಿ ಗಳಿಸಿದೆ.
ಜೈಲರ್ ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ಕಲೆಕ್ಷನ್ ವಿವರಗಳು ಇಲ್ಲಿವೆ. ಸಿನಿಮಾ 650 ಕೋಟಿ ರೂಪಾಯಿ ಮೈಲಿಗಲ್ಲಿನತ್ತ ಸಾಗುತ್ತಿದೆ. ಮೊದಲ ವಾರ 450.80 ಕೋಟಿ. ಎರಡನೇ ವಾರ 124.18 ಕೋಟಿ. ಮೂರನೇ ವಾರ 47.05 ಕೋಟಿ. ನಾಲ್ಕನೇ ವಾರದ ಮೊದಲ ದಿನ 3.92 ಕೋಟಿ, 2ನೇ ದಿನ 3.11 ಕೋಟಿ, ಮೂರನೇ ದಿನ 4.17 ಕೋಟಿ, ಐದನೇ ದಿನ 4.56 ಕೋಟಿ, ಐದನೇ ದಿನ 2.39 ಕೋಟಿ ಗಳಿಸಿದೆ. ಒಟ್ಟು ಈವರೆಗೆ 640.18 ಕೋಟಿ ಕಲೆಕ್ಷನ್ ಮಾಡಿದೆ.

ಜೈಲರ್ ಬಾಕ್ಸ್ ಆಫೀಸ್
ಜೈಲರ್ ಸಿನಿಮಾ 2018ರಲ್ಲಿ ಬಿಡುಗಡೆಯಾದ 2.0 ಮತ್ತು 2022ರಲ್ಲಿ ಬಂದ ಪೊನ್ನಿಯಿನ್ ಸೆಲ್ವನ್: ಭಾಗ 1 ರ ನಂತರ 500 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಮೂರನೇ ತಮಿಳು ಚಿತ್ರವಾಗಿದೆ. ಇದೀಗ ಮತ್ತೊಂದು ದಾಖಲೆಯನ್ನು ತನ್ನ ಹೆಸರಿಗೆ ಸೇರಿಸಲು ಮುಂದಾಗಿದ್ದು, ವಿಶ್ವದಾದ್ಯಂತ 600 ಕೋಟಿ ಗಳಿಸಿ, 2018 ರಲ್ಲಿ ಬಿಡುಗಡೆಯಾದ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ 2.0 ನಂತರ ಈ ಚಿತ್ರವು ಎರಡನೇ ಅತಿ ವೇಗವಾಗಿ 600 ಕೋಟಿ ಗಳಿಸಿದ ತಮಿಳು ಚಲನಚಿತ್ರವಾಗಿ ದಾಖಲೆ ನಿರ್ಮಿಸಿದೆ.
ಸ್ಯಾಕ್‌ನಿಕ್ ವೆಬ್‌ಸೈಟ್ ವರದಿಯ ಪ್ರಕಾರ ಇದುವರೆಗೆ ಎಲ್ಲಾ ಭಾಷೆಗಳಲ್ಲಿ ಭಾರತದಲ್ಲಿ ಅಂದಾಜು 338.3 ಕೋಟಿ ಕೆಲಕ್ಷನ್ ಮಾಡಿರುವ ಜೈಲರ್ ಚಿತ್ರಮಂದಿರಗಳಲ್ಲಿ ನಾಲ್ಕನೇ ವಾರದಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ತಮಿಳಿನ ಜೈಲರ್ ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡಕ್ಕೆ ಡಬ್ ಆಗಿದೆ.
ಜೈಲರ್ ಯಶಸ್ಸಿನಿ ಸಂಭ್ರಮದಲ್ಲಿರುವ ನಿರ್ಮಾಪಕ ಕಲಾನಿಧಿ ಮಾರನ್ ಜೈಲರ್ ತಂಡದ ಒಬ್ಬೊಬ್ಬರಿಗೆ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಕಳೆದ ತಿಂಗಳು, ಚೆನ್ನೈನಲ್ಲಿ ರಜನಿಕಾಂತ್ ಅವರನ್ನು ಭೇಟಿಯಾಗಿ ಚೆಕ್ ಮತ್ತು ಐಷಾರಾಮಿ ಕಾರು ನೀಡಿದ್ದರು. ಇದಾದ ನಂತರ ಚಿತ್ರದ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರಿಗೂ ಹಣ ಮತ್ತು ಕಾರು ಗಿಫ್ಟ್ ನೀಡಿದ್ದರು. ಇದನ್ನು ಮುಂದುವರೆಸಿದ ಅವರು, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್‌ಗೆ ಐಷಾರಾಮಿ ಕಾರು ನೀಡಿದ್ದಾರೆ.
ಜೈಲರ್
ಸನ್ ಪಿಕ್ಚರ್ಸ್ ನಿರ್ಮಾಣದ ನೆಲ್ಸನ್ ನಿರ್ದೇಶನದ ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಜೊತೆಗೆ ವಸಂತ ರವಿ, ತಮನ್ನಾ ಭಾಟಿಯಾ, ಯೋಗಿ ಬಾಬು, ರಮ್ಯಾ ಕೃಷ್ಣನ್ ಮತ್ತು ವಿನಾಯಕನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್, ಮಲಯಾಳಂನ ಹಿರಿಯ ನಟ ಮೋಹನ್ ಲಾಲ್ ಮತ್ತು ಬಾಲಿವುಡ್ ಹಿರಿಯ ನಟ ಜಾಕಿ ಶ್ರಾಫ್ ಕೂಡ ಇದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತವಿದೆ.


Click it and Unblock the Notifications











