For Quick Alerts
  ALLOW NOTIFICATIONS  
  For Daily Alerts

  ನಯನತಾರಗೆ ರಜನಿಕಾಂತ್ ಕೊಟ್ಟ ಬಹುದೊಡ್ಡ ಮೆಚ್ಚುಗೆ ಇದು

  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ದರ್ಬಾರ್' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಎ ಆರ್ ಮುರುಗದಾಸ್ ನಿರ್ದೇಶನದ ಈ ಚಿತ್ರದಲ್ಲಿ ರಜನಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದು, ಇಂಡಸ್ಟ್ರಿಯಲ್ಲಿ ಸದ್ದು ಜೋರಾಗಿದೆ.

  ಸುಮಾರು ಎರಡು ದಶಕದ ಬಳಿಕ ತೆರೆಮೇಲೆ ತಲೈವಾ ಖಾಕಿ ತೊಟ್ಟಿರುವುದು ಈ ಚಿತ್ರದ ಪ್ರಮುಖ ಆಕರ್ಷಣೆ. ಇದೀಗ, ದರ್ಬಾರ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಟಿ ನಯನತಾರ ಕುರಿತು ರಜನಿಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಸೂಪರ್ ಸ್ಟಾರ್ ಸರಳತೆಗೆ ಅಭಿಮಾನಿಗಳ ಸಲಾಮ್ಸೂಪರ್ ಸ್ಟಾರ್ ಸರಳತೆಗೆ ಅಭಿಮಾನಿಗಳ ಸಲಾಮ್

  'ದರ್ಬಾರ್' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ನಯನತಾರಗೆ ರಜನಿಕಾಂತ್ ಅವರಿಂದ ಸಿಕ್ಕ ಬಹುದೊಡ್ಡ ಮೆಚ್ಚುಗೆ ಎನ್ನಬಹುದು.

  ಹೌದು, ದರ್ಬಾರ್ ಆಡಿಯೋ ಬಿಡುಗಡೆ ವೇದಿಕೆಯಲ್ಲಿ ಮಾತನಾಡಿದ ರಜನಿಕಾಂತ್, 'ಚಂದ್ರಮುಖಿ ಸಿನಿಮಾ ಮಾಡಿದಾಗ ನಯನತಾರ ಹೊಸಬರು. ಅದು ಎರಡನೇ ಸಿನಿಮಾ ಈಗ ಅವರು ನೂರು ಸಿನಿಮಾ ಮಾಡಿದ್ದಾರೆ. ನಯನತಾರ ಹೆಚ್ಚು ಬ್ಯೂಟಿಫುಲ್ ಆಗಿದ್ದಾರೆ'' ಎಂದಿದ್ದಾರೆ.

  ರಜನಿಕಾಂತ್ 'ದರ್ಬಾರ್'ಗೆ ಅದೃಷ್ಟ ತಂದ ಎಸ್.ಪಿ ಬಾಲಸುಬ್ರಹ್ಮಣ್ಯಂರಜನಿಕಾಂತ್ 'ದರ್ಬಾರ್'ಗೆ ಅದೃಷ್ಟ ತಂದ ಎಸ್.ಪಿ ಬಾಲಸುಬ್ರಹ್ಮಣ್ಯಂ

  ಅಂದ್ಹಾಗೆ, 2005ರಲ್ಲಿ ರಿಲೀಸ್ ಆಗಿದ್ದ ಚಂದ್ರಮುಖಿ ಸಿನಿಮಾದಲ್ಲಿ ಮೊದಲ ಸಲ ರಜನಿಕಾಂತ್ ಮತ್ತು ನಯನತಾರ ಸ್ಕ್ರೀನ್ ಶೇರ್ ಮಾಡಿದ್ದರು. ಬಳಿಕ ಶಿವಾಜಿ ಹಾಗೂ ಕುಚೇಲನ್ ಚಿತ್ರಗಳಲ್ಲಿ ನಯನತಾರ ಅತಿಥಿ ಪಾತ್ರ ನಿರ್ವಹಿಸಿದ್ದರು. ಈಗ ದರ್ಬಾರ್ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ.

  English summary
  Super star Rajinikanth praises Nayanthara in darbar audio launch. Nayanthara playing female lead role in darbar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X