'ಕೂಲಿ' ವೇದಿಕೆಯಲ್ಲಿ ಮಲಯಾಳಂ ನಟನಿಗೆ ರಜನಿಕಾಂತ್ ಅವಮಾನ?

ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಸಿನಿಮಾ ಬಿಡುಗಡೆಗೆ ಇನ್ನೊಂದು ದಿನ ಬಾಕಿಯಿದೆ. ಸನ್ ಪಿಕ್ಚರ್ಸ್ ನಿರ್ಮಾಣದ ಅದ್ಧೂರಿ ಚಿತ್ರದಲ್ಲಿ ರಜನಿಕಾಂತ್ ಜೊತೆ ಆಮೀರ್ ಖಾನ್, ಉಪೇಂದ್ರ, ಸತ್ಯರಾಜ್, ನಾಗಾರ್ಜುನ, ಸತ್ಯರಾಜ್ ಸೇರಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಮಲಯಾಲಂ ನಟ ಸೌಬಿನ್ ಶಾಹಿರ್ ಕೂಡ ಬಣ್ಣ ಹಚ್ಚಿದ್ದಾರೆ.

ಇತ್ತೀಚೆಗೆ ಚೆನ್ನೈನಲ್ಲಿ 'ಕೂಲಿ' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೀತು. ಮುಕ್ಕಾಲು ಗಂಟೆ ವೇದಿಕೆಯಲ್ಲಿ ರಜನಿಕಾಂತ್ ಮಾತನಾಡಿದರು. ಚಿತ್ರದ ಬಗ್ಗೆ ಮಾತ್ರವಲ್ಲ ಸಾಕಷ್ಟು ವಿಚಾರಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಮಾತನಾಡಿ ಅಭಿಮಾನಿಗಳ ಮನಗೆದ್ದರು. ತಾವು ಕೂಲಿಯಾಗಿ ಕೆಲಸ ಮಾಡಿದ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದರು. ಇದೆಲ್ಲದರ ನಡುವೆ ಆಮೀರ್ ಖಾನ್ ಹಾಗೂ ಸೌಬಿನ್ ಶಾಹಿರ್ ಬಗ್ಗೆ ತಲೈವಾ ಆಡಿದ ಮಾತುಗಳು ಈಗ ಚರ್ಚೆ ಹುಟ್ಟಾಕ್ಕಿದೆ.

Rajinikanth s Coolie Audio Launch Sparks Debate Over Comments on Aamir Khan and Soubin Shahir

ರಜನಿಕಾಂತ್ ಕೆಲವೊಮ್ಮೆ ಬಹಳ ವಿಡಂಬನಾತ್ಮಕವಾಗಿ ಮಾತನಾಡುತ್ತಾರೆ. ತಮ್ಮ ಬಗ್ಗೆ ಕೂಡ ತಮಾಷೆ ಮಾಡುತ್ತಾ ಎಲ್ಲರ ಗಮನ ಸೆಳೆಯುತ್ತಾರೆ. ತಮ್ಮ ಬೋಳು ತಲೆ, ಕಪ್ಪು ಮೈಬಣ್ಣದ ಬಗ್ಗೆಯೂ ತಮ್ಮದೇ ಶೈಲಿಯಲ್ಲಿ ಜೋಕ್ ಮಾಡುತ್ತಾರೆ. ಆದರೆ 'ಕೂಲಿ' ಆಡಿಯೋ ಲಾಂಚ್ ವೇದಿಕೆಯಲ್ಲಿ ಆಮೀರ್ ಖಾನ್ ದೇಹದ ಎತ್ತರ ಹಾಗೂ ಸೌಬಿನ್ ಶಾಹಿರ್ ಬೋಳತಲೆ, ಕುಳ್ಳಗಿರುವ ಬಗ್ಗೆ ತಲೈವಾ ಮಾತುಗಳು ಕೆಲವರ ಬೇಸರಕ್ಕೆ ಕಾರಣವಾಗಿದೆ. ಇದನ್ನೇ ಟ್ರೋಲ್ ಮಾಡಿ ಕೆಲವರು ರಜನಿಕಾಂತ್ ಅವರನ್ನು ಟೀಕಿಸುತ್ತಿದ್ದಾರೆ.

"ಲೋಕೇಶ್ ಕನಕರಾಜ್ ಬಂದು 'ಕೂಲಿ' ಸಿನಿಮಾ ಕಥೆ ಹೇಳಿದರು. ಬಹಳ ಇಷ್ಟವಾಗಿ ಒಪ್ಪಿಕೊಂಡೆ. ನಂತರ ಚಿತ್ರದ ಕಲಾವಿದರ ಬಗ್ಗೆ ಚರ್ಚೆ ಶುರುವಾಯಿತು, ಮುಖ್ಯವಾದ ಪಾತ್ರಕ್ಕೆ ಸೌಬಿನ್ ಶಾಹಿರ್ ನಟಿಸಿದ್ರೆ ಚೆನ್ನಾಗಿರುತ್ತೆ ಅಂದ್ರು. ನನಗೆ ಫೋಟೊ ತೋರಿಸಿದ್ರು. ಯಾರಪ್ಪಾ ಇದು ಅಂದೆ. 'ಮಂಜುಮೇಲ್ ಬಾಯ್ಸ್' ಚಿತ್ರದಲ್ಲಿ ನಟಿಸಿದ್ದಾರೆ ಅಂದ್ರು. ನಾನು ನೋಡಿ, ಏನಿದು ಬೋಳುತಲೆ, ಇವ್ರು ಆ ಪಾತ್ರಕ್ಕೆ ಸೂಕ್ತವೇ ಎಂದು ಅನುಮಾನ ವ್ಯಕ್ತಪಡಿಸಿದೆ. ಆದರೆ ಲೋಕೇಶ್ ಬಹಳ ಭರವಸೆಯಿಂದ ಇದ್ದರು. ನನಗೆ ನಂಬಿಕೆ ಇರಲಿಲ್ಲ. ಆದರೂ ಒಪ್ಪಿಕೊಂಡೆ" ಎಂದು ರಜನಿಕಾಂತ್ ಹೇಳಿದ್ದರು.

ಚಿತ್ರೀಕರಣದ ಶುರುವಾದ ಬಳಿಕ ನಡೆದ ಘಟನೆಯನ್ನು ರಜನಿಕಾಂತ್ ನೆನಪಿಸಿಕೊಂಡಿದ್ದಾರೆ. "ಸೌಬಿನ್ ನಟನೆಯ ಸನ್ನಿವೇಶಗಳನ್ನು ಚಿತ್ರಿಸಿದ ಬಳಿಕ ನನ್ನನ್ನು ಚಿತ್ರೀಕರಣಕ್ಕೆ ಕರೆದಿದ್ದರು. ಹೋದಾಗ ಸೌಬಿನ್ ನಟಿಸಿರುವ ಸನ್ನಿವೇಶಗಳನ್ನು ತೋರಿಸಿದ್ದರು, ನಾನು ಒಂದು ಕ್ಷಣ ಅಚ್ಚರಿಗೊಂಡಿದ್ದೆ. ಅಬ್ಬಬ್ಬಾ ಎಂತಹ ಕಲಾವಿದ ಅವ್ರು" ಎಂದು ರಜನಿಕಾಂತ್ ಬೆರಗಾಗಿದ್ದಾಗಿ ತಿಳಿಸಿದ್ದಾರೆ.

ಸೌಬಿನ್ ಅವರನ್ನು ನೋಡಿ ಈತ ಇಂತಹ ಪಾತ್ರ ಮಾಡೋಕೆ ಸಾಧ್ಯನಾ? ಎಂದು ಅನುಮಾನಗೊಂಡಿದ್ದ ರಜನಿಕಾಂತ್ ಬಳಿಕ ಅವರ ನಟನೆ ನೋಡಿ ಬೆರಗಾಗಿದ್ದನ್ನು ವಿವರಿಸಿದ್ದಾರೆ. ಆದರೆ ಕೆಲವರು ಮಾತ್ರ ಸೌಬಿನ್ ಅವರನ್ನು ರಜನಿಕಾಂತ್ ಅವಮಾನಿಸಿದ್ದಾರೆ ಎಂದೇ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಆಮೀರ್ ಖಾನ್ ಬಗ್ಗೆ ಮಾತನಾಡುತ್ತಾ "ಆಮೀರ್ ಖಾನ್ ಅದ್ಭುತ ನಟ. ಕಮಲ್ ರೀತಿ ಮಿ. ಪರ್ಫೆಕ್ಷನಿಸ್ಟ್. ಅವರಿಗೆ ಕಥೆ ಹೇಳಿ ಒಪ್ಪಿಸುವುದು ಕಷ್ಟ. ಬಾಲಿವುಡ್‌ನಲ್ಲಿ ಒಂದ್ಕಡೆ ಶಾರೂಖ್ ಖಾನ್ ಹಾಗೂ ಮತ್ತೊಂದು ಕಡೆ ಸಲ್ಮಾನ್ ಖಾನ್ ನಡುವೆ ಕುಳ್ಳಗಿದ್ದರು ಎತ್ತರದ ಸ್ಥಾನದಲ್ಲಿ ನಿಂತಿದ್ದಾರೆ" ಎಂದು ರಜನಿಕಾಂತ್ ಹೇಳಿದ್ದಾರೆ.

ಆಮೀರ್ ಖಾನ್ ದೇಹದ ಎತ್ತರದ ಬಗ್ಗೆ ರಜನಿಕಾಂತ್ ಅವಮಾನಿಸಿ ಮಾತನಾಡಿದ್ದಾರೆ ಎಂದು ರಜನಿಕಾಂತ್ ಅವರನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಅಭಿಮಾನಿಗಳು ತಲೈವಾ ಬೆಂಬಲಕ್ಕೆ ನಿಂತಿದ್ದಾರೆ. ರಜನಿಕಾಂತ್ ಮಾತಿನ ಭಾವ ಅರ್ಥ ಮಾಡಿಕೊಳ್ಳಿ. ಅವರು ಬಳಸಿದ ಸಾಲುಗಳನ್ನು ಅಲ್ಲ ಎಂದು ತಿಳಿ ಹೇಳುತ್ತಿದ್ದಾರೆ.

More from Filmibeat

English summary
At the grand ‘Coolie’ audio launch in Chennai, Rajinikanth’s candid remarks about Aamir Khan’s height and Soubin Shahir’s baldness stirred mixed reactions online, even as he praised their acting talent.
Read more about: rajinikanth aamir khan kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X