ಮಧ್ಯರಾತ್ರಿ ಅಮೆರಿಕಾ ತೆರಳಿದ ಸೂಪರ್‌ಸ್ಟಾರ್ ರಜನಿಕಾಂತ್

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಪತ್ನಿ ಲತಾ ಶುಕ್ರವಾರ (ಜೂನ್ 18) ಮಧ್ಯರಾತ್ರಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಆರೋಗ್ಯ ತಪಾಸಣೆಗಾಗಿ ಯುಎಸ್‌ ತೆರಳುತ್ತಿರುವ ರಜನಿಕಾಂತ್ ಚೆನ್ನೈನಿಂದ ದೋಹಾ ಮಾರ್ಗವಾಗಿ ಅಮೆರಿಕಾ ತಲುಪಲಿದ್ದಾರೆ ಎಂದು ವರದಿಯಾಗಿದೆ.

ರಜನಿಕಾಂತ್ ಮತ್ತು ಲತಾ ರಜನಿಕಾಂತ್ ಇಬ್ಬರು ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈದ್ಯರ ಬಳಿ ಅನುಮತಿ ಪಡೆದುಕೊಂಡು ಅಮೆರಿಕಾ ತೆರಳಿರುವ ರಜನಿಕಾಂತ್ ದಂಪತಿ, ಚಿಕಿತ್ಸೆ ಬಳಿಕವೂ ಸ್ವಲ್ಪ ದಿನಗಳ ಕಾಲ ಅಲ್ಲೆ ಉಳಿಯಲಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೂ ಮುಂಚೆ ಕೇಂದ್ರ ಸರ್ಕಾರದ ಬಳಿ ರಜನಿ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ.

Rajinikanth Leaves for America Today for Routine Health Check up

ಇನ್ನು ರಜನಿಕಾಂತ್ ಮಗಳು ಮತ್ತು ಅಳಿಯ ಧನುಶ್ ಈಗಾಗಲೇ ಅಮೆರಿಕಾದಲ್ಲಿದ್ದಾರೆ. ಹಾಲಿವುಡ್ ಚಿತ್ರವೊಂದರ ಚಿತ್ರೀಕರಣಕ್ಕೆ ಧನುಶ್ ಯುಎಸ್‌ಗೆ ತೆರಳಿದ್ದು, ಈಗ ತಲೈವಾ ಸಹ ಅಮೆರಿಕಾ ಹಾರಿದ್ದಾರೆ.

ಅಣ್ಣಾತ್ತೆ ಚಿತ್ರೀಕರಣದಲ್ಲಿ ರಜನಿಕಾಂತ್

ಅಂದ್ಹಾಗೆ, ರಜನಿಕಾಂತ್ ಅಣ್ಣಾತ್ತೆ ಸಿನಿಮಾದ ಚಿತ್ರೀಕರಣದಲ್ಲಿದ್ದರು. ಸಿರುತೈ ಶಿವ ನಿರ್ದೇಶನದಲ್ಲಿ ಈ ಚಿತ್ರದ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆದಿತ್ತು. ಚಿತ್ರೀಕರಣ ಮುಗಿಸಿ ಚೆನ್ನೈಗೆ ಹಿಂತಿರುಗಿದ್ದ ರಜನಿಕಾಂತ್ ಈಗ ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ಹಹೋಗಿದ್ದಾರೆ.

Rajinikanth Leaves for America Today for Routine Health Check up

ರಜನಿಕಾಂತ್ ಜೊತೆ ನಯನತಾರ, ಕೀರ್ತಿ ಸುರೇಶ್, ಹಿರಿಯ ನಟ ಮೀನಾ, ಖುಷ್ಬೂ, ಪ್ರಕಾಶ್ ರಾಜ್, ಸೂರಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ಈ ಸಿನಿಮಾ ನಿರ್ಮಿಸುತ್ತಿದ್ದು, ಡಿ ಇಮ್ಮನ್ ಸಂಗೀತ ಇದೆ. ಈಗಾಗಲೇ ಪ್ರಕಟಿಸಿರುವಂತೆ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 4ಕ್ಕೆ ಥಿಯೇಟರ್‌ಗೆ ಬರಲಿದೆ.

Recommended Video

ಒಂದೇ ಮಾರ್ಗದಲ್ಲಿ ನಡೆಯಲು ಮುಂದಾದ ಜೋಡೆತ್ತು | Filmibeat Kannada

More from Filmibeat

English summary
Superstar Rajinikanth Leaves for America earlier Today for Routine Health Check up.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X