ಮುಂದಿನ ವರ್ಷದವರೆಗೂ ಚಿತ್ರೀಕರಣ ಆರಂಭಿಸಿಲ್ಲ ರಜನಿಕಾಂತ್
ಕೊರೊನಾ ವೈರಸ್ ಕಾರಣದಿಂದ ಏಳು ತಿಂಗಳಿಗೂ ಹೆಚ್ಚು ಕಾಲ ದೇಶಾದ್ಯಂತ ಲಾಕ್‌ಡೌನ್ ಆಗಿತ್ತು. ಈ ಅವಧಿಯಲ್ಲಿ ಚಿತ್ರರಂಗವೂ ಸಂಪೂರ್ಣವಾಗಿ ಸ್ತಬ್ದವಾಗಿತ್ತು. ಇದೀಗ, ನಿಧಾನವಾಗಿ ಶೂಟಿಂಗ್ ಆರಂಭವಾಗಿದೆ.
ದೊಡ್ಡ ದೊಡ್ಡ ಸಿನಿಮಾಗಳು ಮತ್ತೆ ಚಿತ್ರೀಕರಣ ಮಾಡಿದೆ. ಆದ್ರೆ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಅನ್ನಾಥೆ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ. ಇದೀಗ, ರಜನಿ ಅನ್ನಾಥೆ ಸಿನಿಮಾದ ಅಪ್‌ಡೇಟ್ ಸಿಕ್ಕಿದ್ದು, ಈ ವರ್ಷದಲ್ಲಿ ಕೆಲಸ ಆರಂಭಿಸಲ್ಲ ಎನ್ನುವುದು ಖಚಿತವಾಗಿದೆ. ಮುಂದೆ ಓದಿ....

ಈ ವರ್ಷ ಶೂಟಿಂಗ್ ಆರಂಭಿಸಲ್ಲ
ಈ ಹಿಂದೆ ಹೇಳಿದಂತೆ ಅಕ್ಟೋಬರ್ 10 ರಿಂದ ಅನ್ನಾಥೆ ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗಿತ್ತು. ಆದ್ರೀಗ, ಮುಂದಿನ ವರ್ಷ ಪರಿಸ್ಥಿತಿಯನ್ನು ಪರಿಶೀಲಿಸಿ ರಜನಿ ಶೂಟಿಂಗ್ ಮಾಡಲಿದ್ದಾರೆ ಹೇಳಲಾಗಿದೆ. 69 ವರ್ಷದ ರಜನಿ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಈ ಕುರಿತು ಸ್ವತಃ ತಲೈವಾ ಹೇಳಿಕೊಂಡಿದ್ದಾರೆ. ಆರೋಗ್ಯ ದೃಷ್ಟಿಯಿಂದ ನಾನು ಬಳಲಿದ್ದೇನೆ ಎಂದು ಇತ್ತೀಚಿಗಷ್ಟೆ ನೀಡಿದ್ದ ಪ್ರಕಟಣೆಯಲ್ಲಿ ತಿಳಿಸಿದ್ದರು.

ರಜನಿ ಆರೋಗ್ಯ ಸರಿಯಿಲ್ಲ
ಅಂದ್ಹಾಗೆ, ರಜನಿ ಆರೋಗ್ಯದ ಬಗ್ಗೆ ರಿಸ್ಕ್ ತೆಗೆದುಕೊಳ್ಳಲು ಸ್ವತಃ ಚಿತ್ರತಂಡ ಸಹ ತಯಾರಿಲ್ಲ. ಹಾಗಾಗಿ, ಕೊರೊನಾ ಪರಿಸ್ಥಿತಿ ಸಂಪೂರ್ಣ ಹಿಡಿತಕ್ಕೆ ಬಂದ್ಮೇಲೆ ತಲೈವಾ ಅಖಾಡಕ್ಕೆ ಇಳಿಯಲಿದ್ದಾರೆ. ಸಿರುತೈ ಶಿವ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ತಲೈವಾ ಎಂಟ್ರಿ ಆದ್ಮೇಲೆ ಕೆಲಸ ಆರಂಭಿಸೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ದೊಡ್ಡ ತಾರಬಳಗ
ಸನ್ ಪಿಕ್ಚರ್ಸ್ ಸಂಸ್ಥೆಯ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಬಹುದೊಡ್ಡ ತಾರಬಳಗ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ರಜನಿಕಾಂತ್, ಕೀರ್ತಿ ಸುರೇಶ್, ನಯನತಾರ ಜೊತೆಗೆ ಹಿರಿಯ ನಟಿಯರಾದ ಖುಷ್ಬೂ, ಮೀನಾ ಸಹ ಇರಲಿದ್ದಾರೆ. ಪ್ರಮುಖ ಖಳನಟ ಪಾತ್ರದಲ್ಲಿ ಜಾಕಿ ಶ್ರಾಫ್ ಇರಲಿದ್ದು, ಪ್ರಕಾಶ್ ರೈ ಮತ್ತು ಸೂರಿ ಸಹ ನಟಿಸಲಿದ್ದಾರೆ.
Recommended Video

ವಿದೇಶಕ್ಕೆ ಹಾರಬೇಕಿದೆ
ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಎರಡನೇ ಹಂತದ ಶೂಟಿಂಗ್‌ಗಾಗಿ ವಿದೇಶಕ್ಕೆ ಹಾರಬಹುದು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಚಿತ್ರೀಕರಣ ಮುಗಿಯಬೇಕಿತ್ತು. ಕೊರೊನಾದಿಂದ ವಿಳಂಬವಾದರೂ ಸದ್ಯದ ಯೋಜನೆ ಪ್ರಕಾರ ಮುಂದಿನ ವರ್ಷದ ಆರಂಭಕ್ಕೆ ಸಿನಿಮಾ ಚಿತ್ರೀಕರಣ ಮುಗಿಯಲಿದೆ. ಮುಂದಿನ ವರ್ಷದ ಬೇಸಿಗೆ ರಜೆಯಷ್ಟರಲ್ಲಿ ಅನ್ನಾಥೆ ತೆರೆಮೇಲೆ ಬರಲಿದೆ.


Click it and Unblock the Notifications











