For Quick Alerts
  ALLOW NOTIFICATIONS  
  For Daily Alerts

  ಮೈಸೂರಿನಲ್ಲಿ ಮಣಿರತ್ನಂ ಕಾಟ ತಾಳಲಾರದೇ ಕಮಲ್ ಹಾಸನ್‌ಗೆ ಫೋನ್ ಮಾಡಿದ್ದರಂತೆ ತಲೈವಾ!

  |

  ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ಟ್ರೈಲರ್ ಲಾಂಚ್‌ ಈವೆಂಟ್‌ ಕೇಂದ್ರಬಿಂದು ಆಗಿದ್ದರು. ತಲೈವಾ ವೇದಿಕೆಯಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟರು.

  'ದಳಪತಿ' ಮಣಿರತ್ನಂ ನಿರ್ದೇಶನದಲ್ಲಿ ರಜನಿಕಾಂತ್ ನಟಿಸಿದ ಮೊದಲ ಸಿನಿಮಾ. ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಣದ ಆರಂಭದಲ್ಲಿ ಎದುರಿಸಿದ ಸಮಸ್ಯೆಗಳನ್ನು ತಲೈವಾ ತಮಾಷೆಯಾಗಿ ಹಂಚಿಕೊಂಡಿದ್ದಾರೆ. ಸೂಪರ್ ಸ್ಟಾರ್ ಮಾತುಗಳನ್ನು ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ಮಣಿರತ್ನಂ ನಿರ್ದೇಶನದಲ್ಲಿ ನಟಿಸುವುದು ಬಹಳ ಕಷ್ಟ. ಮೈಸೂರಿನಲ್ಲಿ 'ದಳಪತಿ' ಸಿನಿಮಾ ಚಿತ್ರೀಕರಣ ನಡೀತಿತ್ತು. ಆ ಸಮಯದಲ್ಲಿ ಮಣಿರತ್ನಂ ಕಾಟ ತಾಳಲಾರದೇ ಕಮಲ್‌ ಹಾಸನ್‌ಗೆ ಫೋನ್ ಮಾಡಿ ಸಹಾಯ ಕೇಳಿದ್ದೆ ಎಂದು ರಜನಿಕಾಂತ್ ಹೇಳಿದ್ದಾರೆ.

  ಐತಿಹಾಸಿಕ ಕಥಾಹಂದರದ 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ಚಿಯಾನ್ ವಿಕ್ರಂ, ಜಯಂ ರವಿ, ಕಾರ್ತಿ, ಐಶ್ವರ್ಯ ರೈ, ತ್ರಿಶಾ, ಪ್ರಕಾಶ್ ರಾಜ್, ಶರತ್‌ಕುಮಾರ್‌ರಂತಹ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಚೋಳ ಸಾಮ್ರಾಜ್ಯದ ಕಥೆ ಆಧರಿಸಿದ ಈ ಚಿತ್ರವನ್ನು 500 ಕೋಟಿ ರೂ. ಬಜೆಟ್‌ನಲ್ಲಿ 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ತರಲಾಗುತ್ತಿದೆ. ಸಿನಿಮಾ ಮೇಕಿಂಗ್ ಬಗ್ಗೆ ಮಾತನಾಡುತ್ತಾ ತಲೈವಾ ಮಣಿರತ್ನಂ ವರ್ಕಿಂಗ್ ಸ್ಟೈಲ್ ಬಗ್ಗೆ ರಜನಿಕಾಂತ್ ಮಾತನಾಡಿದ್ದಾರೆ. ಅದಕ್ಕೆ 'ದಳಪತಿ' ಸಿನಿಮಾ ಚಿತ್ರೀಕರಣದ ಪ್ರಸಂಗವನ್ನು ಹೇಳಿ ವಿವರಿಸಿದ್ದಾರೆ.

  'ದಳಪತಿ' ಮೊದಲ ದಿನ ಶೂಟಿಂಗ್ ಹೇಗಿತ್ತು?

  'ದಳಪತಿ' ಮೊದಲ ದಿನ ಶೂಟಿಂಗ್ ಹೇಗಿತ್ತು?

  "ಮೈಸೂರಿನಲ್ಲಿ 'ದಳಪತಿ' ಶೂಟಿಂಗ್. ನಾನು ಹಿಂದಿನ ದಿನ ಮುಂಬೈನಲ್ಲಿ ಹಿಂದಿ ಸಿನಿಮಾ ಶೂಟಿಂಗ್ ಮುಗಿಸಿ ರಾತ್ರಿ ಬಂದು ಸೇರಲು ರಾತ್ರಿಯಾಗಿತ್ತು. ಮಾರನೇ ದಿನ ಬೆಳಗ್ಗೆ ಸ್ಪಾಟ್‌ಗೆ ಹೋದೆ. ಮೇಕಪ್‌ಮ್ಯಾನ್‌ಗೆ ಹೇಳ್ದೆ, ಮೇಕಪ್ ಬೇಡ, ಮುಖಕ್ಕೆ ನೀರು ಹೊಡೆದು, ಫೌಂಡೇಷನ್ ಹಾಕು ಅಂತ. ಯಾರಾದರೂ ಕೇಳಿದರೆ ನಾನು ಹೇಳ್ತೀನಿ ಅಂದೆ. ನನ್ನ ಜೊತೆ ಮೊಮ್ಮುಟ್ಟಿ ಆಪಲ್ ತರ ಇದ್ದಾರೆ. ನಾನು ಹೋದರೆ ಅಮಾವಾಸ್ಯೆ- ಹುಣ್ಣಿಮೆ ತರ ಆಗಿಬಿಡುತ್ತೆ. ಮೇಕಪ್ ಸಾಕು ಎಂದೆ."

  ದೊಗಲೆ ಪ್ಯಾಂಟ್, ದೊಗಲೆ ಶರ್ಟ್

  ದೊಗಲೆ ಪ್ಯಾಂಟ್, ದೊಗಲೆ ಶರ್ಟ್

  "ಕಾಸ್ಟ್ಯೂಮ್ಸ್ ತಂದು ಕೊಟ್ಟರು. ದೊಗಲೆ ಪ್ಯಾಂಟ್‌, ಶರ್ಟ್‌ ತಂದು ಕೊಟ್ಟರು. ನಾನು ಸ್ವಲ್ಪ ಬಿಗಿ ಮಾಡಿಕೊಡುವಂತೆ ಕೇಳಿದೆ. ಇಲ್ಲ ಸರ್ ಮಣಿ ಸರ್ ಹೇಳಿದ್ದಾರೆ ಅಂದರು. ಅಯ್ಯೋ ನಾನ್‌ ಹೇಳ್ತೀನಿ ಮಾಡ್ಕೊಂಡು ಬನ್ನಿ ಎಂದೆ. ಮಾಡಿಕೊಂಡು ಬಂದು ಕೊಟ್ಟರು. ಆಮೇಲೆ ನೋಡಿದರೆ ಚಪ್ಪಲಿ ಇಟ್ಟಿದ್ದರು. ನಾನು ದಳಪತಿ ಶೂ ಹಾಕ್ತೀನಿ ಎಂದೆ. ವಾಕಿಂಗ್ ಶೂ ಇತ್ತು. ಇದೇ ಹಾಕ್ಕೊತ್ತೀನಿ ಎಂದು ಹಾಕಿಕೊಂಡೆ. ಶೂಟಿಂಗ್‌ ಸ್ಪಾಟ್‌ಗೆ ಹೋದರೆ ಮಣಿ ಸರ್ ಕಾಸ್ಟ್ಯೂಮ್ ಎಲ್ಲಿ ಅಂದರು. ಇದೇ ಸರ್ ಕಾಸ್ಟ್ಯೂಮ್ ಎಂದೆ. ಮೇಲಿನಿಂದ ಕೆಳಗೆವರೆಗೂ ನೋಡಿ ಓಕೆ ಎಂದರು."

  ನಟಿ ಶೋಭನಾ ಗೋಳು ಹುಯ್ದುಕೊಂಡಿದ್ದರು

  ನಟಿ ಶೋಭನಾ ಗೋಳು ಹುಯ್ದುಕೊಂಡಿದ್ದರು

  "ಶೂಟಿಂಗ್ ನಡುವೆ ಮಣಿರತ್ನಂ, ಸುಹಾಸಿನಿ, ತೋಟಾ ಧರಣಿ ಏನೋ ಮಾತನಾಡುತ್ತಿದ್ದರು. ಶೋಭನಾ ನನ್ನ ಜೊತೆ ಸಿನಿಮಾದಲ್ಲಿ ನಟಿಸ್ತಿದ್ದರು. ಆಕೆ ತುಂಬಾ ತಮಾಷೆ ಮಾಡುತ್ತಿದ್ದರು. ಏನ್ ಸರ್ ಅವ್ರು ಮಾತನಾಡುತ್ತಿರುವುದು, ನಿಮ್ಮನ್ನು ತೆಗೆದು ಈ ಪಾತ್ರಕ್ಕೆ ಕಮಲ್ ಹಾಸನ್‌ನ ಹಾಕಿಕೊಳ್ಳುವುದಾಗಿ ಮಾತನಾಡುತ್ತಿರುವಂತಿದೆ ಎಂದರು. ಆಮೇಲೆ ಏನು ಮಾತನಾಡ್ತಿದ್ದಾರೆ ಎಂದು ಕೇಳಿದಾಗ, ಇಲ್ಲ ಸರ್ ಕಾಸ್ಟ್ಯೂಮ್ ಬಗ್ಗೆ ಎಂದು ಹೇಳಿದರು. ನಂತರ ಮಣಿರತ್ನಂ ಬಂದು ಓಕೆ ಓಕೆ ಶೂಟ್ ಮಾಡೋಣ ಎಂದರು. ಮೊದಲ ದಿನ ಶೂಟಿಂಗ್ ಮುಗೀತು".

  ಎರಡ್ಮೂರು ದಿನ ಶೂಟಿಂಗ್ ಕಷ್ಟ ಆಯ್ತು

  ಎರಡ್ಮೂರು ದಿನ ಶೂಟಿಂಗ್ ಕಷ್ಟ ಆಯ್ತು

  "ಎರಡನೇ ದಿನ ಮೇಕಪ್ ಬೇಡ ಎಂದೆ. ಅದೇ ದೊಗಲೆ ಪ್ಯಾಂಟ್, ಶರ್ಟ್, ಚಪ್ಪಲಿ ಹಾಕಿಕೊಂಡು ಹೋಗಿ ನಟಿಸಿದೆ. ಮೊದಲ ಎರಡ್ಮೂರು ದಿನ ಶೂಟಿಂಗ್ ಕಷ್ಟ ಆಯ್ತು. ನಾನು ಒಂದಷ್ಟು ಸ್ಟಾಕ್ ಎಕ್ಸ್‌ಪ್ರೇಶನ್ ಇಟ್ಟುಕೊಂಡಿದ್ದೆ. ಭಯ, ಪ್ರೀತಿ, ಆಶ್ಚರ್ಯ, ಸಂದೇಹ ಹೀಗೆ ಎಲ್ಲದನ್ನು ಒಂದಷ್ಟು ಎಕ್ಸ್‌ಪ್ರೇಶನ್ ಇರ್ತಿತ್ತು. ಆ ರೀತಿ ಎಕ್ಸ್‌ಪ್ರೆಷನ್ ಕೊಟ್ಟರೆ ನಿರ್ದೇಶಕರು ಒಪ್ಪುತ್ತಿರಲಿಲ್ಲ. ತುಂಬಾ ಕಷ್ಟ ಆಯ್ತು. ಏನೇ ಡೈಲಾಗ್ ಹೇಳಿದರೂ ಸರಿ ಆಗುತ್ತಿರಲಿಲ್ಲ. ಇಲ್ಲ ನೀವು ಫೀಲ್ ಮಾಡಬೇಕು ಎಂದರು. ಏನು ಅಂತಲೇ ಗೊತ್ತಾಗಲಿಲ್ಲ. ನಮ್ಮ ಸ್ಟೈಲೇ ಬೇರೆ. ಆದರೆ ಅದೇನು ಫೀಲ್ ಗೊತ್ತಾಗಲಿಲ್ಲ."

  ಕಮಲ್ ಐಡಿಯಾ ಸಕ್ಸಸ್, ಥ್ಯಾಂಕೂ ಕಮಲ್

  ಕಮಲ್ ಐಡಿಯಾ ಸಕ್ಸಸ್, ಥ್ಯಾಂಕೂ ಕಮಲ್

  "ನಟಿಸೋದು ತುಂಬಾ ಕಷ್ಟ ಅಂತ ಗೊತ್ತಾಗಿ ಅಲ್ಲಿಂದ ಕಮಲ್ ಹಾಸನ್‌ಗೆ ಫೋನ್ ಮಾಡ್ದೆ. ಫೋನ್ ಮಾಡಿ ಕಮಲ್ ತುಂಬಾ ಕಷ್ಟ ಆಗ್ತಿದೆ. ಒಂದು ಶಾಟ್ ಹತ್ತು, ಹದಿನೈದು ಟೇಕ್ ಆಗ್ತಿದೆ. ಏನ್ ಮಾಡುವುದು ಎಂದಾಗ ಕಮಲ್ ಆ ಕಡೆಯಿಂದ ನಕ್ಕರು. ನನಗೆ ಗೊತ್ತು. ನಾನೂ ಹೀಗೆ ಕಷ್ಟಪಟ್ಟಿದ್ದೆ. ಒಂದು ಕೆಲಸ ಮಾಡಿ. ಮಣಿರತ್ನಂ ಚೆನ್ನಾಗಿ ನಟಿಸ್ತಾರೆ ಅಲ್ವಾ. ಅವರಿಗೆ ನಟಿಸಿ ತೋರಿಸೋಕೆ ಹೇಳಿ. ಅವರು ಮಾಡಿ ತೋರಿಸ್ತಾರೆ. ಅದನ್ನು ನೋಡಿ ಕಾಪಿ ಮಾಡಿ ಸರಿ ಹೋಗುತ್ತೆ ಎಂದರು. ಅದೇ ರೀತಿ ಮಾಡಿದೆ. ಶಾಟ್ ಓಕೆ ಆಯಿತು. ಥ್ಯಾಂಕೂ ಕಮಲ್" ಎಂದು ರಜಿನಿಕಾಂತ್ ವಿವರಿಸಿದ್ದಾರೆ.

  English summary
  Rajinikanth Recalls thalapathy Movie Mysore shooting Experience. Know More.
  Thursday, September 8, 2022, 10:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X