For Quick Alerts
  ALLOW NOTIFICATIONS  
  For Daily Alerts

  ಅಮೆರಿಕದಿಂದ ವಾಪಸ್ ಆದ ಬೆನ್ನಲ್ಲೇ ಕೊಲ್ಕತ್ತಾ ಪ್ರವಾಸ ಬೆಳೆಸಿದ ರಜನಿಕಾಂತ್

  |

  ಆರೋಗ್ಯ ತಪಾಸಣೆ ಮುಗಿಸಿ ಅಮೆರಿಕದಿಂದ ಭಾರತ್ ವಾಪಸ್ ಆಗುತ್ತಿದ್ದಂತೆ ಸೂಪರ್ ಸ್ಟಾರ್ ರಜನಿಕಾಂತ್ ಕೊಲ್ಕತ್ತಾ ಕಡೆ ಪಯಣ ಬೆಳೆಸಿದ್ದಾರೆ. ಜುಲೈ 9ರಂದು ಭಾರತಕ್ಕೆ ಹಿಂದಿರುಗಿದ ತಲೈವ, ಇತ್ತೀಚಿಗಷ್ಟೆ ರಾಜಕೀಯದ ಬಗ್ಗೆ ಸಭೆ ನಡೆಸಿ, ರಾಜಕೀಯದಿಂದ ಹಿಂದೆ ಸರಿಯುತ್ತಿರುವುದಾಗಿ ಅಧಿಕೃತ ಘೋಷಣೆ ಮಾಡಿದ್ದರು.

  ಇದರ ಬೆನ್ನಲ್ಲೇ ರಜನಿಕಾಂತ್ ಕೊಲ್ಕತ್ತಾಗೆ ತೆರಳಿದ್ದಾರೆ. ಅಂದಹಾಗೆ ಸೂಪರ್ ಸ್ಟಾರ್ ಕೊಲ್ಕತ್ತಾಗೆ ಭೇಟಿ ನೀಡುತ್ತಿರುವುದು ಅಣ್ಣಾತೆ ಚಿತ್ರೀಕರಣ ಸಲುವಾಗಿ. ರಜನಿಕಾಂತ್ ನಟನೆಯ ಬಹುನಿರೀಕ್ಷೆಯ ಅಣ್ಣಾತೆ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಬಾಕಿ ಇದೆ. ಚಿತ್ರತಂಡ ಕೊಲ್ಕತ್ತಾದಲ್ಲಿ ಚಿತ್ರೀಕರಿಸಲು ಪ್ಲಾನ್ ಮಾಡಿದ್ದು, ಇಡೀ ತಂಡ ಪಶ್ಚಿಮ ಬಂಗಾಳಕ್ಕೆ ಪಯಣ ಬೆಳೆಸಿದೆ. ಮುಂದೆ ಓದಿ..

  ಚೆನ್ನೈಗೆ ವಾಪಸ್ ಆದ ತಲೈವ ರಜನಿಕಾಂತ್: ಅಭಿಮಾನಿಗಳಲ್ಲಿ ಸಂಭ್ರಮಚೆನ್ನೈಗೆ ವಾಪಸ್ ಆದ ತಲೈವ ರಜನಿಕಾಂತ್: ಅಭಿಮಾನಿಗಳಲ್ಲಿ ಸಂಭ್ರಮ

  ಚಿತ್ರದಲ್ಲಿದೆ ದೊಡ್ಡ ತಾರಾಬಳಗ

  ಚಿತ್ರದಲ್ಲಿದೆ ದೊಡ್ಡ ತಾರಾಬಳಗ

  ಸಿರುತೈ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅಣ್ಣಾತೆ ಚಿತ್ರ ಕೊನೆಯದಾಗಿ ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡಿತ್ತು. ಚಿತ್ರದಲ್ಲಿ ನಟಿ ನಯನತಾರಾ, ಮೀನಾ, ಖುಷ್ಬೂ, ಕೀರ್ತಿ ಸುರೇಶ್ ಘಟಾನುಘಟಿ ನಾಯಕಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಟ ಪ್ರಕಾಶ್ ರಾಜ್ ಮತ್ತು ಸೂರಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಕೊಲ್ಕತ್ತಾದಲ್ಲಿ 4 ದಿನಗಳ ಚಿತ್ರೀಕರಣ

  ಕೊಲ್ಕತ್ತಾದಲ್ಲಿ 4 ದಿನಗಳ ಚಿತ್ರೀಕರಣ

  ಜುಲೈ 14 ರಂದು ಕೊಲ್ಕತ್ತಾಗೆ ತೆರಳಿದ್ದು, 15 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಕೊಲ್ಕತ್ತಾದಲ್ಲಿ ನಾಲ್ಕು ದಿನಗಳ ಕಾಲ ಚಿತ್ರೀಕರಣ ಮುಗಿಸಿ ಚೆನ್ನೈಗೆ ವಾಪಸ್ ಆಗಲಿದೆ. ಅಂದಹಾಗೆ ಅಣ್ಣಾತೆ ಸಿನಿಮಾ ಅಂದುಕೊಂಡಂತೆ ನವೆಂಬರ್ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತಗೊಳಿಸಿದೆ.

  ದರ್ಬಾರ್ ಬಳಿಕ ತೆರೆಗೆ ಬರುತ್ತಿರುವ ತಲೈವ ಸಿನಿಮಾ

  ದರ್ಬಾರ್ ಬಳಿಕ ತೆರೆಗೆ ಬರುತ್ತಿರುವ ತಲೈವ ಸಿನಿಮಾ

  ಕೊರೊನಾ ಕಾರಣದಿಂದ ಚಿತ್ರೀಕರಣ ತಡವಾಗುತ್ತಲೆ ಇದೆ. ಆದರೆ ಆದಷ್ಟು ಬೇಗ ಚಿತ್ರೀಕರಣ ಮುಗಿಸಿ ಸಿನಿಮಾ ರಿಲೀಸ್ ಮಾಡುವ ತಯಾರಿಯಲ್ಲಿದೆ ಚಿತ್ರತಂಡ. ಸೂಪರ್ ಸ್ಟಾರ್ ನಟನೆಯ ದರ್ಬಾರ್ ಸಿನಿಮಾ ಬಳಿಕ ತೆರೆಗೆ ಬರುತ್ತಿರುವ ಸಿನಿಮಾ ಇದಾಗಿದೆ. ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಅಣ್ಣಾತೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

  ಲೆಜೆಂಡ್ Dadasaheb Phalke ಪ್ರಶಸ್ತಿ ಪಡೆದ ಮೊದಲ ದಕ್ಷಿಣ ಭಾರತದ ಮಹಿಳೆ Ragini | Filmibeat Kannada
  ಇತ್ತೀಚಿಗಷ್ಟೆ ಚೆನ್ನೈಗೆ ವಾಪಸ್ ಆಗಿದ್ದ ಸೂಪರ್ ಸ್ಟಾರ್

  ಇತ್ತೀಚಿಗಷ್ಟೆ ಚೆನ್ನೈಗೆ ವಾಪಸ್ ಆಗಿದ್ದ ಸೂಪರ್ ಸ್ಟಾರ್

  ಇತ್ತೀಚಿಗೆ ಆರೋಗ್ಯ ತಪಾಸಣೆ ಮುಗಿಸಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದು ಇಳಿದ ಸೂಪರ್ ಸ್ಟಾರ್ ಅನ್ನು ಅದ್ದೂರಿ ಸ್ವಾಗತ ಮಾಡಿದ್ದರು. ಚೆನ್ನೈ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ತಲೈವ..ತಲೈವ.. ಎಂದು ಅಭಿಮಾನಿಗಳು ಕೂಗುತ್ತಿದ್ದರು. ರಜನಿ ಆರೋಗ್ಯದಲ್ಲಿ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಬಳಿಕ ಸೂಪರ್ ಸ್ಟಾರ್ ನೋಡಿ ಸಂತಸ ಪಟ್ಟರು.

  English summary
  Super star Rajinikanth heads to Kolkata complete the final schedule of Annaatthe.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X