ಐಶ್ವರ್ಯ ರಜನಿಕಾಂತ್ ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ ಸೌಂದರ್ಯ ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಮತ್ತೊಬ್ಬ ಪುತ್ರಿ ಐಶ್ವರ್ಯ ಮನೆಯಲ್ಲಿದ್ದ ಚಿನ್ನ ವಜ್ರಾಭರಣ ಕಳುವಾಗಿ ಎಂದು ದೂರು ನೀಡಿದ್ದರು. ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಮತ್ತೆ ಸೌಂದರ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಾರಿ ಕಾರಿನ ಕೀ ಕಳುವಾಗಿದೆ ಎಂದು ಹೇಳಿದ್ದಾರೆ.
ಸೌಂದರ್ಯ ಖಾಸಗಿ ಕಾಲೇಜುವೊಂದರ ಕಾರ್ಯಕ್ರಮಕ್ಕೆ ರೇಂಜ್ ರೋವರ್ ಕಾರಿನಲ್ಲಿ ಹೋಗಿದ್ದರು. ಈ ವೇಳೆ ತಮ್ಮ ಮತ್ತೊಂದು ಎಸ್‌ಯುವಿ ಕಾರಿನ ಕೀಯನ್ನು ಕಳೆದುಕೊಂಡಿರುವುದಾಗಿ ದೂರು ನೀಡಿದ್ಧಾರೆ. ಯಾರ ಮೇಲೆ ಕೂಡ ಅನುಮಾನ ವ್ಯಕ್ತಪಡಿಸಿಲ್ಲ. ಆದರೆ ಕೀ ಕಳೆದು ಹೋಗಿದೆ ಹುಡುಕಿ ಕೊಡಿ ಎಂದು ಏಪ್ರಿಲ್ 23ರಂದು ಚೆನ್ನೈ ತೇನಂಪೇಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಸೌಂದರ್ಯ 'ಕೊಚಾಡಿಯನ್', 'ವಿಐಪಿ- 2' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

ಕೆಲ ಸಿನಿಮಾಗಳಿಗೆ ಗ್ರಾಫಿಕ್ಸ್ ಡಿಸೈನರ್ ಆಗಿ ಕೆಲಸ ಮಾಡಿದ್ದ ಸೌಂದರ್ಯ ನಂತರ ಸಿನಿಮಾ ನಿರ್ದೇಶನ, ನಿರ್ಮಾಣ ಆರಂಭಿಸಿದರು. ಕೆಲ ದಿನಗಳ ಹಿಂದೆ ಸೌಂದರ್ಯ ಸಹೋದರಿ ಐಶ್ವರ್ಯ ಮನೆಯ ಲಾಕರ್‌ನಲ್ಲಿ ಇಟ್ಟಿದ್ದ 60 ಸವರನ್ ಚಿನ್ನಾಭರಣ ಕಳುವಾಗಿ ಎಂದು ದೂರು ನೀಡಿದ್ದರು. ಮನೆಯಲ್ಲಿ ಕೆಲಸ ಮಾಡುವ ಮೂವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಕೆಲವೇ ದಿನಗಳಲ್ಲಿ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದರು. ಆ ವಿಚಾರ ಬಹಳ ಸದ್ದು ಮಾಡಿತ್ತು.
ಚಿನ್ನಾಭರಣ ಕದ್ದಿದ್ದ ಕೆಲಸದಾಕೆ
ಐಶ್ವರ್ಯ ಮನೆಯ ಕಾರು ಚಾಲಕ ವೆಂಕಟೇಶಂ ಸಹಕಾರದಿಂದ ಮನೆಕೆಲಸದಾಕೆ ಈಶ್ವರಿ 100 ಸವರನ್ ಚಿನ್ನಭರಣ, 30 ಗ್ರಾಂ ವಜ್ರಾಭರಣ, 4 ಕೆಜಿ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ್ದಾಗಿ ವರದಿ ಆಗಿತ್ತು. 17 ವರ್ಷ ಐಶ್ವರ್ಯ ಮನೆಯಲ್ಲಿ ಈಶ್ವರಿ ಕೆಲಸ ಮಾಡುತ್ತಿದ್ದಳು. ಹಾಗಾಗಿ ಆಕೆಗೆ ಮನೆಯ ಬಗ್ಗೆ ಎಲ್ಲಾ ಗೊತ್ತಿತ್ತು. ಹಲವು ಬಾರಿ ಲಾಕರ್ ತೆಗೆದು ಕಳ್ಳತನ ಮಾಡಿದ್ದಳು ಎಂದು ವಿಚಾರಣೆ ವೇಳೆ ಗೊತ್ತಾಗಿತ್ತು.
ಕದ್ದ ಚಿನ್ನಾಭರಣವನ್ನು ಈಶ್ವರಿ ಮನೆ ಖರೀದಿಸಲು ಬಳಸಿಕೊಂಡಿರುವುದಾಗಿ ಪೊಲೀಸರ ತನಿಖೆ ವೇಳೆ ಗೊತ್ತಾಗಿತ್ತು. ಆಕೆ ಮನೆ ಖರೀದಿಸಿರುವುದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಡೈಮಂಡ್ ಸೆಟ್, ಆಲಯ ಡಿಸೈನ್ ಆಭರಣ, ಅನ್‌ಕಟ್ ಡೈಮಂಡ್ಸ್, ಪುರಾತನ ಚಿನ್ನದ ತುಂಡುಗಳು, ನವರತ್ನಂ ಸೆಟ್ಟು, ವಜ್ರಖಚಿತ 2 ನೆಕ್‌ಪೀಸ್, ಕಿವಿ ಓಲೆ, ಆರಮ್ ನೆಕ್ಲೆಸ್, ಚಿನ್ನದ ಬಳೆಗಳು ಸೇರಿ 60 ಸವರನ್ ಚಿನ್ನಭರಣ ಕಳ್ಳತನ ಆಗಿರುವುದಾಗಿ ಐಶ್ವರ್ಯ ದೂರಿನಲ್ಲಿ ತಿಳಿಸಿದ್ದರು.

ಕಳ್ಳತನ ಆಗಿದೆ ಎಂದು ದೂರು ನೀಡುವ ಜೊತೆಗೆ ಯಾರು ಕದ್ದಿರಬಹುದು ಎನ್ನುವ ಬಗ್ಗೆ ಕೆಲವರ ಮೇಲೆ ಐಶ್ವರ್ಯ ಅನುಮಾನ ವ್ಯಕ್ತಪಡಿಸಿದ್ದರು. ಅದು ಪೊಲೀಸರ ತನಿಖೆಗೆ ಸಹಾಯಕವಾಗಿತ್ತು. ಮೂವರು ಮನೆ ಕೆಲಸದವರ ಮೇಲೆ ಸಂಶಯ ಇದೆ ಎಂದು ದೂರಿನಲ್ಲಿ ವಿವರಿಸಿದ್ದರು. ಹಾಗಾಗಿ ಪೊಲೀಸರ ತನಿಖೆಯಿಂದ ಕಳ್ಳರು ಸುಲಭವಾಗಿ ಸಿಕ್ಕಿ ಬಿದ್ದಿದ್ದರು.
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಸೌಂದರ್ಯ 'ಪೊನ್ನಿಯಿನ್ ಸೆಲ್ವನ್' ಕಾದಂಬರಿಯಲ್ಲಿ ವೆಬ್ ಸೀರಿಸ್ ರೂಪದಲ್ಲಿ ಕಟ್ಟಿಕೊಡುತ್ತಿದ್ದಾರೆ. ಪ್ರಾಜೆಕ್ಟ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದೇ ಕಾದಂಬರಿಯನ್ನು ನಿರ್ದೇಶಕ ಮಣಿರತ್ನಂ 2 ಭಾಗಗಳಾಗಿ ತೆರೆಗೆ ತಂದಿದ್ದಾರೆ. 2ನೇ ಭಾಗ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೇ ಕಥೆಯನ್ನು 5 ಭಾಗಗಳಾಗಿ ವೀಕ್ಷಕರ ಮುಂದೆ ತರುವ ಪ್ರಯತ್ನಕ್ಕೆ ಸೌಂದರ್ಯ ಕೈ ಹಾಕಿದ್ದಾರೆ.


Click it and Unblock the Notifications











