For Quick Alerts
  ALLOW NOTIFICATIONS  
  For Daily Alerts

  ಸೂಪರ್‌ಸ್ಟಾರ್ ರಜನಿಕಾಂತ್ ಕಾಲು ಮುಟ್ಟಿ ನಮಸ್ಕರಿಸಿದ ಆರ್. ಮಾಧವನ್!

  |

  ಭಾರತೀಯ ಚಿತ್ರರಂಗದ ಅದ್ಬುತ ನಟರಲ್ಲಿ ಇಬ್ಬರು ಆರ್.ಮಾಧವ್. ಇತ್ತೀಚೆಗೆ ಮಾಧವನ್ ನಟಿಸಿದ ಸಿನಿಮಾದ 'ರಾಕೆಟ್ರಿ' ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಬಾಹ್ಯಾಕಾಶ ವಿಜ್ಞಾನಿಯಾಗಿದ್ದ ನಂಬಿ ನಾರಾಯಣ್ ಅವರ ಚರಿತ್ರೆಯನ್ನು ಆಧರಿಸಿ ಈ ಸಿನಿಮಾವನ್ನು ಮಾಡಲಾಗಿತ್ತು.

  ಆರ್ ಮಾಧವನ್ ಹಾಗೂ ವಿಜ್ಞಾನಿ ನಂಬಿ ನಾರಾಯಣ್ ಇಬ್ಬರೂ ಸೂಪರ್‌ಸ್ಟಾರ್ ರಜನಿಕಾಂತ್‌ರನ್ನು ಭೇಟಿ ಮಾಡಿದ್ದರು. ಇದೇ ವಿಡಿಯೋ ಹಾಗೂ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ 'ರಾಕೆಟ್ರಿ' ಸಿನಿಮಾ ಬಾಕ್ಸಾಫೀಸ್‌ನಲ್ಲೂ ಉತ್ತಮ ಗಳಿಕೆಯನ್ನು ಕಂಡಿತ್ತು.

  ಆರ್ ಮಾಧವನ್ ನಿರ್ಮಾಣ ಮಾಡಿ, ನಟಿಸಿದ್ದ ಸಿನಿಮಾ 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಗೆದ್ದಿದೆ. ಇದೇ ಖುಷಿಯಲ್ಲಿರುವಾಗಲೇ ಸೂಪರ್‌ಸ್ಟಾರ್ ರಜನಿಕಾಂತ್‌ರನ್ನು ಭೇಟಿ ಮಾಡುವ ಅವಕಾಶ ಕೂಡ ಸಿಕ್ಕಿದೆ. ಅಷ್ಟಕ್ಕೂ ಆರ್ ಮಾಧವನ್ ಹಾಗೂ ಬಾಹ್ಯಕಾಶ ವಿಜ್ಞಾನಿ ನಂಬಿ ನಾರಾಯಣ್ ಸೂಪರ್‌ಸ್ಟಾರ್ ಭೇಟಿಯಾಗಿದ್ದೇಕೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

  ಮಾಧವನ್ ಹಾಗೂ ರಜನಿ ಭೇಟಿ

  ಮಾಧವನ್ ಹಾಗೂ ರಜನಿ ಭೇಟಿ

  ಆರ್ . ಮಾಧವನ್ ಹಾಗೂ ಬಾಹ್ಯಕಾಶ ವಿಜ್ಞಾನಿ ನಂಬಿ ನಾರಾಯಣ್ ಇಬ್ಬರೂ ರಜನಿಕಾಂತ್ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸೂಪರ್‌ಸ್ಟಾರ್ ರಜನಿಕಾಂತ್ ಇಬ್ಬರೂ ನಟರನ್ನುಮನೆಗೆ ಆಹ್ವಾನಿಸಿ, ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಈ ಅಮೂಲ್ಯ ಕ್ಷಣಗಳ ವಿಡಿಯೋ ಹಾಗೂ ಫೋಟೊಗಳನ್ನು ಸ್ವತ: 'ರಾಕೆಟ್ರಿ' ಸಿನಿಮಾದ ಹೀರೊ ಆರ್.ಮಾಧವನ್ ಹಂಚಿಕೊಂಡಿದ್ದಾರೆ. ಅಲ್ಲದೆ ರಜನಿಕಾಂತ್ ಬಗ್ಗೆ ಬರೆದುಕೊಂಡಿದ್ದಾರೆ.

  ಆರ್ ಮಾಧವನ್ ಹೇಳಿದ್ದೇನು?

  ಆರ್ ಮಾಧವನ್ ಹೇಳಿದ್ದೇನು?

  ರಜನಿಕಾಂತ್ ಇಬ್ಬರಿಗೂ ಸನ್ಮಾನ ಮಾಡಿದ ವಿಡಿಯೋ ಹಾಗೂ ಫೋಟೊಗಳನ್ನು ಆರ್ ಮಾಧನವನ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. " ಲೆಜೆಂಡ್ ಹಾಗೂ ಸಿನಿಮಾ ಏಕೈಕ ಮೇರು ನಟನ ಮುಂದೆ ಇನ್ನೊಬ್ಬ ಲೆಜೆಂಡ್‌ ಮುಂದೆ ಆಶೀರ್ವಾದ ಪಡೆದಿದ್ದೇನೆ. ಈ ಕ್ಷಣಗಳು ಸದಾ ಕಾಲ ನನ್ನ ನೆನಪಿನಲ್ಲಿ ಉಳಿಯುತ್ತದೆ. ನಿಮ್ಮ ಮಾತು ಹಾಗೂ ವಾತ್ಸಲ್ಯಕ್ಕೆ ಧನ್ಯವಾದಗಳು. ಪ್ರೇರಣೆ ನೀಡುವ ನಿಮ್ಮ ಮಾತುಗಳು ನಮ್ಮನ್ನು ಸಂಪೂರ್ಣವಾಗಿ ಪುನರ್ಯೌವನಗೊಳಿಸಿದೆ " ಎಂದು ಬರೆದುಕೊಂಡಿದ್ದಾರೆ.

  ರಜನಿ ಕಾಲಿಗೆ ಬಿದ್ದ ಮಾಧನವನ್

  ಮನೆಗೆ ಭೇಟಿ ನೀಡಿದ್ದ ಮಾಧವನ್ ಹಾಗೂ ನಂಬಿ ನಾರಾಯಣ್ ಅವರನ್ನು ರಜನಿಕಾಂತ್ ಶಾಲು ನೀಡಿ ಗೌರವಿಸಿದ್ದರು. ಇದೇ ವೇಳೆ ಮಾಧವನ್ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ಈ ವಿಡಿಯೋವನ್ನು ಸ್ವತ: ಮಾಧವನ್ ಶೇರ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  Recommended Video

  Kote Prabhakar | 'ಓಂ' ಚಿತ್ರದ ನಂತ್ರ ನನಗೆ ಕೋಟೆ ಅಂತ ಹೆಸರಿಟ್ಟಿದ್ದೇ ಉಪೇಂದ್ರ | Upendra | OM
  ರಾಕೆಟ್ರಿ ಇಷ್ಟ ಪಟ್ಟಿದ್ದ ರಜನಿ

  ರಾಕೆಟ್ರಿ ಇಷ್ಟ ಪಟ್ಟಿದ್ದ ರಜನಿ

  'ರಾಕೆಟ್ರಿ' ಸಿನಿಮಾವನ್ನು ಆರ್. ಮಾಧವನ್ ಅವರೇ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ. ಇದರಲ್ಲಿ ಇಸ್ರೋದ ಮಾಜಿ ವಿಜ್ಞಾನಿ ನಂಬಿ ನಾರಾಯಣ್ ಅವರ ಬದುಕನ್ನು ತೆರೆಮೇಲೆ ತರಲಾಗಿತ್ತು. 1994ರಲ್ಲಿ ನಂಬಿ ನಾರಾಯಣ್ ಅವರ ಮೇಲೆ ಸುಳ್ಳು ಆರೋಪ ಹೊರಿಸಲಾಗಿತ್ತು. ಈ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. " ದಿ ರಾಕೆಟ್ರಿ ನೋಡಲೇ ಬೇಕಾದ ಸಿನಿಮಾ. ಚೊಚ್ಚಲ ನಿರ್ದೇಶನದಲ್ಲಿಯೇ ಮಾಧವನ್ ಅನುಭವಿ ನಿರ್ದೇಶಕರಿಗೆ ಸಮಾ ಎಂದು ತೋರಿಸಿದ್ದಾರೆ.

  English summary
  Rajinikanth Honours Rocketry Starrer R Madhavan And Nambi Narayanan On Post Movie Success, Know More.
  Sunday, July 31, 2022, 18:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X