For Quick Alerts
  ALLOW NOTIFICATIONS  
  For Daily Alerts

  'ಅಣ್ಣಾತ್ತೆ' ಎಂಟ್ರಿಯಲ್ಲಿ ಬದಲಾವಣೆ ಇಲ್ಲ, ನಿರ್ಧರಿಸಿದ ದಿನಕ್ಕೆ ಬರ್ತಾರೆ ತಲೈವಾ

  |

  ಕೊರೊನಾ ವೈರಸ್ ಎರಡನೇ ಅಲೆ ಪರಿಣಾಮ ರಿಲೀಸ್ ದಿನಾಂಕ ಪ್ರಕಟಿಸಿಕೊಂಡಿದ್ದ ಬಹುತೇಕ ಚಿತ್ರಗಳು ಮತ್ತೆ ಮುಂದೂಡಬೇಕಾದ ಸ್ಥಿತಿ ಬಂದಿದೆ. ಕೆಜಿಎಫ್, ಪುಷ್ಪ, ಆಚಾರ್ಯ, ಆರ್‌ಆರ್‌ಆರ್ ಸೇರಿದಂತೆ ದೊಡ್ಡ ಸಿನಿಮಾಗಳು ಬಿಡುಗಡೆ ದಿನಾಂಕ ದಿನಾಂಕ ಬದಲಿಸಿದೆ.

  ಆದರೆ, ಸೂಪರ್ ಸ್ಟಾರ್ ರಜನಿಕಾಂತ್ ಮಾತ್ರ ಈ ಹಿಂದೆ ಪ್ರಕಟಿಸಿದ್ದ ದಿನಾಂಕಕ್ಕೆ ಚಿತ್ರಮಂದಿರಕ್ಕೆ ಬರುವ ಧೈರ್ಯ ಮಾಡಿದ್ದಾರೆ. ಅಣ್ಣಾತ್ತೆ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಸನ್ ಪಿಕ್ಚರ್ಸ್ ಸಂಸ್ಥೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದು, ಈ ಹಿಂದೆ ಘೋಷಿಸಿದ್ದಂತೆ ದೀಪಾವಳಿ ಹಬ್ಬಕ್ಕೆ ತೆರೆಗೆ ಬರುವುದಾಗಿ ಟ್ವೀಟ್ ಮಾಡಿದೆ.

  ರಜನಿಕಾಂತ್ ಆರೋಗ್ಯ ರಹಸ್ಯ: ಚರ್ಚೆ ಹುಟ್ಟುಹಾಕಿದ ಕಸ್ತೂರಿ ಶಂಕರ್ ಪೋಸ್ಟ್ರಜನಿಕಾಂತ್ ಆರೋಗ್ಯ ರಹಸ್ಯ: ಚರ್ಚೆ ಹುಟ್ಟುಹಾಕಿದ ಕಸ್ತೂರಿ ಶಂಕರ್ ಪೋಸ್ಟ್

  ಈ ಮೂಲಕ ಅಣ್ಣಾತ್ತೆ ಚಿತ್ರವೂ ಮುಂದೂಡಿಕೆ ಕಾಣಬಹುದು ಎಂಬ ಲೆಕ್ಕಾಚಾರ ಉಲ್ಟಾ ಆಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 4 ರಂದೇ ರಜನಿ ಸಿನಿಮಾ ಥಿಯೇಟರ್‌ಗೆ ಬರುವುದು ಖಚಿತವಾಗಿದೆ.

  ಸದ್ಯಕ್ಕೆ ದೇಶದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರ್ತಿದೆ. ನಿಧಾನವಾಗಿ ಯಥಾಸ್ಥಿತಿಗೆ ಮರಳುವ ಲೆಕ್ಕಾಚಾರದಲ್ಲಿವೆ ಸರ್ಕಾರಗಳು. ಶೂಟಿಂಗ್‌ಗೆ ಅನುಮತಿ ನೀಡಿರುವ ಸರ್ಕಾರ, ಚಿತ್ರಮಂದಿರಕ್ಕೆ ಇನ್ನು ಒಪ್ಪಿಗೆ ಕೊಟ್ಟಿಲ್ಲ. ಜುಲೈ 10ನೇ ತಾರೀಕಿನ ನಂತರ ಥಿಯೇಟರ್‌ಗಳಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ.

  ಅಮೆರಿಕಾದಲ್ಲಿ ರಜನಿಕಾಂತ್

  ಇನ್ನು ಆರೋಗ್ಯ ತಪಾಸಣೆಗಾಗಿ ಸೂಪರ್ ಸ್ಟಾರ್ ರಜನಿಕಾಂತ್ ಯುಎಸ್ ತೆರಳಿದ್ದಾರೆ. ಅಮೆರಿಕಾದ ಮೆಯೊ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ತಲೈವಾ ಇನ್ನು ಸ್ವಲ್ಪ ದಿನ ಅಲ್ಲೇ ವಿಶ್ರಾಂತಿ ಪಡೆದು ನಂತರ ಭಾರತಕ್ಕೆ ಹಿಂತಿರುಗಲಿದ್ದಾರೆ.

  KGF 2 ನ ಎಲ್ಲಾ ಭಾಷೆಯ ಆಡಿಯೋ ಹಕ್ಕು ಖರೀದಿಸಿದ ಲಹರಿ ಸಂಸ್ಥೆ | Filmibeat Kannada

  ಸಿರುತೈ ಶಿವ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ ಜೊತೆ ನಯನತಾರ, ಕೀರ್ತಿ ಸುರೇಶ್, ಹಿರಿಯ ನಟ ಮೀನಾ, ಖುಷ್ಬೂ, ಪ್ರಕಾಶ್ ರಾಜ್, ಸೂರಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ಈ ಸಿನಿಮಾ ನಿರ್ಮಿಸುತ್ತಿದ್ದು, ಡಿ ಇಮ್ಮನ್ ಸಂಗೀತ ಇದೆ.

  English summary
  Superstar Rajinikanth starrer Annaatthe to release on 4th November 2021 (Deepavali).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X