500 ಕೋಟಿ ಕ್ಲಬ್ ಸೇರಿದ 7ನೇ ದಕ್ಷಿಣ ಭಾರತೀಯ ಚಿತ್ರ 'ಜೈಲರ್'; ಇತರೆ ಚಿತ್ರಗಳ ಪಟ್ಟಿ ಇಲ್ಲಿದೆ
ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡುತ್ತಿರುವ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್' ನಾಗಾಲೋಟ ಮುಂದುವವರೆಸಿದೆ. 10 ದಿನಕ್ಕೆ ಸಿನಿಮಾ ಗಳಿಕೆ 500 ಕೋಟಿ ರೂಪಾಯಿ ಗಡಿ ದಾಟಿದೆ. ನೆಲ್ಸನ್ ನಿರ್ದೇಶನದಲ್ಲಿ ರಜನಿಕಾಂತ್, ಶಿವರಾಜ್‌ಕುಮಾರ್, ಮೋಹನ್ ಲಾಲ್, ಜಾಕಿ ಶ್ರಾಫ್, ರಮ್ಯಕೃಷ್ಣ, ವಿನಾಯಕ್ ಅಭಿನಯ ಜನರನ್ನು ರಂಜಿಸಿದೆ.
ಎರಡನೇ ವಾರದಲ್ಲಿಯೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ಜೈಲರ್ 1000 ಕೋಟಿ ರೂಪಾಯಿ ಕ್ಲಬ್ ಸೇರುವ ನಿರೀಕ್ಷೆಯಿದೆ. ಇದರ ಜೊತೆಗೆ ತಮಿಳು ಚಿತ್ರರಂಗದ ಹೊಸ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಆಗುವ ಸಾಧ್ಯತೆಯಿದೆ. ಅಣ್ಣಾತೆಯ ಸೋಲಿನಿಂದ ಕಂಗೆಟ್ಟಿದ್ದ ತಲೈವಾ ಅಭಿಮಾನಿಗಳಿಗೆ ಜೈಲರ್ ಹೊಸ ಉತ್ಸಾಹ ನೀಡಿದೆ.

500 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಜೈಲರ್
ಜೈಲರ್ ಸಿನಿಮಾವು 500 ಕೋಟಿ ಕ್ಲಬ್‌ಗೆ ಪ್ರವೇಶಿಸಿದೆ. ಚಿತ್ರವೂ ಎಲ್ಲಾ ಭಾಷೆಗಳಲ್ಲಿಯೂ ದಾಖಲೆಯ ಕಲೆಕ್ಷನ್‌ಗಳನ್ನು ಮಾಡುತ್ತಿದೆ. ಕೇವಲ 6 ದಿನಗಳಲ್ಲಿ, ಚಿತ್ರವು ತಮಿಳುನಾಡು, ಕೇರಳ, ಕರ್ನಾಟಕ, ತೆಲುಗು ರಾಜ್ಯಗಳು ಮತ್ತು ವಿದೇಶಗಳಲ್ಲಿ ಉತ್ತಮ ಲಾಭ ಗಳಿಸಿದೆ. ಎಲ್ಲಾ ಸಿನಿಮಾ ತಂಡ ಲಾಭದ ಮೇಲೆ ಲಾಭ ಗಳಿಸುತ್ತಿದೆ.
ಜೈಲರ್ ಚಲನಚಿತ್ರವು ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್‌ಗೆ ಅತಿದೊಡ್ಡ ಲಾಭ ತಂದುಕೊಟ್ಟಿದೆ. ಬಿಡುಗಡೆಯಾದ ಎರಡು ವಾರದೊಳಗೆ 500 ಕೋಟಿ ಕ್ಲಬ್‌ಗೆ ಪ್ರವೇಶ ಪಡೆದಿದ್ದು, ಇನ್ನೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಜೈಲರ್ ಸಿನಿಮಾವೂ 500 ಕೋಟಿ ಕ್ಲಬ್‌ಗೆ ಪ್ರವೇಶಿಸಿದ 7 ನೇ ದಕ್ಷಿಣ ಭಾರತದ ಚಲನಚಿತ್ರವಾಗಿದೆ.

500 ಕೋಟಿ ಗಡಿ ದಾಟಿದ ದಕ್ಷಿಣ ಭಾರತದ ಚಿತ್ರಗಳ ಪಟ್ಟಿ ಇಲ್ಲಿದೆ.
1. ಬಾಹುಬಲಿ
2. ಬಾಹುಬಲಿ 2
3. 2.0
4. ಆರ್‌ಆರ್‌ಆರ್ (RRR)
5. ಕೆಜಿಎಫ್ 2
6. ಪೊನ್ನಿಯಿನ್ ಸೆಲ್ವನ್ 1
7. ಜೈಲರ್
ಜೈಲರ್ ಸಿನಿಮಾವು ಸಾರ್ವಕಾಲಿಕ ಹಿಟ್ ಆಗಲು ಮತ್ತು ತಮಿಳು ಚಿತ್ರರಂಗದಲ್ಲಿ ಹೊಸ ಮಾನದಂಡವನ್ನು ತರುವ ಹಾದಿಯಲ್ಲಿದೆ. ಹೀಗೆ ಇದರ ಆರ್ಭಟ ಮುಂದುವರೆದರೆ ಆದಷ್ಟು ಬೇಗ 1000 ಕೋಟಿ ರೂಪಾಯಿ ಕ್ಲಬ್ ಸೇರುವುದು ಪಕ್ಕ ಎನ್ನುತ್ತಿದೆ ಭಾರತೀಯ ಚಿತ್ರಂಗ.
ಎಲ್ಲಾ ಭಾಷೆಗಳ ಆವೃತ್ತಿಗಳನ್ನು ಪರಿಗಣಿಸಿದರೆ ರಜನಿಕಾಂತ್ ಅಭಿನಯದ 2.0 ಕಾಲಿವುಡ್‌ನಲ್ಲಿ ಪ್ರಸ್ತುತ ಹಿಟ್ ಸಿನಿಮಾ ಆಗಿದೆ. ಆದರೆ, ತಮಿಳು ಆವೃತ್ತಿಯನ್ನು ಮಾತ್ರ ಪರಿಗಣಿಸಿದರೆ, ಪೊನ್ನಿಯಿನ್ ಸೆಲ್ವನ್ ಭಾಗ 1 ಉದ್ಯಮದಲ್ಲಿ ಸೂಪರ್ ಹಿಟ್ ಚಲನಚಿತ್ರವಾಗಿದೆ. ಈಗ ಈ ಎಲ್ಲಾ ದಾಖಲೆಗಳನ್ನು ಜೈಲರ್ ಮುರಿಯುವ ನಿರೀಕ್ಷೆಯಿದೆ.
ಜೈಲರ್
ಆಗಸ್ಟ್ 10 ರಂದು ಆಕ್ಷನ್ ಎಂಟರ್‌ಟೈನರ್ 'ಜೈಲರ್' ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಬಿಡುಗಡಡಗೂ ಮುನ್ನ ಅಡ್ವಾನ್ಸ್ ಬುಕ್ಕಿಂಗಗನಲ್ಲಿಯೇ ದಾಖಲೆ ಬರೆದಿತ್ತು. ಆದಾದ ನಂತರ ಮೊದಲ ಪ್ರದರ್ಶನದಿಂದಲೇ ಭರ್ಜರಿ ಓಪನಿಂಗ್ ಪಡೆದ ಸಿನಿಮಾ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯಲು ಆರಂಭಿಸಿತು. ಕರ್ನಾಟಕದಲ್ಲೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಈಗಾಗಲೇ ಕರ್ನಾಟಕದಲ್ಲೇ 40 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಕರ್ನಾಟಕದಲ್ಲಿ ಜೈಲರ್ ಸಕ್ಸಸ್ ಹಿಂದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಥಿತಿ ಪಾತ್ರ ಹೆಚ್ಚು ಕೊಡುಗೆ ನೀಡಿದೆ.


Click it and Unblock the Notifications











