ವೆಂಕಯ್ಯ ನಾಯ್ಡು ಅವ್ರಿಗೆ ಉಪರಾಷ್ಟ್ರಪತಿ ಹುದ್ದೆ ಕೊಟ್ಟಿದ್ದು ನನಗೆ ಇಷ್ಟವಾಗಲಿಲ್ಲ: ರಜನಿಕಾಂತ್
ಭಾರತದ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕುರಿತು ಸೂಪರ್ ಸ್ಟಾರ್ ರಜನಿಕಾಂತ್ ಸ್ವಾರಸ್ಯಕರವಾಗಿ ಮಾತನಾಡಿದ್ಧಾರೆ. ವೆಂಕಯ್ಯ ನಾಯ್ಡು ಅವ್ರಿಗೆ ಉಪರಾಷ್ಟ್ರಪತಿ ಹುದ್ದೆ ಕೊಟ್ಟಿದ್ದು ನನಗೆ ಇಷ್ಟವಾಗಲಿಲ್ಲ ಎಂದು ಹೇಳಿದ್ದಾರೆ. ಶನಿವಾರ ತಲೈವಾ ಸೆಪಿಯನ್ಸ್ ಹೆಲ್ತ್ ಫೌಂಡೇಷನ್ ರಜತೋತ್ಸವದಲ್ಲಿ ಭಾಗಿ ಆಗಿದ್ದರು. ಈ ಕಾರ್ಯಕ್ರಮಕ್ಕೆ ವೆಂಕಯ್ಯ ನಾಯ್ಡು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ವೇದಿಕೆಯಲ್ಲಿ ಮಾತನಾಡುತ್ತಾ ರಜನಿಕಾಂತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೆಂಕಯ್ಯ ನಾಯ್ಡು ಅವರಿಗೆ ಉಪರಾಷ್ಟ್ರಪತಿ ಹುದ್ದೆ ಕೊಟ್ಟಿದ್ದು ನನಗೆ ಇಷ್ಟವಾಗಲಿಲ್ಲ. ಒಳ್ಳೆ ನಾಯಕನನ್ನು ರಾಜಕೀಯದಿಂದ ದೂರ ಮಾಡಿದರು. ಉಪ ರಾಷ್ಟ್ರಪತಿಗೆ ಹೆಚ್ಚಿನ ಅಧಿಕಾರ ಇರುವುದಿಲ್ಲ. ಇನ್ನು ಸ್ವಲ್ಪ ದಿನ ಅವರು ಕೇಂದ್ರ ಮಂತ್ರಿ ಆಗಿ ಇದ್ದಿದ್ದರೆ ಇನ್ನು ಚೆನ್ನಾಗಿ ಇರುತ್ತಿತ್ತು ಎಂದು ತಮ್ಮ ಅಂತರಾಳ ಬಿಚ್ಚಿಟ್ಟಿದ್ದಾರೆ.

"ವೆಂಕಯ್ಯ ನಾಯ್ಡು ಆಂಧ್ರಪ್ರದೇಶದ ನೆಲ್ಲೂರಿನ ಕುಗ್ರಾಮದಲ್ಲಿ ಹುಟ್ಟಿದವರು. ಕುಗ್ರಾಮ ಅದು ಕೂಡ ಒಂದು ಸಾಧಾರಣ ಫ್ಯಾಮಿಲಿ. ಅಲ್ಲೇ ಸ್ಕೂಲ್ ಇರಲಿಲ್ಲ. ಅಲ್ಲಿಂದ ಕಷ್ಟಪಟ್ಟು ಬೇರೆ ಊರಿಗೆ ಹೋಗಿ ಓದಿ, ನಂತರ ವೈಜಾಗ್‌ನ ಆಂಧ್ರ ವಿಶ್ವವಿದ್ಯಾಲಯದಲ್ಲಿ ಸೇರಿದರು. 1973ರಲ್ಲಿ ಯೂತ್ ಲೀಡರ್ ಆಗಿ ಆಗ್ಲೇ ಜನತಾ ಪಾರ್ಟಿಯಲ್ಲಿ ಸೇರಿ ನಂತರ ಅದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ವಾಜಪೇಯಿ ಅವರ ಊರಿಗೆ ಹೋದಾಗ ಇವರೇ ಪೋಸ್ಟರ್ ಎಲ್ಲಾ ಅಂಟಿಸಿದ್ದರು. ಆಂಧ್ರ ಪ್ರದೇಶ ಬಿಜೆಪಿ ಅಧ್ಯಕ್ಷ , ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ, ಉಪಾಧ್ಯಕ್ಷ , ಕೇಂದ್ರ ಚುನಾವಣಾ ಸಮಿತಿ ಕಾರ‍್ಯದರ್ಶಿ, ಪಕ್ಷ ದ ಸಂಸದೀಯ ಮಂಡಳಿಯ ಕಾರ್ಯದರ್ಶಿ ಆಗಿ ಒಂದೇ ಪಕ್ಷದಲ್ಲಿ ಇದ್ದು ಯಾವುದೇ ಕಪ್ಪು ಚುಕ್ಕೆ ಅವರ ರಾಜಕೀಯ ಜೀವನದಲ್ಲಿ ಇಲ್ಲ."
"ಪಕ್ಷದಲ್ಲಿ ಎಲ್ಲರೂ ಅವರನ್ನು ಗೌರವಿಸುತ್ತಾರೆ. ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾಗಿ ಪ್ರಮಾನ ವಚನ ಸ್ವೀಕರಿಸಿದಾಗ ನನಗೆ ಬೇಸರವಾಗಿತ್ತು. ನಾನು ಸಂವಿಧಾನದಲ್ಲಿ 2ನೇ ಅತ್ಯುತ್ತಮ ಹುದ್ದೆಯನ್ನು ನಾನು ಅಗೌರವಿಸುತ್ತಿಲ್ಲ. ಆದರೆ ಆ ಹುದ್ದೆಗೆ ಅಧಿಕಾರ ಬಹಳ ಕಮ್ಮಿ. ಸಾಕಷ್ಟು ಪ್ರೊಟೊಕಾಲ್, ಕಂಡೀಷನ್‌ಗಳು ಇರುತ್ತವೆ. ಒಬ್ಬ ಅದ್ಭುತ ರಾಜಕಾರಣಿ ಅವರು. ಅದ್ಭುತ ವಾಗ್ಮಿ, ಸಂಸದೀಯ ಪಟು ಅವರು ಸಕ್ರಿಯ ರಾಜಕೀಯರಂಗದಲ್ಲಿ ಅವರು ಇರಬೇಕಿತ್ತು" ಎಂದು ರಜನಿಕಾಂತ್ ಹೇಳಿದ್ದಾರೆ.
ವೆಂಕಯ್ಯ ನಾಯ್ಡು ಮಾತನಾಡಿ ರಜನಿಕಾಂತ್ ಅದ್ಭುತ ನಟ. ಅವರು ರಾಜಕೀಯಕ್ಕೆ ಬರೋದು ಬೇಡ ಎಂದು ನಾನು ಹೇಳಿದೆ. ಆರೋಗ್ಯವಾಗಿ ಇರುಬೇಕು ಎಂದರೆ ರಾಜಕೀಯಕ್ಕೆ ಬರಬಾರದು ಎಂದು ನಾನು ಸಲಹೆ ನೀಡಿದ್ದೆ. ಪ್ರಜೆಗಳ ಸೇವೆ ಮಾಡಲು ರಾಜಕೀಯ ಒಂದೇ ಮಾರ್ಗ ಅಲ್ಲ.

ಬೇರೆ ಸಾಕಷ್ಟು ಮಾರ್ಗಗಳಿವೆ. ಅದೇ ರೀತಿ ರಾಜಕೀಯಕ್ಕೆ ಬರುವವರಿಗೆ ನಿರುತ್ಸಾಹ ಮೂಡಿಸಲ್ಲ. ಯುವಕರು ರಾಜಕೀಯಕ್ಕೆ ಬರಬೇಕು. ಕ್ರಮಶಿಕ್ಷಣ, ನ್ಯಾಯಸಮ್ಮತ, ತ್ಯಾಗ ಮನೋಭಾವ ಇರುವವರು ಬರಬೇಕು ಎಂದಿದ್ದಾರೆ.


Click it and Unblock the Notifications











