ರಜನಿಕಾಂತ್ ಮತ ಚಲಾಯಿಸುವಾಗ ಎಡವಟ್ಟು; ತಲೈವಾ ಯಾರಿಗೆ ಮತ ಹಾಕಿದ್ರು ಎಂದು ನೋಡಿಬಿಟ್ಟ ಸಿಬ್ಬಂದಿ!

ಸಿನಿಮಾ ತಾರೆಯರು ಮತ ಚಲಾಯಿಸುವ ವೇಳೆ ಅಭಿಮಾನಿಗಳು, ಮಾಧ್ಯಮದವರು ಮತಗಟ್ಟೆ ಬಳಿ ಮುತ್ತಿಕೊಳ್ಳುತ್ತಾರೆ. ಇದರಿಂದ ಕೆಲವೊಮ್ಮೆ ಗೊಂದಲದ ವಾತಾವರಣ ನಿರ್ಮಾಣವಾಗುತ್ತದೆ. ಮತದಾರರು ಯಾರಿಗೆ ಮತ ಚಲಾಯಿಸುತ್ತಾರೆ ಎನ್ನುವುದು ಅವರಿಗೆ ಮಾತ್ರ ಗೊತ್ತಿರಬೇಕು. ಹಾಗಾಗಿ ಮತಗಟ್ಟೆಗಳಲ್ಲಿ ಇವಿಎಂ ಮಿಷನ್ ಸುತ್ತಾ ತಡೆಗೋಡೆ ಇರುತ್ತದೆ. ಮತದಾರರು ಒಂದು ಬದಿಯಲ್ಲಿ ನಿಂತು ಮತ ಚಲಾಯಿಸಲು ಅವಕಾಶ ಇರುತ್ತದೆ.

ತಮಿಳು ನಟ ರಜನಿಕಾಂತ್ ತಮಿಳುನಾಡು ವಿಧಾನಸಭೆ ಚುನಾವಣೆಗೆ ವೋಟ್ ಮಾಡಿದರು. ಬೆಳಗ್ಗೆ 9 ಗಂಟೆ ವೇಳೆಗೆ ಚೆನ್ನೈನ ಸ್ಟೆಲಾ ಮೇರಿಸ್ ಕಾಲೇಜ್ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಈ ವೇಳೆ ಅಭಿಮಾನಿಗಳು, ಮಾಧ್ಯಮದ ಛಾಯಾಗ್ರಾಹರು ಮುತ್ತಿಕೊಂಡು ಗೊಂದಲದ ಸನ್ನಿವೇಶ ಎದುರಾಯಿತು. ಇವಿಎಂ ಯಂತ್ರದವರೆಗೆ ಹೋಗಿ ಛಾಯಾಗ್ರಾಹಕರು ವೀಡಿಯೋ ಸೆರೆ ಹಿಡಿದಿದ್ದಾರೆ.

Rajinikanth s Vote Sparks Privacy Debate Amid Chaos at Tamil Nadu Assembly Elections 2026

ಅಲ್ಲಿಂದ ಭದ್ರತಾ ಸಿಬ್ಬಂದಿ ಎಲ್ಲರನ್ನು ದೂರು ಕಳುಹಿಸಿ ರಜನಿಕಾಂತ್ ಮತ ಚಲಾಯಿಸಲು ಅನುವು ಮಾಡಿಕೊಟ್ಟರು. ಇದೇ ವೇಳೆ ಪಕ್ಕದಲ್ಲಿ ನಿಂತಿದ್ದ ಭದ್ರತಾ ಸಿಬ್ಬಂದಿ ಹಾಗೂ ಮತಗಟ್ಟೆಯ ಮಹಿಳಾ ಸಿಬ್ಬಂದಿ ಒಬ್ಬರು ರಜನಿಕಾಂತ್ ಯಾರಿಗೆ ಮತ ಚಲಾಯಿಸಿದರು ಎಂದು ಕದ್ದು ನೋಡುವ ಸಾಹಸ ಮಾಡಿದ್ದಾರೆ. ವೀಡಿಯೋದಲ್ಲಿ ಅದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಇದು ತಪ್ಪು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ನಟ ಅಜಿತ್ ಮತ ಚಲಾಯಿಸುವ ವೇಳೆ ಕೂಡ ಅಭಿಮಾನಿಗಳು, ಮಾಧ್ಯಮ ಛಾಯಾಗ್ರಾಹಕರು ಇದೇ ರೀತಿ ಸ್ಟಾರ್ ನಟನನ್ನು ನೋಡಲು ಮುಗಿಬಿದ್ದರು.

ಈ ಬಾರಿ ತಮಿಳು ನಟ ವಿಜಯ್ ಸ್ವಂತ ಪಕ್ಷ ಕಟ್ಟಿ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಬಹಳ ಕುತೂಹಲ ಮೂಡಿಸಿದೆ. ಈ ಹಿಂದೆ ನಟ ರಜನಿಕಾಂತ್ ಕೂಡ ಸ್ವಂತ ಪಕ್ಷ ಕಟ್ಟುವ ಸಾಹಸ ಮಾಡಿದ್ದರು. ಬಹಿರಂಗವಾಗಿ ಈ ಬಗ್ಗೆ ಘೋಷಿಸಿದ್ದ ತಲೈವಾ ಬಳಿಕ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಆರೋಗ್ಯದ ನೆಪವೊಡ್ಡಿ ಸಕ್ರಿಯ ರಾಜಕಾರಣಕ್ಕೆ ಬರಲ್ಲ ಎಂದುಬಿಟ್ಟರು. ಆದರೆ ನಟ ವಿಜಯ್ ಆ ಧೈರ್ಯ ಮಾಡಿದ್ದಾರೆ.

ಮತ ಚಲಾಯಿಸಿ ಹೊರಡುವಾಗ ಕಾರ್‌ನಲ್ಲಿ ಕೂತು ರಜನಿಕಾಂತ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. "ಮತದಾನದ ಹಕ್ಕು ಇರುವ ಪ್ರತಿಯೊಬ್ಬರು ತಪ್ಪದೇ ಮತ ಚಲಾಯಿಸಿ" ಎಂದು ರಜನಿಕಾಂತ್ ಹೇಳಿ ಮನವಿ ಮಾಡಿ ಹೊರಟಿದ್ದಾರೆ.

Read more about: rajinikanth vijay politics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X