For Quick Alerts
  ALLOW NOTIFICATIONS  
  For Daily Alerts

  ತಲೈವ ಹಾಗೆ ಸ್ಟಂಟ್ ಮಾಡಲು ಹೋಗಿ ನಗೆಪಾಟಲಿಗೆ ಈಡಾದ ನಕಲಿ ರಜನಿಕಾಂತ್

  |

  ಸೂಪರ್ ಸ್ಟಾರ್ ರಜನಿಕಾಂತ್ ಗೆ ರಜಿನಿಯೇ ಸರಿಸಾಟಿ. ಅವರ ಸ್ಟೈಲ್, ವಾಕ್, ಟಾಕ್ ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ದೇಶ ವಿದೇಶಗಳಲ್ಲಿ ಸೂಪರ್ ಸ್ಟಾರ್ ನನ್ನು ಆರಾಧಿಸುವ, ಪೂಜಿಸುವ ಅಪಾರ ಅಭಿಮಾನಿಗಳಿದ್ದಾರೆ. ರಜನಿಕಾಂತ್ ಸ್ಟೈಲ್ ಕಾಪಿ ಮಾಡುವ ಅನೇಕ ಅಭಿಮಾನಿಗಳನ್ನು ನೋಡಿರುತ್ತೀರಿ. ಸೂಪರ್ ಸ್ಟಾರ್ ಹಾಗೆ ಉಡುಗೆ ತೊಟ್ಟು, ಅವರ ಮಾತನ್ನು ಅನುಕರಣೆ ಮಾಡುತ್ತಿರುತ್ತಾರೆ.

  ಏನೆ ಮಾಡಿದರು ಸೂಪರ್ ಸ್ಟಾರ್ ವಿಭಿನ್ನ ಸ್ಟೈಲ್ ಅನ್ನು ಅನುಕರಣೆ ಮಾಡಲು ಯಾರಿಂದನು ಸಾಧ್ಯವಿಲ್ಲ. ಇತ್ತೀಚಿಗೆ ರಜನಿಕಾಂತ್ ಹಾಗೆ ಕಾಣಿಸುವ ವ್ಯಕ್ತಿಯೊಬ್ಬ ಸಾರ್ವಜನಿಕ ಸಭೆಯಲ್ಲಿ ತಲೈವ ಹಾಗೆ ಸ್ಟಂಟ್ ಮಾಡಲು ಹೋಗಿ ನಗೆಪಾಟಲಿಗೆ ಈಡಾಗಿದ್ದಾರೆ.

  ರಜನಿಕಾಂತ್ ಹಾಗೆ ವಾಕ್, ಸ್ಟೈಲ್ ಮಾಡಿ ಜನರನ್ನು ರಂಜಿಸುತ್ತಿದ್ದ ನಕಲಿ ರಜನಿಕಾಂತ್ ಕೊನೆಯಲ್ಲಿ ಸ್ಟಂಟ್ ಮಾಡಲು ಹೋಗಿ ಕೆಳಗೆ ಬಿದ್ದರು. ಕುರ್ಚಿಯಿಂದ ಸೂಪರ್ ಸ್ಟಾರ್ ಸ್ಟೈಲ್ ನಲ್ಲಿ ಸ್ಟಂಟ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಕುರ್ಚಿಯಲ್ಲೇ ಕಾಲು ಸಿಲುಕಿಕೊಂಡು ಕೆಳಗೆ ಬಿದ್ದರು. ಬಳಿಕ ಅಲ್ಲಿ ನೆರೆದಿದ್ದ ಜನ ಆ ವ್ಯಕ್ತಿಯನ್ನು ಮೇಲೆತ್ತಿದ್ದರು.

  ಅದೃಷ್ಟವಶಾತ್ ನಕಲಿ ರಜನಿಕಾಂತ್ ಗೆ ಯಾವುದೇ ಗಾಯಗಳಾಗಿದೆ ಪಾರಾದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳು ವಿಡಿಯೋ ಶೇರ್ ಮಾಡಿ, ರಜನಿಕಾಂತ್ ಸ್ಟೈಲ್, ಸ್ಟಂಟ್ ಕಾಪಿ ಮಾಡಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  Dr.ರಾಜ್ ಅಪರೂಪದ ವಿಡಿಯೋ: 100 ಚಿತ್ರ ಪೂರೈಸಿದ್ದಕ್ಕೆ ಸಂಭ್ರಮ | Filmibeat Kannada

  ಅಂದಹಾಗೆ ಸೂಪರ್ ಸ್ಟಾರ್ ರಜನಿಕಾಂತ್ ಹೆಚ್ಚಿನ ಆರೋಗ್ಯ ತಪಾಸಣೆಗೆಂದು ಯುಎಸ್ ಗೆ ತೆರಳಿದ್ದಾರೆ. ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದು ಜೂನ್ 19ರಂದು ರಜನಿಕಾಂತ್ ಪತ್ನಿ ಲತಾ ಮತ್ತು ಮಗಳು ಐಶ್ವರ್ಯಾ ಜೊತೆ ಅಮೆರಿಕಗೆ ತೆರಳಿದ್ದರು. ಆರೋಗ್ಯ ತಪಾಸಣೆ ಮುಗಿಸಿದ ಸೂಪರ್ ಸ್ಟಾರ್ ನಿನ್ನ ಜುಲೈ 8ರಂದು ಭಾರತಕ್ಕೆ ವಾಪಸ್ ಆಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಸೂಪರ್ ಸ್ಟಾರ್ ವಾಪಸ್ ಆಗಿರುವ ಬಗ್ಗೆ ಮಾಹಿತಿ ಇನ್ನು ಬಹಿರಂಗವಾಗಿಲ್ಲ.

  English summary
  Super star Rajinikanth look alike tries to pull off stunt on stage, failed Miserably.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X