"ದುಶ್ಚಟಗಳಿಗೆ ದಾಸನಾಗಿದ್ದೆ, ಆಕೆ ನನ್ನನ್ನು ಬದಲಿಸಿಬಿಟ್ಟಳು": ರಜನಿಕಾಂತ್

ಬೆಂಗಳೂರಿನಲ್ಲಿ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿರಾವ್ ಗಾಯಕ್‌ವಾಡ್ ಇಂದು ಸೂಪರ್ ಸ್ಟಾರ್ ರಜನಿಕಾಂತ್ ಆಗಿ ನಮ್ಮ ಕಣ್ಮುಂದೆ ನಿಂತಿದ್ದಾರೆ. ಪರಿಶ್ರಮದಿಂದ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ರಜನಿಕಾಂತ್ ಉತ್ತಮ ಉದಾಹರಣೆ. ಎಷ್ಟೇ ಎತ್ತರಕ್ಕೆ ಏರಿದರೂ ಅವರ ಸರಳ ಸಜ್ಜನಿಕೆಗೆ ಮಾರು ಹೋಗದವರಿಲ್ಲ.

ನೋಡಲು ಅಷ್ಟೇನು ಸುಂದರವಾಗಿ ಇರದ ಶಿವಾಜಿರಾವ್ ಗಾಯಕ್‌ವಾಡ್ ಹೀರೊ ಆಗುತ್ತಾರೆ, ಸೂಪರ್ ಸ್ಟಾರ್ ಆಗುತ್ತಾರೆ ಎಂದು ಯಾರು ಅಂದುಕೊಂಡಿರಲಿಲ್ಲ. ಖುದ್ದು ತಲೈವಾಗೂ ಈ ಬಗ್ಗೆ ಸುಳಿವು ಇರಲಿಲ್ಲ. ಸಣ್ಣ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗುರ್ತಿಸಿಕೊಂಡ ರಜನಿಕಾಂತ್ ಮುಂದೆ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದರು. ಕಾಲೇಜು ಮ್ಯಾಗಜೀನ್‌ಗಾಗಿ ಸಂದರ್ಶನ ಮಾಡಲು ಹೋಗಿದ್ದ ಹುಡುಗಿಯನ್ನೇ ರಜನಿಕಾಂತ್ ಕೈ ಹಿಡಿದರು. ಮೊದಲ ನೋಟದಲ್ಲೇ ಆಕೆಯನ್ನು ನೋಡಿ ಮನಸೋತಿದ್ದ ತಲೈವಾ ಸಂದರ್ಶನ ಮುಗಿಯುವ ಹೊತ್ತಿಗೆ ಮದುವೆ ಪ್ರಪೋಸಲ್ ಇಟ್ಟಿದ್ದರು.

ರಜನಿಕಾಂತ್‌ ಹಾಗೂ ಲತಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಅವರು ಕೂಡ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ವಯಸ್ಸು 70 ದಾಟಿದರೂ ರಜನಿಕಾಂತ್ ಇವತ್ತಿಗೂ ಕಾಲಿವುಡ್‌ನ ನಂಬರ್ ಒನ್ ಹೀರೊ ಆಗಿ ಮೆರೆಯುತ್ತಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೂಪರ್ ಸ್ಟಾರ್ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ತಮಗಿದ್ದ ದುಶ್ಚಟಗಳ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ.

ಮಡದಿ ಬಗ್ಗೆ ರಜನಿಕಾಂತ್ ಮಾತು

ಮಡದಿ ಬಗ್ಗೆ ರಜನಿಕಾಂತ್ ಮಾತು


ಸೂಪರ್ ಸ್ಟಾರ್ ರಜನಿಕಾಂತ್‌ಗೆ ತಮ್ಮ ಪತ್ನಿ ಅಂದ್ರೆ ಎಷ್ಟು ಇಷ್ಟ ಎನ್ನುವುದು ಗೊತ್ತೇಯಿದೆ. ಸಾಕಷ್ಟು ಸಂದರ್ಭಗಳಲ್ಲಿ ಅವರ ಬಗ್ಗೆ ಮಾತನಾಡಿದ್ದಾರೆ. ಆಕೆ ತಮ್ಮ ಬಾಳಿಗೆ ಬಂದ ಮೇಲೆ ಸಾಕಷ್ಟು ಬದಲಾವಣೆ ಆಯಿತು ಎಂದು ಕೂಡ ಹೇಳಿದ್ದಾರೆ. ನಿನ್ನೆ(ಜನವರಿ 26) ಕಾರ್ಯಕ್ರಮವೊಂದರಲ್ಲಿ ರಜನಿಕಾಂತ್ ಮತ್ತೊಮ್ಮೆ ಮಡದಿ ಬಗ್ಗೆ ಮಾತನಾಡಿದ್ದಾರೆ. "ಲತಾ ನನ್ನ ಜೀವನದಲ್ಲಿ ಪ್ರವೇಶ ಆದಮೇಲೆ ಬಹಳ ಬದಲಾವಣೆ ಆಯಿತು, ಮುಖ್ಯವಾಗಿ ನಾನು ಕ್ರಮಶಿಕ್ಷಣ ಕಲಿತೆ" ಎಂದಿದ್ದಾರೆ.

ದುಶ್ಚಟಗಳಿಗೆ ದಾಸನಾಗಿದ್ದೆ

ದುಶ್ಚಟಗಳಿಗೆ ದಾಸನಾಗಿದ್ದೆ

"ಬಸ್ ಕಂಡೆಕ್ಟರ್ ಆಗಿದ್ದಾಗ ನಾನು ಪ್ರತಿದಿನ ಮದ್ಯ ಸೇವಿಸುತ್ತಿದ್ದೆ. ಅದೆಷ್ಟು ಸಿಗರೇಟ್ ಸೇದುತ್ತಿದ್ದೆ ಎನ್ನುವುದರ ಲೆಕ್ಕವೇ ಇರುತ್ತಿರಲಿಲ್ಲ. ಬೆಳಗ್ಗೆ ಮಾಂಸಹಾರದೊಂದಿಗೆ ದಿನಚರಿ ಶುರುವಾಗುತ್ತಿತ್ತು. ದಿನಕ್ಕೆ 2 ಬಾರಿ ಮಾಂಸಾಹಾರ ತಪ್ಪುತ್ತಿರಲಿಲ್ಲ. ಸಸ್ಯಾಹಾರಿಗಳನ್ನು ಕಂಡರೆ ಬೇಸರ ಎನಿಸುತ್ತಿತ್ತು. ಆದರೆ ಇದು ಮೂರು ಕೂಡ ಹೆಚ್ಚಾದರೆ ಆರೋಗ್ಯಕ್ಕೆ ಒಳ್ಳೆಯದಲ್ಲ."

ಲತಾ ಪ್ರೀತಿ ನನ್ನನ್ನು ಬದಲಿಸಿತು

ಲತಾ ಪ್ರೀತಿ ನನ್ನನ್ನು ಬದಲಿಸಿತು

"ನನ್ನ ಪ್ರಕಾರ ಮದ್ಯ, ಸಿಗರೇಟ್, ಮಾಂಸ ಈ ಮೂರನ್ನು ಬಹಳ ಸಮಯದವರೆಗೂ ತೆಗೆದುಕೊಳ್ಳುತ್ತಿದ್ದರೆ 60 ವರ್ಷ ವಯಸ್ಸಿನ ನಂತರ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ನನ್ನ ಪತ್ನಿ ಲತಾ ತನ್ನ ಪ್ರೀತಿಯಿಂದ ಆ ದುಶ್ಚಟಗಳಿಗೆ ನನ್ನನ್ನು ದೂರ ಮಾಡಿದಳು. ಆಕೆಯಿಂದಲೇ ನಾನು ಈಗ ಕ್ರಮಶಿಕ್ಷಣದಿಂದ ಆರೋಗ್ಯವಾಗಿ ಜೀವನ ನಡೆಸುತ್ತಿದ್ದೇನೆ" ಎಂದು ಸೂಪರ್ ಸ್ಟಾರ್ ವಿವರಿಸಿದ್ದಾರೆ. ಪತ್ನಿ ಕುರಿತು ರಜನಿಕಾಂತ್ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

'ಜೈಲರ್' ಚಿತ್ರದಲ್ಲಿ ಸೂಪರ್ ಸ್ಟಾರ್

'ಜೈಲರ್' ಚಿತ್ರದಲ್ಲಿ ಸೂಪರ್ ಸ್ಟಾರ್

ಸದ್ಯ ರಜನಿಕಾಂತ್ 2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 'ಜೈಲರ್' ಚಿತ್ರದಲ್ಲಿ ಹೀರೊ ಆಗಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಮಗಳು ಐಶ್ವರ್ಯ ನಿರ್ದೇಶನದ 'ಲಾಲ್ ಸಲಾಂ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ವಿಷ್ಣು ವಿಶಾಲ್ ಈ ಚಿತ್ರದಲ್ಲಿ ಹೀರೊ ಆಗಿ ಮಿಂಚುತ್ತಿದ್ದಾರೆ. ಲೈಕಾ ಸಂಶ್ಥೆ ಚಿತ್ರಕ್ಕೆ ಬಂಡವಾಳ ಹೂಡಿದೆ.

More from Filmibeat

English summary
Rajinikanth Opens Up About His Addictions, and He Says my wife Latha's love changed me. Super Star Talked in 50th day celebrations of Y Gee Mahendran's play Event. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X