ಸಂಕ್ರಾಂತಿಗೆ ಮಾವ-ಅಳಿಯ ಮುಖಾಮುಖಿ: ಬಾಕ್ಸ್ ಆಫೀಸ್ ನಲ್ಲಿ ಮೆಗಾ ವಾರ್

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷೆಯ 'ದರ್ಬಾರ್' ಸಿನಿಮಾ ರಿಲೀಸ್ ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. 'ದರ್ಬಾರ್' ಈಗಾಗಲೆ ಚಿತ್ರೀಕರಣ ಮುಗಿಸಿ ಪೊಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇತ್ತೀಚಿಗಷ್ಟೆ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿರುವ 'ದರ್ಬಾರ್' ಮುಂದಿನ ವರ್ಷ ಸಂಕ್ರಾಂತಿಗೆ ತೆರೆಗೆ ಬರುತ್ತಿದೆ.

ರಜನಿಕಾಂತ್ ಸಿನಿಮಾ ರಿಲೀಸ್ ಆಗುತ್ತಿದೆ ಅಂದರೆ ಉಳಿದ ಸಿನಿಮಾಗಳು ಬಿಡುಗಡೆಗೆ ಹಿಂದೇಟು ಹಾಕುತ್ತಾರೆ. ಯಾಕಂದರೆ ರಜನಿ ಅಲೆಯಲ್ಲಿ ಉಳಿದ ಸಿನಿಮಾಗಳು ಕೊಚ್ಚಿಹೋಗುವ ಸಾಧ್ಯತೆ ಹೆಚ್ಚಾಗಿರುತ್ತೆ. ತಲೈವಾ ಖದರ್ ಅಷ್ಟರ ಮಟ್ಟಿಗಿದೆ. ಹೀಗಿರುವಾಗ ಸೂಪರ್ ಸ್ಟಾರ್ ಅಳಿಯ ಧನುಷ್, ಮಾವನ ಮುಂದೆಯೆ ತೊಡೆ ತಟ್ಟಿ ನಿಲ್ಲುವ ಧೈರ್ಯ ಮಾಡಿದ್ದಾರೆ.

ರಜನಿಕಾಂತ್ 'ದರ್ಬಾರ್' ಸಿನಿಮಾ ರಿಲೀಸ್ ದಿನವೇ ಧನುಷ್ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಧನುಷ್ ಅಭಿನಯದ ಬಹುನಿರೀಕ್ಷೆಯ 'ಪಟ್ಟಾಸ್' ಚಿತ್ರ ತೆರೆಗೆ ಬರಲು ಸಿದ್ಧವಾಗಿದೆಯಂತೆ. ಸಂಕ್ರಾಂತಿ ಹಬ್ಬದ ಸಂಭ್ರಮ ಒಂದಡೆ ಆದರೆ, ಮತ್ತೊಂದೆಡೆ ಮಾವ-ಅಳಿಯನ ಸಿನಿಮಾ ಒಂದೇ ದಿನ ತೆರೆಗೆ ಬರುತ್ತಿರುವ ಸಂಭ್ರಮ. ಅಭಿಮಾನಿಗಳಿಗಂತು ಡಬಲ್ ಸಂಭ್ರಮ.

Rajinikanth Starrer Darbar And Dhanush Starrer Pattas Movie Will Release Same Day

ಈ ಎರಡು ಸಿನಿಮಾಗಳು ಕಾಲಿವುಡ್ ನಲ್ಲಿ ಬಹುನಿರೀಕ್ಷೆಯನ್ನು ಹುಟ್ಟುಹಾಕಿರುವ ಸಿನಿಮಾಗಳು. ಹಾಗಾಗಿ ಅಭಿಮಾನಿಗಳು ಯಾವ ಸಿನಿಮಾಗೆ ಜೈ ಎನ್ನುತ್ತಾರೆ ಎನ್ನುವುದು ಸದ್ಯದ ಕುತೂಹಲ. ದರ್ಬಾರ್ ಸಿನಿಮಾ ಜನವರಿ 15ಕ್ಕೆ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿದೆ. ಅದೆ ದಿನ ಧನುಷ್ ಸಿನಿಮಾ ಕೂಡ ತೆರೆಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ.

'ದರ್ಬಾರ್' ಎ.ಆರ್ ಮುರುಗದಾಸ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರದಲ್ಲಿ ಸೂಪರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು 25 ವರ್ಷದ ಬಳಿಕ ರಜನಿಕಾಂತ್ ಖಾಕಿ ತೊಟ್ಟು ಖದರ್ ತೋರಿಸಲು ಬರುತ್ತಿದ್ದಾರೆ. ಇನ್ನು 'ಪಟ್ಟಾಸ್' ದುರೈ ಸೇಂತೀಲ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಸಿನಿಮಾ. ಚಿತ್ರದಲ್ಲಿ ಧನುಷ್ ದ್ವೀಪಾತ್ರದಲ್ಲಿ ಮಿಂಚಿದ್ದಾರೆ. ಭಾರಿ ನಿರೀಕ್ಷೆ ಮೂಡಿಸಿರುವ ಈ ಎರಡು ಸಿನಿಮಾಗಳು ಹೇಗಿರಲಿದೆ ಎನ್ನುವುದು ಚಿತ್ರಾಭಿಮಾನಿಗಳ ಕುತೂಹಲ.

More from Filmibeat

English summary
Super star Rajinikanth starrer Darbar and Dhanush starrer Pattas movie will release same day. Darbar movie will release on January 15th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X