For Quick Alerts
  ALLOW NOTIFICATIONS  
  For Daily Alerts

  'ದರ್ಬಾರ್' ಚಿತ್ರದ ಕಿಸ್ಸಿಂಗ್ ದೃಶ್ಯ ಸೇರಿದ್ದಂತೆ 11 ಕಡೆ ಕತ್ತರಿ

  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷೆಯ ದರ್ಬಾರ್ ಸಿನಿಮಾ ರಿಲೀಸ್ ಗೆ ದಿನಗಣನೆ ಪ್ರಾರಂಭವಾಗಿದೆ. ಈಗಾಗಲೆ ದರ್ಬಾರ್ ತಂಡ ಭರ್ಜರಿ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ. ಕೋಟಿ ಕೋಟಿ ಸುರಿದು ಪ್ರಚಾರಕಾರ್ಯ ನಡೆಸುತ್ತಿದೆ ಚಿತ್ರತಂಡ. ವಿಶೇಷ ಅಂದರೆ ಮೊದಲ ಬಾರಿಗೆ ವಿಮಾನದಲ್ಲಿ ದರ್ಬಾರ್ ಪೋಸ್ಟರ್ ಹಾಕಿ ಪ್ರಚಾರ ಮಾಡುತ್ತಿದೆ ಚಿತ್ರತಂಡ.

  ರಜನಿಕಾಂತ್ ದರ್ಬಾರ್ ಪ್ರಚಾರ ಅಕ್ಷರಶಃ ಆಕಾಶ ಸ್ಪರ್ಶಿಸಿದೆ. ಇದರ ನಡುವೆ ಚಿತ್ರತಂಡದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ದರ್ಬಾರ್ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಚಿತ್ರದ 11 ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಗಿದೆ. ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿದರೆ ಇನ್ನು ಕೆಲವು ದೃಶ್ಯಗಳನ್ನು ಟ್ರಿಮ್ ಮಾಡಿಲಾಗಿದೆಯಂತೆ. ಕೆಲವು ಪದಗಳನ್ನು ಬದಲಾಯಿಸಲು ಸೂಚಿಸಿದೆಯಂತೆ.

  ಕನ್ನಡದ ಮುಖ್ಯ ಚಿತ್ರಮಂದಿರದಲ್ಲಿ ದರ್ಬಾರ್: ಒಡೆಯ ಜಾಗಕ್ಕೆ ತಲೈವಾ ಎಂಟ್ರಿ!ಕನ್ನಡದ ಮುಖ್ಯ ಚಿತ್ರಮಂದಿರದಲ್ಲಿ ದರ್ಬಾರ್: ಒಡೆಯ ಜಾಗಕ್ಕೆ ತಲೈವಾ ಎಂಟ್ರಿ!

  ರಕ್ತದ ದೃಶ್ಯ, ಮತ್ತು ಮೊಬೈಲ್ ನ ಚುಂಬನದ ದೃಶ್ಯವನ್ನು ಡಿಲಿಟ್ ಮಾಡುವಂತೆ ಸೂಚಿಸಿ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ದರ್ಬಾರ್ ಚಿತ್ರದಲ್ಲಿ ರಜನಿಕಾಂತ್ ಜೊತೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ದಶಕದ ನಂತರ ನಯನತಾರಾ ಮತ್ತು ತಲೈವಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

  ದರ್ಬಾರ್ ಖ್ಯಾತ ನಿರ್ದೇಶಕ ಎ.ಆರ್ ಮುರುಗದಾಸ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಲೈಕ ಸಂಸ್ಥೆ ಬಂಡವಾಳ ಹೂಡುತ್ತಿದೆ. ಚಿತ್ರಕ್ಕೆ ಅನಿರುದ್ಧ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೆ ಟ್ರೈಲರ್ ಮತ್ತು ಹಾಡುಗಳ ಮೂಲಕ ಕುತೂಹಲ ಹೆಚ್ಚಿಸಿರುವ ದರ್ಬಾರ್ ಇದೆ ತಿಂಗಳು 9ಕ್ಕೆ ತೆರೆಗೆ ಬರುತ್ತಿದೆ.

  English summary
  Super starr Rajinikanth starrer Darbar movie gets U/A certificate from censor board. 11 cuts in Darbar film from censor board.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X