For Quick Alerts
  ALLOW NOTIFICATIONS  
  For Daily Alerts

  ಕೊರೊನಾ ವಿರುದ್ಧದ ಹೋರಾಟಕ್ಕೆ 50 ಲಕ್ಷ ನೀಡಿದ ರಜನಿಕಾಂತ್

  |

  ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ತಮಿಳುನಾಡು ಸರ್ಕಾರದ ಜೊತೆ ಕೈ ಜೋಡಿಸಿದ್ದಾರೆ.

  ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ದೇಣಿಗೆ ನೀಡುವ ಮೂಲಕ ತಲೈವಾ ಸರ್ಕಾರಕ್ಕೆ ನೆರವಾಗಿದ್ದಾರೆ. ಸೋಮವಾರ (ಮೇ 17) ಖುದ್ದು ರಜನಿಕಾಂತ್ ಅವರೇ ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಭೇಟಿ ಮಾಡಿ 50 ಲಕ್ಷ ಮೌಲ್ಯದ ಚೆಕ್‌ನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ.

  ಕೊರೊನಾ ಲಾಕ್‌ಡೌನ್‌ ನಿಯಮವನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲನೆ ಮೂಲಕ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ರಜನಿ ವಿನಂತಿಸಿದ್ದಾರೆ.

  ಚಿತ್ರೀಕರಣದಿಂದ ಹಿಂತಿರುಗುತ್ತಿದ್ದಂತೆ ಕೋವಿಡ್ ಲಸಿಕೆ ಪಡೆದ ರಜನಿಕಾಂತ್ಚಿತ್ರೀಕರಣದಿಂದ ಹಿಂತಿರುಗುತ್ತಿದ್ದಂತೆ ಕೋವಿಡ್ ಲಸಿಕೆ ಪಡೆದ ರಜನಿಕಾಂತ್

  ತಮಿಳಿನ ಮತ್ತೊಬ್ಬ ನಟ ಅಜಿತ್ ಕುಮಾರ್ ಸಹ ಸಿಎಂ ಪರಿಹಾರ ನಿಧಿಗೆ 25 ಲಕ್ಷ ದೇಣಿಗೆ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಅಜಿತ್ ಮ್ಯಾನೇಜರ್ ಅಧಿಕೃತವಾಗಿ ತಿಳಿಸಿರುವುದಾಗಿ ವಿಶ್ಲೇಷಕ ರಮೇಶ್ ಬಾಲ ಟ್ವೀಟ್ ಮಾಡಿದ್ದಾರೆ.

  ಸಂಜನಾ Vs ವಂದನಾ:ಹಳೇ ಕೇಸ್ ನಿಂದ ಸಂಜನಾಗೆ ಮತ್ತೆ ಸಂಕಷ್ಟ | Filmibeat Kannada

  ರಜನಿಕಾಂತ್ ಇತ್ತೀಚಿಗಷ್ಟೆ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಅಣ್ಣಾತ್ತೆ ಸಿನಿಮಾದ ಚಿತ್ರೀಕರಣ ಮುಗಿಸಿ ಚೆನ್ನೈಗೆ ಬಂದಿದ್ದ ರಜನಿ, ನಂತರ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.

  ಹೈದರಾಬಾದ್‌ ಶೆಡ್ಯೂಲ್ ಮುಗಿಸಿರುವ ರಜನಿ ಈಗ ಚೆನ್ನೈ ನಿವಾಸದಲ್ಲಿದ್ದಾರೆ. ಸಿರುತೈ ಶಿವ ನಿರ್ದೇಶನದ ಈ ಸಿನಿಮಾದಲ್ಲಿ ಕೀರ್ತಿ ಸುರೇಶ್, ನಯನತಾರ, ಖುಷ್ಬೂ, ಮೀನಾ, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ನವೆಂಬರ್ 4 ರಂದು ಅಣ್ಣಾತ್ತೆ ಚಿತ್ರ ತೆರೆಕಾಣಲಿದೆ ಎಂದು ಪ್ರಕಟಿಸಲಾಗಿದೆ.

  English summary
  Superstar Rajinikanth has donated 50 Lakh to the Tamilnadu CM relief fund for Covid19 Relief.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X