ಎಸ್ ಪಿ ಬಾಲಸುಬ್ರಹ್ಮಣ್ಯಂ ಬಗ್ಗೆ ನಟ ರಜನಿಕಾಂತ್ ಹೇಳಿದ್ದೇನು?

ಖ್ಯಾತ ಹಿನ್ನಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದೆ. ಎಸ್ ಪಿ ಬಿ ಗುಣಮುಖರಾಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಕೋಟ್ಯಾಂತರ ಅಭಿಮಾನಿಗಳು ಅವರ ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ನಿಟ್ಟುಸಿರು ಬಿಟ್ಟಿದ್ದಾರೆ. ಲೆಜೆಂಡರಿ ಗಾಯಕ ಬೇಗ ಗುಣಮುಖರಾಗಲಿ ಎಂದು ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

Recommended Video

Prem 6 pack ಫೋಟೋಶೂಟ್ , 'ಮಳೆ' ಚಿತ್ರಕ್ಕಾಗಿ | Filmibeat Kannada

ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಸಹ ಎಸ್ ಪಿ ಬಿ ಬೇಗ ಗುಣಮುಖರಾಗಲಿ ಎಂದು ಹೇಳಿದ್ದಾರೆ. ಎಸ್ ಪಿ ಬಿ ಆರೋಗ್ಯದ ಬಗ್ಗೆ ರಜನಿಕಾಂತ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಪಾಯದ ಝೋನ್ ದಾಟಿದ್ದಾರೆ, ಶೀಘ್ರ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಎಸ್ ಪಿ ಬಿ ಬಗ್ಗೆ ರಜನಿಕಾಂತ್ ಮಾತು

ಎಸ್ ಪಿ ಬಿ ಬಗ್ಗೆ ರಜನಿಕಾಂತ್ ಮಾತು

ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಜಿನಿಕಾಂತ್ "ಎಸ್ ಪಿ ಬಾಲಸುಬ್ರಹ್ಮಣ್ಯಂ ಅಪಾಯದ ಮಟ್ಟವನ್ನು ದಾಟಿದ್ದಾರೆ. ಎಸ್ ಪಿ ಬಾಲಸುಬ್ರಹ್ಮಣ್ಯಂ 50 ವರ್ಷಗಳಿಗೂ ಹೆಚ್ಚು ಕಾಲ, ಅನೇಕ ಭಾಷೆಗಳಲ್ಲಿ ತಮ್ಮ ಸುಮಧುರ ಕಂಠದ ಮೂಲಕ ಕೋಟ್ಯಾಂತರ ಜನರನ್ನು ಸಂತೋಷ ಪಡಿಸಿದ್ದಾರೆ. ಆಸ್ಪತ್ರೆಯಲ್ಲಿರುವ ರಜನಿಕಾಂತ್ ಬೇಗ ಚೇತರಿಸಿಕೊಳ್ಳಬೇಕೆಂದು" ರಜನಿಕಾಂತ್ ಹೇಳಿದ್ದಾರೆ.

ತೀವ್ರನಿಗಾಘಟಕದಲ್ಲಿ ಚಿಕಿತ್ಸೆ

ತೀವ್ರನಿಗಾಘಟಕದಲ್ಲಿ ಚಿಕಿತ್ಸೆ

ಆಗಸ್ಟ್ ಮೊದಲ ವಾರದಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಕೊರೊನಾ ಪಾಸಿಟಿವ್ ಬಂದ ಹಿನ್ನಲೆ ಚೈನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಆ ನಂತರ ಆರೋಗ್ಯ ಸ್ಥಿತಿ ತೀರ ಗಂಭೀರವಾಗಿ ಅವರನ್ನು ತೀವ್ರ ನಿಗಾಘಟಕಕ್ಕೆ ವರ್ಗಾವಣೆ ಮಾಡಿರುವುದಾಗಿ ಆಸ್ಪತ್ಪತ್ರೆಯ ವೈದ್ಯರು ತಿಳಿಸಿದ್ದರು. ಎಸ್ ಪಿ ಬಿ ಆರೋಗ್ಯ ಸ್ಥಿತಿ ಕ್ರಿಟಿಕಲ್ ಎಂದು ಗೊತ್ತಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು.

ಅಪ್ಪನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಪುತ್ರ

ಅಪ್ಪನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಪುತ್ರ

ಸದ್ಯ ಚೇತರಿಸಿಕೊಳ್ಳುತ್ತಿರುವ ಎಸ್ ಪಿ ಬಿ ಬಗ್ಗೆ ಪುತ್ರ ಚರಣ್ ಮಾಹಿತಿ ನೀಡಿದ್ದಾರೆ. ಈ ಹಿಂದಿನ ಸ್ಥಿತಿಗೆ ಹೋಲಿಸಿಕೊಂಡರೆ ಈಗ ತಂದೆಯ ಆರೋಗ್ಯ ಉತ್ತಮವಾಗಿದೆ. ವೈದ್ಯರನ್ನು ಗುರುತಿಸುತ್ತಿದ್ದಾರೆ, ಅವರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ವೈದ್ಯರು ಸಹ ಪಾಸಿಟಿವ್ ಆಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇಳೆಯರಾಜ ಭಾವುಕ ಮಾತು

ಇಳೆಯರಾಜ ಭಾವುಕ ಮಾತು

''ನಮ್ಮ ಜೀವನವು ಸಿನಿಮಾದೊಂದಿಗೆ ಕೊನೆಗೊಳ್ಳುವುದಿಲ್ಲ. ಹಾಗೆ, ಸಿನೆಮಾದಿಂದಲೂ ಪ್ರಾರಂಭವಾಗಲಿಲ್ಲ. ಕೆಲವು ವೇದಿಕೆಗಳಲ್ಲಿ, ಕೆಲವು ಕಾರ್ಯಕ್ರಮಗಳಲ್ಲಿ ನಾವು ಪ್ರಾರಂಭಿಸಿದ ಸಂಗೀತವು ನಮ್ಮ ಜೀವನ ಮತ್ತು ನಮ್ಮ ಜೀವನೋಪಾಯವಾಗಿ ಮಾರ್ಪಟ್ಟಿದೆ. ನಮ್ಮ ಮಧ್ಯೆ ಏನೇ ಮನಸ್ಥಾಪವಿದ್ದರೂ ನನ್ನ ನಿನ್ನ ನಡುವಿನ ಸ್ನೇಹ, ಪ್ರೀತಿ, ಸಂಬಂಧವನ್ನು ಬಿಟ್ಟುಕೊಟಿಲ್ಲ. ನೀನು ಮತ್ತೆ ತಿರುಗಿ ಬರುತ್ತೀಯಾ ಎಂದು ನನಗೆ ಗೊತ್ತಿದೆ. ನೀನು ಬೇಗ ಗುಣಮುಖರಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಬಾಲು....ಬೇಗ ಬಾ....'' ಎಂದು ಕೇಳಿಕೊಂಡಿದ್ದಾರೆ.

More from Filmibeat

English summary
Actor Rajinikanth pray to SP Balasubrahmanyam for Speedy recovery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X