ಎಲ್ಲೆಲ್ಲೂ ಈಗ 'ಮೋನಿಕಾ' ಹವಾ; ಕಾರಣ ಪೂಜಾ ಹೆಗ್ಡೆ ಅಲ್ಲ!

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡ್ತಿದೆ. ಆಗಸ್ಟ್ 14ಕ್ಕೆ ಸಿನಿಮಾ ತೆರೆಗೆ ಬರಲಿದೆ. ಸದ್ಯ ಒಂದೊಂದೇ ಹಾಡು ರಿಲೀಸ್ ಆಗಿ ಗಮನ ಸೆಳೀತಿದೆ. ಇದೀಗ ಪೂಜಾ ಹೆಗ್ಡೆ ಹೆಜ್ಜೆ ಹಾಕಿರುವ 'ಮೋನಿಕಾ' ಸಾಂಗ್ ಟ್ರೆಂಡ್ ಕ್ರಿಯೇಟ್ ಮಾಡಿದೆ.

ಅನಿರುದ್ದ್ ರವಿಚಂದರ್ ಸಂಗೀತದಲ್ಲಿ ಡ್ಯಾನ್ಸಿಂಗ್ ನಂಬರ್ ಲಿರಿಕಲ್ ವೀಡಿಯೋ ಸಾಂಗ್ ಬಂದು ಸದ್ದು ಮಾಡ್ತಿದೆ. ರಜನಿಕಾಂತ್, ನಾಗಾರ್ಜುನ, ಉಪೇಂದ್ರ ಸೇರಿ ಚಿತ್ರದಲ್ಲಿರುವ ಸ್ಟಾರ್ ನಟರು ಯಾರೂ ಕೂಡ ಸಾಂಗ್‌ನಲ್ಲಿ ಕಾಣಿಸಿಕೊಂಡಿಲ್ಲ. ಪೂಜಾ ಹೆಗ್ಡೆ ಜೊತೆ ಮಲಯಾಳಂ ನಟ ಸೌಬಿನ್ ಶಾಹಿರ್ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಒಮ್ಮೆ ಕೇಳಿದರೆ ಪರವಾಗಿಲ್ಲ ಎನಿಸೋ ಮೋನಿಕಾ ಸಾಂಗ್ ಕೇಳ್ತಾ ಕೇಳ್ತಾ ಇಷ್ಟವಾಗುತ್ತದೆ.

Rajinikanth s Coolie Set for Grand Release on August 14 Pooja Hegde s Monica Song Goes Viral

ದೊಡ್ಡ ಹಡಗಿನ ಬಳಿ ಬಂದರಿನಲ್ಲಿ ಸಾಂಗ್ ಶೂಟ್ ಮಾಡಲಾಗಿದೆ. ರೆಡ್ ಕಲರ್ ಹೈ ಸ್ಲಿಕ್ ಗೌನ್ ಧರಿಸಿ ಪೂಜಾ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಆದರೆ ಪೂಜಾಗಿಂತಲೂ ಸೌಬಿನ್ ಶಾಹಿರ್ ಡ್ಯಾನ್ಸ್ ಸಿನಿರಸಿಕರ ಗಮನ ಸೆಳೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸಾಂಗ್ ವೈರಲ್ ಆಗುತ್ತಿದೆ. ಎಲ್ಲರೂ ಪೂಜಾ, ಸೌಬಿನ್ ಡ್ಯಾನ್ಸ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

ಸ್ಯಾಂಡಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಸಿಕ್ಕಾಪಟ್ಟೆ ಅದ್ಧೂರಿಯಾಗಿ ಸಾಂಗ್ ಶೂಟ್ ಮಾಡಿದ್ದಾರೆ. ಪೂಜಾ ಹಾಗೂ ಸೌಬಿನ್‌ಗೆ ಒಂದಷ್ಟು ಡ್ಯಾನ್ಸರ್ಸ್ ಸಾಥ್ ಸಿಕ್ಕಿದೆ. ರಜನಿಕಾಂತ್ ನಟನೆಯ 'ಜೈಲರ್' ಚಿತ್ರಕ್ಕೆ ಈ ಹಿಂದೆ ಕಾವಾಲಯ್ಯ ರೀತಿಯ ಸೂಪರ್ ಹಿಟ್ ಸ್ಪೆಷಲ್ ನಂಬರ್ ಕೊಟ್ಟಿದ್ದ ಅನಿರುದ್ಧ್ ಇದೀಗ 'ಕೂಲಿ' ಚಿತ್ರಕ್ಕೆ ಅಂತದ್ದೇ ಮತ್ತೊಂದು ಸಾಂಗ್ ಕೊಟ್ಟು ಗೆದ್ದಿದ್ದಾರೆ.

ಶುಬಲಾಶಿನಿ ಜೊತೆಗೆ ಸಂಗೀತ ನಿರ್ದೇಶಕ ಅನಿರುದ್ಧ್ ಹಾಡಿಗೆ ದನಿಯಾಗಿದ್ದಾರೆ. ಸದ್ಯ ಎಲ್ಲೆಲ್ಲೂ ಮೋನಿಕಾ ಸಾಂಗ್ ಕ್ರೇಜ್ ಜೋರಾಗಿದೆ. 'ಕೂಲಿ' ಚಿತ್ರಕ್ಕೆ ಈ ಸಾಂಗ್ ಪ್ಲಸ್ ಪಾಯಿಂಟ್ ಆಗುವ ಸುಳಿವು ಸಿಗುತ್ತಿದೆ. ಲೋಕೇಶ್ ಕನಕರಾಜ್ ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಜನಿಕಾಂತ್ ಜೊತೆ ನಾಗಾರ್ಜುನ, ಉಪೇಂದ್ರ, ಆಮೀರ್ ಖಾನ್ ನಟಿಸಿರೋದು ವಿಶೇಷ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಕೂಲಿ' ಸಿನಿಮಾ ಮೂಡಿ ಬರ್ತಿದೆ. ಹಾಗಾಗಿ ಆಯಾ ಭಾಷೆಯ ಒಬ್ಬೊಬ್ಬ ನಟರನ್ನು ಆಯ್ಕೆ ಮಾಡಿಕೊಂಡಂತೆ ಕಾಣುತ್ತಿದೆ.

ಕನ್ನಡದಿಂಗ ಉಪೇಂದ್ರ, ತೆಲುಗಿನಿಂದ ನಾಗಾರ್ಜುನ, ಮಲಯಾಳಂನಿಂದ ಸೌಬಿನ್ ಇದೇ ರೀತಿ ಬಾಲಿವುಡ್ ನಟ ಆಮೀರ್ ಖಾನ್ ಕೂಡ ಚಿತ್ರ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. 'ಕೂಲಿ' ಸಿನಿಮಾ ಬಿಡುಗಡೆ ಆಗುವ ಅದೇ ದಿನ ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ 'ವಾರ್- 2' ಸಿನಿಮಾ ಕೂಡ ತೆರೆಗೆ ಬರಲಿದೆ. ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಯ್ಲಾಶ್ ಗ್ಯಾರಂಟಿ ಎನ್ನುವಂತಾಗಿದೆ. ಚಿತ್ರಮಂದಿರಗಳಿಗಾಗಿ ಎರಡೂ ಚಿತ್ರಗಳ ನಡುವೆ ಈಗಾಗಲೇ ಪೈಪೋಟಿ ಶುರುವಾಗಿದೆ.

ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ 'ಕೂಲಿ' ಸಿನಿಮಾ ನಿರ್ಮಾಣವಾಗಿದೆ. 'ಕೈದಿ', 'ಮಾಸ್ಟರ್', 'ವಿಕ್ರಂ', 'ಲಿಯೋ' ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ಲೋಕೇಶ್ ಕನಕರಾಜ್ ಮೇಲೆ ಹೆಚ್ಚು ನಿರೀಕ್ಷೆಯಿದೆ. ಅವರ ಜೊತೆ ರಜನಿಕಾಂತ್ ಕೈಜೋಡಿಸಿರೋದು ಮತ್ತಷ್ಟು ಕುತೂಹಲ ಮೂಡಿಸಿದೆ.

ಕನ್ನಡದಲ್ಲಿ ಶಿವಣ್ಣ, ಉಪೇಂದ್ರ, ರಾಜ್‌. ಬಿ ಶೆಟ್ಟಿ ನಟನೆಯ '45' ಚಿತ್ರವನ್ನು ಕೂಡ ಅದೇ ದಿನ ಬಿಡುಗಡೆ ಮಾಡಲು ಬಯಸಿದ್ದರು. ರಿಲೀಸ್ ಡೇಟ್ ಸಹ ಘೋಷಣೆಯಾಗಿತ್ತು. ಆದರೆ ಇದೀಗ ಚಿತ್ರತಂಡ ರಿಲೀಸ್ ಮುಂದೂಡಲು ತೀರ್ಮಾನಿಸಿದೆ.

More from Filmibeat

English summary
Pooja Hegde and Soubin Shahir’s viral dance number ‘Monica’, composed by Anirudh, adds to the hype.
Read more about: rajinikanth pooja hegde kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X