For Quick Alerts
  ALLOW NOTIFICATIONS  
  For Daily Alerts

  ಚಿಕಿತ್ಸೆಗಾಗಿ ಅಮೆರಿಕಕ್ಕೆ ಹಾರಲು ಕೇಂದ್ರದ ಒಪ್ಪಿಗೆ ಪಡೆದ ರಜನೀಕಾಂತ್

  |

  ಕೆಲವು ತಿಂಗಳ ಹಿಂದಷ್ಟೆ ಅನಾರೋಗ್ಯಕ್ಕೆ ಈಡಾಗಿದ್ದ ನಟ ರಜನೀಕಾಂತ್ ಈಗ ಚೇತರಿಸಿಕೊಂಡಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗುತ್ತಿದ್ದಾರೆ.

  ಕುಟುಂಬದೊಂದಿಗೆ ಖಾಸಗಿ ವಿಮಾನದಲ್ಲಿ ಅಮೆರಿಕಕ್ಕೆ ತೆರಳಲು ಸರ್ಕಾರದ ಅನುಮತಿಯನ್ನು ರಜನೀಕಾಂತ್ ಕೇಳಿದ್ದರು. ಸರ್ಕಾರವು ಅನುಮತಿ ನೀಡಿದ್ದು, ಪತ್ನಿ ಲತಾ ಹಾಗೂ ಇತರ ಕೆಲವರೊಟ್ಟಿಗೆ ರಜನೀಕಾಂತ್ ಕೆಲವೇ ದಿನಗಳಲ್ಲಿ ಅಮೆರಿಕಕ್ಕೆ ಹಾರಲಿದ್ದಾರೆ.

  ರಜನೀಕಾಂತ್ ಮಗಳು ಐಶ್ವರ್ಯಾ ಮತ್ತು ಅಳಿಯ ಧನುಷ್ ಈಗಾಗಲೇ ಅಮೆರಿಕದಲ್ಲಿದ್ದಾರೆ. ಧನುಶ್ ತಮ್ಮ್ ಹಾಲಿವುಡ್ ಸಿನಿಮಾ 'ದಿ ಗ್ರೇ ಮ್ಯಾನ್' ಚಿತ್ರೀಕರಣಕ್ಕಾಗಿ ಅಮೆರಿಕಕ್ಕೆ ಹೋಗಿದ್ದಾರೆ.

  ರಜನೀಕಾಂತ್ ಅವರು ಅಮೆರಿಕದಲ್ಲಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗೆ ಒಳಪಡಲಿದ್ದಾರೆ. ಅವರಿಗೆ ಧನುಶ್ ಹಾಗೂ ಮಗಳು ಐಶ್ವರ್ಯಾ ಜೊತೆಯಾಗಲಿದ್ದಾರೆ.

  ಕಳೆದ ವರ್ಷಾಂತ್ಯದಲ್ಲಿ 'ಅಣ್ಣಾತೆ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದ ವೇಳೆ ರಜನೀಕಾಂತ್ ಆರೋಗ್ಯದಲ್ಲಿ ಏರು-ಪೇರಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನ ಆಸ್ಪತ್ರೆಯಲ್ಲಿದ್ದ ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದರು.

  Sanchari Vijay ಗೆ ಅಕ್ಕಿ ತುಂಬೋದ್ರಲ್ಲು ಅವಾರ್ಡ್ ಕೊಡಬೇಕು ಅಂದಿದ್ರು ಸತೀಶ್ | Filmibeat Kannada

  ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ರಜನೀಕಾಂತ್ ಅವರು ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಮಾಡಿದರು. ಇದೀಗ ಹೆಚ್ಚಿನ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆ.

  English summary
  Actor Rajinikanth going to America with family for health check up and treatment. Government gave permission to Rajinikanth to fly with family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X