ರಜನಿಕಾಂತ್ ನೀಡಿದ ಹಿಮಾಲಯದ ಗಿಫ್ಟ್ ಇನ್ನೂ ಧರಿಸುತ್ತಿದ್ದಾರೆ ಧನುಷ್!
ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಅವರು ತಮ್ಮ 18 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ. ಜನವರಿ 17ರಂದು ಅಧಿಕೃತವಾಗಿ ಈ ವಿಚಾರವನ್ನು ಇಬ್ಬರು ಕೂಡ ಘೋಷಣೆ ಮಾಡಿದ್ದರು. ಇದು ಧನುಷ್, ರಜನಿಕಾಂತ್ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿತ್ತು.
ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಅವರನ್ನು ವಿವಾಹವಾಗಿದ್ದ ತಮಿಳು ನಟ ಧನುಷ್ ವೀಚ್ಚೇದನದ ಸುದ್ದಿ ಈಗ ಎಲ್ಲಾ ಕಡೆ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೆ 18 ವರ್ಷ ಸಂಸಾರ ಮಾಡಿದ ಬಳಿಕ ಈ ಜೋಡಿ ವಿಚ್ಚೇದನ ಪಡೆದುಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ರಜನಿಕಾಂತ್ ಅಳಿಯ ಧನುಷ್ ಹಾಗೂ ಪುತ್ರಿ ಐಶ್ವರ್ಯಾ ರಜನಿಕಾಂತ್ ತಮ್ಮ 18 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು. ಇದು ಸೂಪರ್‌ಸ್ಟಾರ್ ರಜನಿಕಾಂತ್ ಮನಸ್ಸಿನ ಮೇಲೆ ಪರಿಣಾಮ ಬೀರಿದೆಯಂತೆ. ಮಗಳ ಹಾಗೂ ಅಳಿಯ ತೆಗೆದುಕೊಂಡ ನಿರ್ಧಾರದಿಂದ ರಜನಿಕಾಂತ್ ಕುಗ್ಗಿ ಹೋಗಿದ್ದಾರೆ ಎಂಬುದು ತಿಳಿದು ಬಂದಿದೆ.

ಉತ್ತಮ ಬಾಂಧವ್ಯ ಹೊಂದಿದ್ದ ರಜನಿ-ಧನುಷ್
71ನೇ ವಯಸ್ಸಿನಲ್ಲಿಯೂ ರಜನಿಕಾಂತ್ ಲವ ಲವಿಕೆಯಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದವರು. ಆದರೆ, ಮಗಳು ದಾಂಪತ್ಯಕ್ಕೆ ಅಂತ್ಯ ಹಾಡಲು ನಿರ್ಧರಿಸಿದ ದಿನದಿಂದ ರಜನಿ ನೋವಿನಲ್ಲಿಯೇ ಕಾಲ ಕಳೆಯುತ್ತಾರೆ ಎಂಬುದನ್ನು ಆಪ್ತ ಮೂಲಗಳು ಬಹಿರಂಗ ಪಡಿಸಿವೆ. ಹೀಗಾಗಿ ಮತ್ತೆ ಮಗಳ ಜೀವನವನ್ನು ಸರಿಪಡಿಸಲು ರಜನಿಕಾಂತ್ ಪ್ರಯತ್ನ ಕೂಡ ಮಾಡುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಇದರ ಬೆನ್ನಲ್ಲೆ ಇದೀಗ ಮತ್ತೊಂದು ಸುದ್ದಿ ಕೂಡ ಕೇಳಿಬರುತ್ತಿದೆ. ಎಲ್ಲರಿಗೂ ತಿಳಿದಿರುವಂತೆ ರಜನಿಕಾಂತ್ ಮತ್ತು ಅವರ ಮಾಜಿ ಅಳಿಯ ಧನುಷ್ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಮತ್ತು ಇಬ್ಬರು ತಂದೆ-ಮಗನಂತೆ ಇದ್ದು ತೋರಿಸಿದ್ದವರು. ರಜನಿಕಾಂತ್ ಮತ್ತು ಧನುಷ್ ಅನ್ಯೋನ್ಯತೆ ಅಭಿಮಾನಿಗಳಿಗು ಹಿಡಿಸಿತ್ತು. ಅವರನ್ನು ಎಷ್ಟೋ ಮಂದಿ ಅನುಸರಿಸುತ್ತಿದ್ದರು ಕೂಡ. ಇನ್ನು ಮಗಳು ಐಶ್ವರ್ಯಾ ಮತ್ತು ಧನುಷ್ ಮದುವೆಯಲ್ಲಿ ಧನುಷ್‌ಗೆ ರಜನಿಕಾಂತ್ ಅವರು ಅತ್ಯಂತ ಅಮೂಲ್ಯವಾದ ಉಡುಗೊರೆಯನ್ನು ನೀಡಿದ್ದರು.

ಮದುವೆಯಲ್ಲಿ ಅಳಿಯನಿಗೆ ಅಪರೂಪದ ಗಿಫ್ಟ್ ನೀಡಿದ್ದ ರಜನಿ
ಈ ಬಗ್ಗೆಯೇ ಈಗ ಒಂದಷ್ಟು ವಿಚಾರಗಳು ಕೇಳಿಬಂದಿದೆ. ಹೌದು ಧನುಷ್ ಶಿವನ ಕಟ್ಟಾಭಕ್ತ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಖಾಸಗೀ ಮ್ಯಾಗಝಿನ್ ಒಂದರ ವರದಿಯ ಪ್ರಕಾರ, 2004 ರಲ್ಲಿ ಧನುಷ್ ಮತ್ತು ಐಶ್ವರ್ಯಾ ವಿವಾಹವಾದಾಗ, ರಜನಿಕಾಂತ್ ತಮ್ಮ ಅಳಿಯನಿಗೆ ಅಪರೂಪದ ರುದ್ರಾಕ್ಷಿಯ ನೆಕ್‌ಬ್ಯಾಂಡ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಇದನ್ನು ರಜನಿಕಾಂತ್ ಸ್ವತಃ ಹಿಮಾಲಯದಿಂದ ತಂದಿದ್ದರು. ಹೀಗಾಗಿ ರಜನಿಕಾಂತ್ ಅವರ ಮೇಲಿನ ಅಪಾರ ಗೌರವದಿಂದಾಗಿ, ಧನುಷ್ ಅಂದಿನಿಂದ ಇಂದಿನವರೆಗೂ ಅದನ್ನು ತೆಗೆದೇ ಇಲ್ಲವಂತೆ. ಚಿತ್ರೀಕರಣ ಸಂದರ್ಭದಲ್ಲಿ ಮಾತ್ರ ಅದನ್ನು ತೆಗೆಯುತ್ತಿದ್ದ ಧನುಷ್ ಅದನ್ನು ಭದ್ರವಾಗಿ ಕಾಪಾಡಿಕೊಂಡು ಬಂದಿದ್ದರು.

ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದರು ರಜನಿ ಉಡುಗೊರೆ ಧನುಷ್ ಬಳಿ
ಮತ್ತೊಂದು ವಿಚಾರ ಏನಪ್ಪಾ ಅಂದರೇ ಐಶ್ವರ್ಯರಿಂದ ಧನುಷ್ ಬೇರ್ಪಟ್ಟ ನಂತರವೂ ರಜನಿಕಾಂತ್ ಅವರು ನೀಡಿದ್ದ ಉಡುಗೊರೆಯನ್ನು ಅಂದರೆ ರುದ್ರಾಕ್ಷಿಯ ಮಾಲೆಯನ್ನು ಧರಿಸುವುದನ್ನು ಮುಂದುವರೆಸಿದ್ದಾರೆ. ಹಾಗೇ ಈ ರುದ್ರಾಕ್ಷಿ ಮಾಲೆ ಧರಿಸಿದ ನಂತರದಿಂದ ಧನುಷ್‌ಗೆ ಸಾಕಷ್ಟು ಪಾಸಿಟಿವ್ ವೈಬ್ ಬಂದಿತ್ತು. ಸಿನಿಮಾಗಳು ಹಿಟ್ ಆದವೂ, ಮಾನಸಿಕ ನೆಮ್ಮದಿಯೂ ದೊರಕಿತ್ತು ಅಂತ ರಜನಿಕಾಂತ್ ಕುಟುಂಬದ ಆಪ್ತರು ಖಾಸಗೀ ಮ್ಯಾಗಝಿನ್‌ಗೆ ಮಾಹಿತಿ ನೀಡಿದ್ದಾರೆ.

ನಮ್ಮ ನಿರ್ಧಾರವನ್ನು ಗೌರವಿಸಿ, ಗೌಪ್ಯತೆಯನ್ನು ನೀಡಿ ಎಂದ ಧನುಷ್-ಐಶ್ವರ್ಯಾ
ಜನವರಿ 17ರಂದು ಅಧಿಕೃತವಾಗಿ ಧನುಷ್-ಐಶ್ವರ್ಯಾ ಇಬ್ಬರು ಕೂಡ ಘೋಷಣೆ ಮಾಡಿದ್ದರು. ಈ ಸಂದರ್ಭದಲ್ಲಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಗೆಂದು ಬರೆದುಕೊಂಡಿದ್ದರು. '18 ವರ್ಷಗಳ ಕಾಲ ಸ್ನೇಹಿತರಂತೆ, ದಂಪತಿಗಳಂತೆ, ಪೋಷಕರಂತೆ ಮತ್ತು ಪರಸ್ಪರ ಹಿತೈಷಿಗಳಾಗಿದ್ದೆವು. ನಮ್ಮ ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿದೆ. ಇಂದು ನಾವು ನಮ್ಮ ಮಾರ್ಗಗಳನ್ನು ಪ್ರತ್ಯೇಕಗೊಳಿಸುವಿಕೆಯ ಜಾಗದಲ್ಲಿ ಬಂದು ನಿಂತಿದ್ದೇವೆ. ಜೋಡಿಯಾಗಿದ್ದ ನಾವು ಬೇರೆಯಾಗಲು ಮತ್ತು ನಮ್ಮನ್ನು ನಾವು ಇನ್ನಷ್ಟು ಚೆನ್ನಾಗಿ ಅರ್ಥೈಸಿಕೊಳ್ಳಲು, ಸಮಯ ಕೊಡಲು ನಾನು ಮತ್ತು ಐಶ್ವರ್ಯಾ ನಿರ್ಧರಿಸಿದ್ದೇವೆ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಇದನ್ನು ನಿಭಾಯಿಸಲು ನಮಗೆ ಬೇಕಿರುವ ಗೌಪ್ಯತೆಯನ್ನು ನೀಡಿ' ಎಂದಿದ್ದರು ಧನುಷ್. ಅದೇ ಪೋಸ್ಟ್ ಅನ್ನು ಹೆಸರು ಬದಲಾಯಿಸಿ, ಐಶ್ವರ್ಯಾ ಕೂಡ ಶೇರ್ ಮಾಡಿಕೊಂಡಿದ್ದರು.


Click it and Unblock the Notifications











