twitter
    For Quick Alerts
    ALLOW NOTIFICATIONS  
    For Daily Alerts

    ಕಮಲ್ ನಂತರ ಕೊರೊನಾ ಚಿಕಿತ್ಸೆಗೆ ಕಲ್ಯಾಣಮಂಟಪ ನೀಡಲು ಮುಂದಾದ ರಜನಿಕಾಂತ್

    |

    ದೇಶದಾದ್ಯಂತ ಕೊರೊನಾ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಅದರಲ್ಲೂ ತಮಿಳು ನಾಡಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಚಿಕಿತ್ಸ ಕೊಠಡಿಗಳ ಅಗತ್ಯವೂ ಅಷ್ಟೆ ಇದೆ. ಅವಶ್ಯಕತೆಯನ್ನು ನೀಗಿಸಲು ಸೂಪರ್ ಸ್ಟಾರ್ ರಜನಿಕಾಂತ್ ಮುಂದಾಗಿದ್ದಾರೆ.

    ಕೊರೊನಾ ವಿರುದ್ಧದ ಈ ಸಂಘರ್ಷದಲ್ಲಿ ಸಿನಿಮಾ ಉದ್ಯಮವು ಸರ್ಕಾರಕ್ಕೆ ದೊಡ್ಡ ನೆರವನ್ನೇ ನೀಡುತ್ತಿದೆ. ನಟ-ನಟಿಯರು ದೊಡ್ಡ ಮೊತ್ತದ ಹಣಕಾಸಿನ ನೆರವನ್ನು ಸರ್ಕಾರಗಳಿಗೆ ಘೋಷಿಸಿದ್ದಾರೆ. ಬಾಲಿವುಡ್ ಸೇರಿದಂತೆ ದೇಶದ ಬಹುತೇಕ ಎಲ್ಲಾ ಸಿನಿರಂಗಗಳಲ್ಲಿಯೂ ನಟ-ನಟಿಯರು ಬರಪೂರ ನೆರವನ್ನು ಸರ್ಕಾರಕ್ಕೆ ನೀಡಿದ್ದಾರೆ. ಹಣಕಾಸಿನ ನೆರವಿನ ಜೊತೆಗೆ ಕೊರೊನಾ ರೋಗಿಗಳ ಚಿಕಿತ್ಸೆಗೆ ತಮ್ಮ ಕಟ್ಟಡವನ್ನು ಬಿಟ್ಟುಕೊಡುತ್ತಿದ್ದಾರೆ. ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ಸಹ ಕಲ್ಯಾಣ ಮಂಟಪ ಕೊಡಲು ಮುಂದಾಗಿದ್ದಾರೆ. ಮುಂದೆ ಓದಿ..

    ಕೊರೊನಾ ರೋಗಿಗಳ ಉಪಚಾರಕ್ಕೆ ಐಶಾರಾಮಿ ಹೋಟೆಲ್ ಬಿಟ್ಟುಕೊಟ್ಟ ಖ್ಯಾತ ವಿಲನ್ಕೊರೊನಾ ರೋಗಿಗಳ ಉಪಚಾರಕ್ಕೆ ಐಶಾರಾಮಿ ಹೋಟೆಲ್ ಬಿಟ್ಟುಕೊಟ್ಟ ಖ್ಯಾತ ವಿಲನ್

    ಕಲ್ಯಾಣ ಮಂಟಪ ನೀಡಲು ಮುಂದಾದ ಸೂಪರ್ ಸ್ಟಾರ್

    ಕಲ್ಯಾಣ ಮಂಟಪ ನೀಡಲು ಮುಂದಾದ ಸೂಪರ್ ಸ್ಟಾರ್

    ರಜನಿಕಾಂತ್ ಒಡೆತನದ ಚೆನ್ನೈನ ಕೋದಂಬಕಂನಲ್ಲಿರುವ ಶ್ರೀ ರಘವೇಂದ್ರ ಕಲ್ಯಾಣ ಮಂಟಪವನ್ನು ಕೊರೊನಾ ಐಸೋಲೇಶನ್ ಚಿಕಿತ್ಸೆಗೆ ನೀಡಲು ಮುಂದಾಗಿದ್ದಾರೆ. ಈಗಾಗಲೆ ಈ ಕುರಿತು ತಮಿಳುನಾಡು ಮುಂಖ್ಯಮಂತ್ರಿಗೆ ಪತ್ರ ಬರೆದಿದ್ದಾರಂತೆ.

    ಈ ಹಿಂದೆ ನಿರಾಶ್ರಿತರಿಗೆ ನೀಡಿದ್ದರು

    ಈ ಹಿಂದೆ ನಿರಾಶ್ರಿತರಿಗೆ ನೀಡಿದ್ದರು

    ರಜನಿಕಾಂತ್ ಕಲ್ಯಾಣ ಮಂಟಪ ನೀಡಲು ಮುಂದಾಗಿದ್ದು ಇದೆ ಮೊದಲೇನಲ್ಲ. ಕೆಲವರ್ಷಗಳ ಹಿಂದೆ ರಜನಿಕಾಂತ್ ಚೆನ್ನೈನ ನೆರೆಹಾವಳಿ ಸಂಭವಿಸಿದಗಲೂ ನಿರಾಶ್ರಿತರ ನೆರವಿಗೆ ದಾವಿಸಿದ್ದರು. ಸೂಪರ್ ಸ್ಟಾರ್ ಒಡೆತನದ ಕಲ್ಯಾಣ ಮಂಟಪವನ್ನು ನಿರಾಶ್ರಿತರಿಗೆ ಬಿಟ್ಟುಕೊಡುವ ಮೂಲಕ ಆಶ್ರಯ ಕೊಟ್ಟಿದ್ದರು. ಈಗ ಮತ್ತೆ ಕೊರೊನಾ ವಿರುದ್ಧ ಹೋರಾಟಕ್ಕೂ ಕಲ್ಯಾಣ ಮಂಟಪ ನೀಡಲು ಮುಂದಾಗಿದ್ದಾರೆ.

    ಪಕ್ಷದ ಕಚೇರಿ ನೀಡಲು ಮುಂದಾದ ಕಮಲ್ ಹಾಸನ್

    ಪಕ್ಷದ ಕಚೇರಿ ನೀಡಲು ಮುಂದಾದ ಕಮಲ್ ಹಾಸನ್

    ನಟ ಕಮಲ್ ಹಾಸನ್ ಸಹ ಕೊರೋನಾ ವಿರುದ್ಧ ಹೋರಾಟಕ್ಕೆ ತಮ್ಮ ಪಕ್ಷದ ಕಚೇರಿಯನ್ನು ಬಿಟ್ಟುಕೊಡಲು ಮುಂದಾಗಿದ್ದಾರೆ. ಚೆನ್ನೈನ ಎಲ್ಡಾಮ್ ರಸ್ತೆಯಲ್ಲಿರುವ ಕಮಲ್ ಹಾಸನ್ ಹಳೆಯ ಮನೆಯನ್ನೆ ಈಗ ಪಕ್ಷದ ಕಚೇರಿಯಾಗಿ ಪರಿವರ್ತಿಸಿಕೊಂಡಿದ್ದಾರೆ. ಈಗ ಅದೆ ಕಚೇರಿಯನ್ನು ಆಸ್ಪತ್ರೆಯನ್ನಾಗಿಸಿಕೊಂಡು ಕೊರೊನಾ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಬಹುದೆಂದು ಹೇಳಿದ್ದಾರೆ.

    ಐಶಾರಾಮಿ ಹೋಟೆಲ್ ಬಿಟ್ಟುಕೊಟ್ಟ ಸೂನು ಸೂದ್

    ಐಶಾರಾಮಿ ಹೋಟೆಲ್ ಬಿಟ್ಟುಕೊಟ್ಟ ಸೂನು ಸೂದ್

    ಸೋನು ಸೂದ್ ಅವರು ತಮ್ಮ ಒಡೆತನದ ಆರು ಅಂತಸ್ತಿನ ಐಶಾರಾಮಿ ಹೋಟೆಲ್ ಅನ್ನು ಕೊರೊನಾ ಪೀಡಿತರ ಉಪಚಾರ ಮಾಡುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ವಾಸ್ತವ್ಯಕ್ಕೆ ಬಿಟ್ಟುಕೊಡುವುದಾಗಿ ಹೇಳಿದ್ದಾರೆ. ''ಕೊರೊನಾ ವಿರುದ್ಧ ಹೋರಾಟದಲ್ಲಿ ಇದೊಂದು ನನ್ನ ಸಹಾಯ. ಕೊರೊನಾ ರೋಗಿಗಳನ್ನು ಉಪಚರಿಸಲು ಮಹಾರಾಷ್ಟ್ರದ ಹಲವುಕಡೆಗಳಿಂದ ವೈದ್ಯರು, ನರ್ಸ್‌ಗಳು, ಇತರ ವೈದ್ಯಕೀಯ ಸಿಬ್ಬಂದಿ ಮುಂಬೈಗೆ ಬಂದಿದ್ದಾರೆ, ಅವರಿಗೆ ವಿಶ್ರಮಿಸಲು, ತಂಗಲು ನನ್ನ ಹೋಟೆಲ್ ಅನ್ನು ಬಿಟ್ಟುಕೊಡಲಿಚ್ಛಿದ್ದೇನೆ, ಈ ಬಗ್ಗೆ ಸ್ಥಳೀಯ ಆಡಳಿತದೊಂದಿಗೆ ಮಾತನಾಡುತ್ತಿದ್ದೇನೆ' ಎಂದು ಸೋನು ಸೂದ್ ಹೇಳಿದ್ದಾರೆ.

    ರೋಗಿಗಳ ಉಪಚಾರಕ್ಕೆ ಕಚೇರಿ ಬಿಟ್ಟುಕೊಟ್ಟ ಶಾರುಖ್

    ರೋಗಿಗಳ ಉಪಚಾರಕ್ಕೆ ಕಚೇರಿ ಬಿಟ್ಟುಕೊಟ್ಟ ಶಾರುಖ್

    ಕೆಲವೇ ದಿನಗಳ ಹಿಂದೆ ಶಾರುಖ್ ಖಾನ್-ಗೌರಿ ಖಾನ್ ದಂಪತಿ ಹಣಕಾಸಿನ ನೆರವು, ಆಹಾರ, ದಿನಸಿ ಸಾಮಗ್ರಿಗಳು, ಆರೋಗ್ಯ ಸಲಕರಣೆಗಳ ನೆರವಿನ ಜೊತೆಗೆ ಕೊರೊನಾ ರೋಗಿಗಳನ್ನು ಉಪರಿಸಲು ತಮ್ಮ ನಾಲ್ಕಂತಸ್ತಿನ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆಗೆ ಬಿಟ್ಟುಕೊಟ್ಟಿದ್ದಾರೆ.

    English summary
    Actor Rajinikanth offers Raghavendra Mantapa for treating Corona patients.
    Saturday, April 11, 2020, 12:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X