ಪ್ರತಿದಿನ 14 ಗಂಟೆ ಕೆಲಸ ಮಾಡ್ತಿದ್ದಾರೆ ಸೂಪರ್ ಸ್ಟಾರ್ ರಜನಿ
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಅಣ್ಣಾತ್ತೆ ಸಿನಿಮಾದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಸಿರುತೈ ಶಿವ ನಿರ್ದೇಶನದ ಈ ಚಿತ್ರದಲ್ಲಿ ರಜನಿ ಜೊತೆ ಕೀರ್ತಿ ಸುರೇಶ್, ಖುಷ್ಬೂ, ಮೀನಾ, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.
ಒಂದು ಕಡೆ ಸಿನಿಮಾ ಮಾಡ್ತಿರುವ ತಲೈವಾ ಸದ್ಯದಲ್ಲೇ ರಾಜಕೀಯ ಪಕ್ಷ ಘೋಷಣೆ ಮಾಡಲಿದ್ದಾರೆ. ಸ್ವತಃ ರಜನಿ ಹೇಳಿರುವಂತೆ ಡಿಸೆಂಬರ್ 31 ರಂದು ತಮ್ಮ ಪಕ್ಷವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.
ಡಿಸೆಂಬರ್ 12 ರಂದು 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ರಜನಿ, ಪ್ರತಿದಿನ 14 ಗಂಟೆ ಕೆಲಸ ಮಾಡ್ತಿದ್ದಾರಂತೆ. ಬೆಳಗ್ಗೆ 7 ಗಂಟೆಗೆ ಆರಂಭಿಸಿದರೆ ರಾತ್ರಿ 9 ಗಂಟೆವರೆಗೂ ರಜನಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ.

ಸಿನಿಮಾ ಜೊತೆಗೆ ಜೊತೆಗೆ ರಾಜಕೀಯವಾಗಿಯೂ ತಲೈವಾ ಬ್ಯುಸಿಯಾಗಿದ್ದು, ಪಕ್ಷವನ್ನು ಘೋಷಿಸುವ ಸಲುವಾಗಿ ತುಸು ಹೆಚ್ಚು ಕೆಲಸದಲ್ಲಿ ಮಗ್ನರಾಗಿದ್ದಾರೆ.
2021ರಲ್ಲಿ ತಮಿಳುನಾಡಿನ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಜನಿಕಾಂತ್ ಸ್ಪರ್ಧೆ ಮಾಡಲು ಎಲ್ಲಾ ತಯಾರಿ ನಡೆಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಅಣ್ಣಾತ್ತೆ ಸಿನಿಮಾ ರಜನಿಯ ಕೊನೆ ಸಿನಿಮಾ ಆದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.


Click it and Unblock the Notifications











