ಮಕ್ಕಳಿಗೆ ತೋರಿಸುವಂತಿಲ್ಲ ರಜನಿಕಾಂತ್ 'ಕೂಲಿ' ಸಿನಿಮಾ; ಇದೆಂಥಾ ತಲೆಬಿಸಿ?

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಬಿಡುಗಡೆಗೆ ಇನ್ನೆರಡು ವಾರ ಬಾಕಿಯಿದೆ. ಶೀಘ್ರದಲ್ಲೇ ಟ್ರೈಲರ್ ಬಿಡುಗಡೆ ಆಗಲಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ನಾಗಾರ್ಜುನ, ಉಪೇಂದ್ರ ಹಾಗೂ ಆಮೀರ್ ಖಾನ್ ಕೂಡ ಚಿತ್ರದಲ್ಲಿದ್ದು ಭಾರೀ ನಿರೀಕ್ಷೆ ಮೂಡಿಸಿದೆ.

ಬಹುಕೋಟಿ ವೆಚ್ಚದಲ್ಲಿ ಸನ್ ಪಿಕ್ಚರ್ಸ್ ಸಂಸ್ಥೆ 'ಕೂಲಿ' ಸಿನಿಮಾ ನಿರ್ಮಿಸಿದೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಟೀಸರ್, ಸಾಂಗ್ಸ್ ಹಿಟ್ ಆಗಿದೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿ ಬರಲಿದೆ. ಚಿತ್ರದಲ್ಲಿ ಮಾಫಿಯಾ ಡಾನ್ ಆಗಿ ರಜನಿಕಾಂತ್ ನಟಿಸಿದ್ದಾರೆ ಎನ್ನಲಾಗ್ತಿದೆ. ವಿಲನ್ ಆಗಿ ನಾಗಾರ್ಜುನ ಅಬ್ಬರಿಸಿದ್ದಾರೆ.

Rajinikanth starrer Coolie gets an A certificate from the censor board

ಮಲಯಾಳಂ ನಟ ಶೋಬಿನ್ ಶಾಹಿರ್, ತಮಿಳು ನಟ ಸತ್ಯರಾಜ್, ನಟಿ ಶ್ರುತಿ ಹರಿಹರನ್ ಚಿತ್ರದ ತಾರಾಗಣದಲ್ಲಿದ್ದಾರೆ. ಪೂಜಾ ಹೆಗ್ಡೆ ಚಿತ್ರದ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ಅಂದಾಜು 350 ಕೋಟಿ ರೂ. ಬಜೆಟ್‌ನಲ್ಲಿ 'ಕೂಲಿ' ಸಿನಿಮಾ ತಯಾರಾಗಿದೆ. 'ಕೈದಿ', 'ಮಾಸ್ಟರ್', 'ವಿಕ್ರಂ' ಹಾಗೂ 'ಲಿಯೋ' ರೀತಿಯ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಲೋಕೇಶ್ ಕೊಟ್ಟಿದ್ದಾರೆ. ಹಾಗಾಗಿ ರಜನಿಕಾಂತ್ ಚಿತ್ರಕ್ಕೆ ಅವರು ಆಕ್ಷನ್ ಕಟ್ ಹೇಳಿರುವುದು ನಿರೀಕ್ಷೆ ಹೆಚ್ಚಿಸಿದೆ.

ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಸೆನ್ಸಾರ್ ಕಂಪ್ಲೀಟ್ ಆಗಿದೆ. ಆದರೆ ಚಿತ್ರಕ್ಕೆ 'A' ಸರ್ಟಿಫಿಕೇಟ್ ಸಿಕ್ಕಿದೆ. ಇದು ಸಹಜವಾಗಿಯೇ ಚಿತ್ರತಂಡ ಹಾಗೂ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ತಲೈವಾ ಸಿನಿಮಾ ಅಂದರೆ ಅಬಾಲವೃದ್ಧರಾಗಿ ಎಲ್ಲರೂ ನೋಡುತ್ತಾರೆ. ಫ್ಯಾಮಿಲಿ ಸಮೇತ ಪ್ರೇಕ್ಷಕರು ಚಿತ್ರಮಂದಿರಕ್ಕೆ ಭೇಟಿ ನೀಡುತ್ತಾರೆ. 'A' ಸರ್ಟಿಫಿಕೇಟ್ ಸಿಕ್ಕಿರುವುದರಿಂದ 18 ವರ್ಷ ಮೇಲ್ಪಟ್ಟವರು ಮಾತ್ರ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಅವಕಾಶ ಸಿಗಲಿದೆ.

'ಕೂಲಿ' ಚಿತ್ರಕ್ಕೆ ಸೆನ್ಸಾರ್ ಮಂಡಳಿ 'A' ಸರ್ಟಿಫಿಕೇಟ್ ಕೊಟ್ಟಿರುವುದನ್ನು ಅಧಿಕೃತವಾಗಿ ಚಿತ್ರತಂಡ ಘೋಷಿಸಿದೆ. ಆದರೆ ಶೀಘ್ರದಲ್ಲೇ ರಿವೈಸಿಂಗ್ ಕಮಿಟಿ ಮುಂದೆ ಹೋಗಿ U/A ಸರ್ಟಿಫಿಕೇಟ್‌ಗಾಗಿ ಚಿತ್ರತಂಡ ಮನವಿ ಮಾಡುವ ಲೆಕ್ಕಾಚಾರದಲ್ಲಿದೆ ಎನ್ನಲಾಗ್ತಿದೆ. ಅತಿಯಾದ ಹಿಂಸಾತ್ಮಕ ಸನ್ನಿವೇಶಗಳಿರುವುದರಿಂದ ಸೆನ್ಸಾರ್ ಮಂಡಳಿಯವರು ಈ ನಿರ್ಧಾರಕ್ಕೆ ಬಂದಿರಬಹುದು. ಅವಾಚ್ಯು ಶಬ್ಧಗಳು ಚಿತ್ರದಲ್ಲಿದೆ ಎನ್ನಲಾಗ್ತಿದೆ. ಆದರೆ ರಜನಿಕಾಂತ್ ಚಿತ್ರಕ್ಕೆ 'A' ಸರ್ಟಿಫಿಕೇಟ್ ಸಿಕ್ಕಿದೆ ಎನ್ನುವುದು ಕೆಲವರಿಗೆ ಕಸಿವಿಸಿ ಉಂಟುಮಾಡಿದೆ. ಇದೇ ಕಾರಣಕ್ಕೆ ಮತ್ತೊಮ್ಮೆ ಇದನ್ನು ಪರಿಶೀಲಿಸಲು ಚಿತ್ರತಂಡ ಮುಂದಾಗಿದೆ.

ಆಗಸ್ಟ್ 14ಕ್ಕೆ 'ಕೂಲಿ' ಸಿನಿಮಾ ತೆರೆಗೆ ಬರಲಿದೆ. ಅದೇ ದಿನ ಬಾಲಿವುಡ್ ಸಿನಿಮಾ 'ವಾರ್- 2' ಕೂಡ ಬಿಡುಗಡೆ ಆಗ್ತಿದೆ. ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಸೂಪರ್ ಹಿಟ್ 'ವಾರ್' ಸಿನಿಮಾ ಸೀಕ್ವೆಲ್ ಇದು. ಬಹಳ ಅದ್ಧೂರಿಯಾಗಿ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ಮಾಣ ಮಾಡಲಾಗಿದೆ. 'ಕೂಲಿ' ಚಿತ್ರದ ವಿತರಣೆ ಹಕ್ಕು ಭಾರೀ ಮೊತ್ತಕ್ಕೆ ಬಿಕರಿಯಾಗಿದೆ. ಸ್ವಾತಂತ್ರ ದಿನಾಚರಣೆ ವೀಕೆಂಡ್‌ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಲೆಕ್ಕಾಚಾರ ನಡೀತಿದೆ.

ಈಗಾಗಲೇ ಎರಡೂ ಚಿತ್ರಗಳ ನಡುವೆ ಚಿತ್ರಮಂದಿರಗಳಿಗಾಗಿ ಪೈಪೋಟಿ ಏರ್ಪಟ್ಟಿದೆ. ಎರಡೂ ದೊಡ್ಡ ಸಿನಿಮಾಗಳೇ ಆಗಿರುವುದರಿಂದ ಬಾಕ್ಸಾಫೀಸ್ ಕ್ಲ್ಯಾಶ್ ಲೆಕ್ಕಾಚಾರ ಜೋರಾಗಿದೆ. ಉತ್ತರ ಭಾರತದ ಪ್ರೇಕ್ಷಕರ ಮೊದಲ ಆಯ್ಕೆ ವಾರ್-2 ಆಗಿದ್ದರೆ ದಕ್ಷಿಂ ಭಾರತ ಸಿನಿರಸಿಕರ ಮೊದಲ ಆಯ್ಕೆ
'ಕೂಲಿ' ಸಿನಿಮಾ ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ.

More from Filmibeat

English summary
Rajinikanth's Coolie completes censor; team may apply for re-censorship for U/A certificate
Read more about: rajinikanth kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X