ರಜನಿಕಾಂತ್ ನಟನೆಯ 'ತಲೈವರ್ 170' ಶೂಟಿಂಗ್ ವೇಳೆ ಅವಘಡ: ನಟಿ ರಿತಿಕಾ ಸಿಂಗ್‌ ಕೈಗೆ ಗಾಯ

ಜೈಲರ್ ಸಿನಿಮಾದ ಭರ್ಜರಿ ಸಕ್ಸಸ್ ಕಂಡಿರುವ ನಟಿ ರಜನಿಕಾಂತ್ ಮುಂದಿನ ಸಿನಿಮಾ ಮೇಲೆ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ. ರಜಿನಿ ಅಭಿನಯದ 'ತಲೈವರ್ 170' ಸಿನಿಮಾ ಆರಂಭವಾಗಿದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೇ ವೇಳೆ ಸಿನಿಮಾ ಶೂಟಿಂಗ್ ಸ್ಪಾಟ್‌ನಿಂದ ಬೇಸರದ ಸಂಗತಿಯೊಂದ ಹೊರಬಂದಿದೆ.

'ತಲೈವರ್ 170' ಸಿನಿಮಾದಲ್ಲಿ ಮೂವರು ನಟಿಯರಿದ್ದು, ಅದರಲ್ಲಿ ಒಬ್ಬರಾಗಿರುವ ನಟಿ ರಿತಿಕಾ ಸಿಂಗ್ ಶೂಟಿಂಗ್ ವೇಳೆ ಸ್ವತಃ ಗಾಯ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿನಲ್ಲಿ ವೀಡಿಯೊ ಹಂಚಿಕೊಂಡಿದ್ದು, ತನ್ನ ಗಾಯದ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ.

Rajinikanth’s costar Ritika Singh injured during Thalaivar 170 shooting

'ತಲೈವರ್ 170' ನಟಿ ರಿತಿಕಾ ಸಿಂಗ್‌ಗೆ ಗಾಯ

ನಟಿ ರಿತಿಕಾ ಸಿಂಗ್ ಯಾವ ಸೆಟ್‌ನಲ್ಲಿ ಗಾಯಗೊಂಡಿದ್ದಾರೆ ಎಂದು ನಟ ಉಲ್ಲೇಖಿಸದಿದ್ದರೂ, ಅದು ರಜನಿಕಾಂತ್ ಜೊತೆಗೆ ನಟಿಸುತ್ತಿರುವ 'ತಲೈವರ್ 170' ಶೀರ್ಷಿಕೆಯ ಮುಂಬರುವ ಚಿತ್ರದ ಚಿತ್ರೀಕರಣದಲ್ಲಿರಬಹುದು ಎಂದು ಹೇಳಲಾಗಿದೆ. 'ಇರುಧಿ ಸುತ್ತು' ಮತ್ತು 'ಆಂಡವನ್ ಕಟ್ಟಲೈ' 'ಕೊಲೈ' ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ರಿತಿಕಾ ಸಿಂಗ್, ಈ ಅವಘಡಕ್ಕೆ ತಮ್ಮನ್ನು ತಾವು ದೂಷಿಸಿಕೊಂಡಿದ್ದಾರೆ.

ನಟಿ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೋಗೂ ಮೊದಲು ತಮ್ಮನ ಕೈಮೇಲೆ ಆಗಿರುವ ಗಾಯ್ ಫೋಟೋಗಳನ್ನು ಹಂಚಿಕೊಂಡಿದ್ದರು. ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ "ನಾನು ತೋಳದೊಂದಿಗೆ ಜಗಳ ಮಾಡಿಕೊಂಡಂತೆ ಕಾಣುತ್ತಿದೆ!" ಎಂದಿದ್ದರು. ಆದಾದ ನಂತರ ಶೂಟಿಂಗ್ ವೇಳೆ ಏನಾಯಿತು ಎಂದು ವಿವರವಾಗಿ ವಿಡಿಯೋ ಹಂಚಿಕೊಂಡಿದ್ದಾರೆ.

"ಹೀಗಾಗಿರುವುದನ್ನು ನಾನು ಸಾಕಷ್ಟು ಬೇಸರ ಮಾಡಿಕೊಂಡಿದ್ದೇನೆ. ಅವರು ನನಗೆ ಹೇಳುತ್ತಿದ್ದರು, ಜಾಗರೂಕರಾಗಿರಿ, ಅಲ್ಲಿ ಗಾಜು ಇದೆ ಎಂದು ನನಗೆ ಎಚ್ಚರಿಕೆ ನೀಡಿದರು. ಆದರೆ, ಏನು ಮಾಡುವುದು ಕೆಲವೊಮ್ಮೆ ಹೀಗೆ ಆಗುತ್ತದೆ. ನೀವು ಎಲ್ಲವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಅಲ್ಲವೇ?" ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

Rajinikanth’s costar Ritika Singh injured during Thalaivar 170 shooting

ಇದಾದ ನಂತರ ವೈದ್ಯರಿಂದ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗಲು ಶೂಟಿಂಗ್‌ನಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ಜೊತೆಗೆ ತಾನು ಬೇಗ ಚೇತರಿಸಿಕೊಂಡು ಸೆಟ್‌ಗೆ ಹೋಗುತ್ತೇನೆ ಎಂದಿದ್ದಾರೆ. "ನನಗೆ ಈಗ ಯಾವುದೇ ನೋವು ಕಾಣಿಸಿತ್ತಿಲ್ಲ. ಆದರೆ, ಆಮೇಲೆ ಈ ಗಾಯಗಳು ನನಗೆ ನೋವು ನೀಡುವುದು ಪಕ್ಕ. ಏಕೆಂದರೇ ಈ ಕಟ್‌ಗಳು ತುಂಬಾ ಆಳವಾಗಿದೆ. ಹೀಗಾಗಿ ನಾನು ಸಿನಿಮಾ ಶೂಟಿಂಗ್ ಸೆಟ್‌ನಿಂದ ಸೀದಾ ಆಸ್ಪತ್ರೆಗೆ ಹೋಗುತ್ತಿದ್ದೇನೆ. ಈ ಗಾಯಗಳು ಬೇಗ ಗುಣವಾಗಿ ನಾನು ಬೇಗ ಶೂಟಿಂಗ್‌ಗೆ ವಾಪಸ್ ಹೋಗುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಜನಿಕಾಂತ್ ಅಭಿನಯದ 'ತಲೈವರ್ 170'

'ಜೈಭೀಮ್' ಖ್ಯಾತಿಯ ಟಿಜೆ ಜ್ಞಾನವೇಲ್ ಬರೆದು ನಿರ್ದೇಶಿಸಿರುವ 'ತಲೈವರ್ 170' ಚಿತ್ರದಲ್ಲಿ ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಮತ್ತು ದುಶಾರ ವಿಜಯನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿರುವ 'ತಲೈವರ್ 170' ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ, ಎಸ್ ಆರ್ ಕಥಿರ್ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನವಿದೆ. 'ಜೈಲರ್' ಸೂಪರ್ ಡೂಪರ್ ಹಿಟ್ ಸಿನಿಮಾ ಆಗಿರುವ ಕಾರಣ 'ತಲೈವರ್ 170' ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ.

More from Filmibeat

English summary
Actress Ritika Singh injured during Thalaivar 170 shoot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X