ತಮ್ಮ ಹೆಸರು, ಚಿತ್ರ, ಧ್ವನಿ ಬಳಸುವವರಿಗೆ ರಜನೀಕಾಂತ್ ಎಚ್ಚರಿಕೆ!

By ಫಿಲ್ಮಿಬೀಟ್ ಡೆಸ್ಕ್

ನಟ ರಜನೀಕಾಂತ್ ಭಾರತದ ಸೂಪರ್ ಸ್ಟಾರ್. ಅವರ ಹೆಸರಿಗೆ, ಅವರ ಚಿತ್ರಕ್ಕೆ, ಸ್ವತಃ ಅವರಿಗೆ ಕೋಟ್ಯಂತರ ರುಪಾಯಿ ಮೌಲ್ಯವಿದೆ. ರಜನೀಕಾಂತ್ ಹೆಸರೊಂದನ್ನಷ್ಟೆ ಬಳಸಿಕೊಂಡು ಕೋಟ್ಯಂತರ ರುಪಾಯಿ ವ್ಯವಹಾರ ಮಾಡುವ ಸಂಸ್ಥೆಗಳಿವೆ.

ತಮಿಳುನಾಡು ಮಾತ್ರವೇ ಅಲ್ಲದೆ ದೇಶದ ಹಲವು ನಗರಗಳಲ್ಲಿ ರಜನೀಕಾಂತ್‌ರ ಹೆಸರನ್ನು, ಚಿತ್ರವನ್ನು ಸಣ್ಣ ಪುಟ್ಟ ವಸ್ತುಗಳ ಜಾಹೀರಾತುಗಳಿಗೆ ಬಳಸಿಕೊಳ್ಳಲಾಗುತ್ತದೆ. ಕೆಲವು ದೊಡ್ಡ ದೊಡ್ಡ ಸಂಸ್ಥೆಗಳು ಸಹ ರಜನೀಕಾಂತ್‌ರ ಚಿತ್ರವನ್ನು, ಸ್ಟೈಲ್ ಅನ್ನು ತಮ್ಮ ಉತ್ಪನ್ನಗಳ ಜಾಹೀರಾತುಗಳಿಗೆ ಬಳಸಿಕೊಳ್ಳುತ್ತಾರೆ. ಆದರೆ ಇನ್ನುಮುಂದೆ ಹೀಗೆ ಮಾಡುವಂತಿಲ್ಲ.

ನಟ ರಜನೀಕಾಂತ್ ಇದೀಗ ಬಹಿರಂಗ ನೊಟೀಸ್ ಒಂದನ್ನು ಹೊರಡಿಸಿದ್ದು, ಇನ್ನು ಮುಂದೆ ಯಾರೇ ಆಗಲಿ ರಜನೀಕಾಂತ್ ಚಿತ್ರವನ್ನು, ಹೆಸರನ್ನು, ಮ್ಯಾನರಿಸಂ ಅನ್ನು, ಸ್ಟೈಲ್ ಅನ್ನು ಅಥವಾ ರಜನೀಕಾಂತ್‌ರ ನಕಲನ್ನು ಸಹ ವ್ಯಾಪಾರದ ಉದ್ದೇಶದಿಂದ ಅಥವಾ ಜಾಹೀರಾತಿನ ಉದ್ದೇಶದಿಂದ ಬಳಸಿಕೊಳ್ಳುವಂತಿಲ್ಲ!

ವಾಣಿಜ್ಯ ಬಳಕೆಗೆ ಅವಕಾಶವಿಲ್ಲ

ವಾಣಿಜ್ಯ ಬಳಕೆಗೆ ಅವಕಾಶವಿಲ್ಲ

ರಜನೀಕಾಂತ್ ಅವರು ಹೊರಡಿಸಿರುವ ಬಹಿರಂಗ ನೊಟೀಸ್ ಪ್ರಕಾರ, ರಜನೀಕಾಂತ್‌ ಅವರ ಚಿತ್ರ, ವಿಡಿಯೋ, ಧ್ವನಿ, ಸ್ಟೈಲ್, ಮ್ಯಾನರಿಸಂ ಎಲ್ಲರದ ವಾಣಿಜ್ಯ ಬಳಕೆಯ ಅಧಿಕಾರ ಕೇವಲ ರಜನೀಕಾಂತ್ ಅವರಿಗಷ್ಟೆ ಇದ್ದು, ಅವರ ಹೊರತಾಗಿ ಇನ್ಯಾರೂ ಸಹ ರಜನೀಕಾಂತ್‌ರ ಚಿತ್ರ, ಸ್ಟೈಲ್, ಧ್ವನಿ, ಮ್ಯಾನರಿಸಂಗಳನ್ನು ಬಳಸಿಕೊಳ್ಳುವಂತಿಲ್ಲ ಎಂದು ಸಾರ್ವಜನಿಕ ನೊಟೀಸ್‌ನಲ್ಲಿ ಹೇಳಲಾಗಿದೆ.

ಗೌರವಕ್ಕೆ ಧಕ್ಕೆ ಆಗುವುದನ್ನು ಸಹಿಸಲ್ಲ: ರಜನೀಕಾಂತ್

ಗೌರವಕ್ಕೆ ಧಕ್ಕೆ ಆಗುವುದನ್ನು ಸಹಿಸಲ್ಲ: ರಜನೀಕಾಂತ್

''ರಜನೀಕಾಂತ್‌ರ ನಟನೆ, ಸ್ಟೈಲ್ ಮತ್ತು ವ್ಯಕ್ತಿತ್ವ ಅವರನ್ನು ಸೂಪರ್ ಸ್ಟಾರ್‌ ಅನ್ನಾಗಿಸಿದೆ. ಕೋಟ್ಯಂತರ ಮಂದಿ ಅಭಿಮಾನಿಗಳು ಅವರನ್ನು ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ. ಚಿತ್ರರಂಗದಲ್ಲಿ ಮತ್ತು ಹೊರಗಿನ ಸಮಾಜದಲ್ಲಿಯೂ ಸಹ ರಜನೀಕಾಂತ್‌ಗೆ ಬಹಳ ದೊಡ್ಡ ಗೌರವ, ಪ್ರೀತಿ ಇದೆ. ಈ ಗೌರವಕ್ಕೆ ಧಕ್ಕೆ ಆಗುವ ಯಾವುದೇ ಕಾರ್ಯವನ್ನು ರಜನೀಕಾಂತ್‌ ಅವರು ಸಹಿಸಿಕೊಳ್ಳುವುದಿಲ್ಲ'' ಎಂದು ನೊಟೀಸ್‌ನಲ್ಲಿ ಹೇಳಲಾಗಿದೆ.

ಅಮಿತಾಬ್ ಬಚ್ಚನ್‌ ಸಹ ನೊಟೀಸ್ ಹೊರಿಡಿಸಿದ್ದರು

ಅಮಿತಾಬ್ ಬಚ್ಚನ್‌ ಸಹ ನೊಟೀಸ್ ಹೊರಿಡಿಸಿದ್ದರು

ರಜನೀಕಾಂತ್ ಹೊರಡಿಸಿರುವ ಬಹಿರಂಗ ನೊಟೀಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಜನೀಕಾಂತ್‌ ಮಾತ್ರವೇ ಅಲ್ಲದೆ ನಟ ಅಮಿತಾಬ್ ಬಚ್ಚನ್ ಸೇರಿದಂತೆ ಇನ್ನೂ ಹಲವು ಸೂಪರ್ ಸ್ಟಾರ್‌ಗಳು ತಮ್ಮ ಚಿತ್ರ, ಮ್ಯಾನರಿಸಂ, ಧ್ವನಿ ಎಲ್ಲದರ ವಾಣಿಜ್ಯ ಬಳಕೆಯ ಹಕ್ಕನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ನೀರಿನ ಪೈಪ್‌ನ ಕಂಪೆನಿಯೊಂದು ತನ್ನ ಪೈಪ್‌ಗಳ ಜಾಹೀರಾತಿಗೆ ರಜನೀಕಾಂತ್‌ರ ಮ್ಯಾನರಿಸಂ ಅನ್ನು ಬಳಸಿಕೊಂಡಿದೆ. ಅವೆಷ್ಟೊ ಬೀಡಿ ಸಂಸ್ಥೆಗಳು ತಮ್ಮ ಉತ್ಪನ್ನಗಳ ಮೇಲೆ ರಜನೀಕಾಂತ್ ಚಿತ್ರ ಪ್ರಿಂಟ್ ಹಾಕಿವೆ.

'ಜೈಲರ್' ಸಿನಿಮಾನಲ್ಲಿ ರಜನೀಕಾಂತ್

'ಜೈಲರ್' ಸಿನಿಮಾನಲ್ಲಿ ರಜನೀಕಾಂತ್

ರಜನೀಕಾಂತ್ ಸಿನಿಮಾಗಳ ವಿಷಯಕ್ಕೆ ಬರುವುದಾದರೆ, ರಜನೀ ನಟಿಸಿದ್ದ 'ಅಣ್ಣಾತೆ' ಸಿನಿಮಾ 2021 ರಲ್ಲಿ ಬಿಡುಗಡೆ ಆಗಿ ಸಾಧಾರಣ ಹಿಟ್ ಎನಿಸಿಕೊಂಡಿತ್ತು. ಇದೀಗ ಜೈಲರ್ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, 'ಜೈಲರ್‌' ನಲ್ಲಿ ಕನ್ನಡದ ಶಿವರಾಜ್ ಕುಮಾರ್, ಮಲಯಾಳಂನ ಮೋಹನ್‌ಲಾಲ್, ಬಾಲಿವುಡ್‌ನ ಜಾಕಿ ಶ್ರಾಫ್ ಇನ್ನೂ ಹಲವರು ನಟಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ 'ಜೈಲರ್' ಸಿನಿಮಾ ಬಿಡುಗಡೆ ಆಗಲಿದೆ.

More from Filmibeat

English summary
Actor Rajinikanth issues public notice over infringements of rights warns legal action. Along with Amitabh Bachchan and other star actors also issued public notice over infringements of rights.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X