For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ 'ಅಣ್ಣಾತೆ' ಸಿನಿಮಾದ ಕಥೆ ಲೀಕ್: ಕೀರ್ತಿ, ಖುಷ್ಬೂ, ಮೀನಾ ಪಾತ್ರ ರಿವೀಲ್

  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷೆಯ ಅಣ್ಣಾತೆ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು, ಸ್ವಲ್ಪ ಭಾಗ ಚಿತ್ರೀಕರಣ ಮಾಡಿ ಮುಗಿಸಿದೆ ಸಿನಿಮಾತಂಡ. ಕೊರೊನಾ ಲಾಕ್ ಡೌನ್ ನಿಂದ ಸದ್ಯ ಚಿತ್ರೀಕರಣ ಸ್ಥಗಿತವಾಗಿದೆ. ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಆದರೀಗ ಕೊರೊನಾ ಆತಂಕದ ಹಿನ್ನಲೆ ಹೈದರಾಬಾದ್ ನಿಂದ ಚೆನ್ನೈಗೆ ಶಿಫ್ಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

  ರನ್ನನ ರಕ್ಷಾಬಂದನ. | Kiccha Sudeep Raksha Bhandan Wishes | Filmibeat Kannada

  ಈ ನಡುವೆ ಚಿತ್ರದ ಕಥೆ ಲೀಕ್ ಆಗಿರುವ ಸುದ್ದಿ ವೈರಲ್ ಆಗಿದೆ. ಅಣ್ಣಾತೆ ಸಿನಿಮಾದ ಕಥೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸಿನಿಮಾತಂಡ ಯಾವುದು ಮಾಹಿತಿ ನೀಡಿಲ್ಲ. ಸದ್ಯ ಹರಿದಾಡುತ್ತಿರುವ ಕಥೆಯಲ್ಲಿ ಸಿನಿಮಾದ ಎಲ್ಲಾ ಪಾತ್ರಗಳ ಹೆಸರು ಇದೆ. ಮುಂದೆ ಓದಿ..

  ನಿರ್ಮಾಪಕರಿಗೆ ಈ ಚಿತ್ರದ ಸಂಪೂರ್ಣ ಸಂಭಾವನೆ ವಾಪಸ್ ನೀಡಿದ್ದಾರಂತೆ ರಜನಿಕಾಂತ್!

  ಹಳ್ಳಿಯ ಗೌರವಾನ್ವಿತ ವ್ಯಕ್ತಿ ಸೂಪರ್ ಸ್ಟಾರ್

  ಹಳ್ಳಿಯ ಗೌರವಾನ್ವಿತ ವ್ಯಕ್ತಿ ಸೂಪರ್ ಸ್ಟಾರ್

  ಸೋರಿಕೆಯಾದ ಕಥೆಯ ಪ್ರಕಾರ ರಜನಿಕಾಂತ್ ಹಳ್ಳಿಯ ಗೌರವಾನ್ವಿತ ವ್ಯಕ್ತಿಯಾಗಿರುತ್ತಾರೆ. ಅವರನ್ನು ಪ್ರೀತಿಯಿಂದ ಅಣ್ಣಾತೆ ಎಂದು ಕರೆಯುತ್ತಿರುತ್ತಾರೆ. ಖುಷ್ಬೂ ಮತ್ತು ಮೀನಾ ರಜನಿಕಾಂತ್ ಸಂಬಂಧಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ರಜನಿಕಾಂತ್ ಅವರನ್ನು ಮದುವೆಯಾಗಲು ಸ್ಪರ್ಧಿಸುತ್ತಿರುತ್ತಾರೆ. ಆದರೆ ರಜನಿಕಾಂತ್ ಮತ್ತೊಬ್ಬರನ್ನು ಪ್ರೀತಿಸಿ ಮದುವೆಯಾಗುತ್ತಾರೆ.

  ರಜನಿಕಾಂತ್ ಮಗಳ ಪಾತ್ರದಲ್ಲಿ ಕೀರ್ತಿ ಸುರೇಶ್

  ರಜನಿಕಾಂತ್ ಮಗಳ ಪಾತ್ರದಲ್ಲಿ ಕೀರ್ತಿ ಸುರೇಶ್

  ರಜನಿಕಾಂತ್ ಹೆಣ್ಣುಮಗು ಜನಿಸುತ್ತೆ. ಆ ಹೆಣ್ಣು ಮಗುವೆ ಕೀರ್ತಿ ಸುರೇಶ್. ಕೀರ್ತಿ ಸುರೇಶ್ ದೊಡ್ಡವಳಾದ ಮೇಲೆ ಮೀನಾ ಮತ್ತು ಖುಷ್ಬೂ ಇಬ್ಬರು ಸೊಸೆಯಾಗಿ ಮಾಡಿಕೊಳ್ಳಬೇಕೆಂದು ಪ್ರಯತ್ನಪಡುತ್ತಾರೆ. ನಯನತಾರಾ ಸಿನಿಮಾದಲ್ಲಿ ವಕೀಲೆಯಾಗಿ ಬಣ್ಣಹಚ್ಚಿದ್ದಾರಂತೆ. ಸಿನಿಮಾದ ಕೊನೆಯಲ್ಲಿ ಯಾರು ಕೀರ್ತಿ ಸುರೇಶ್ ಅವರನ್ನು ಮದುವೆಯಾಗುತ್ತಾರೆ ಎನ್ನುವುದೇ ಸಿನಿಮಾದ ಕಥೆ. ಈ ಕಥೆ ಈಗ ವೈರಲ್ ಆಗಿದೆ.

  ಕೊನೆಯ ಸಿನಿಮಾದಲ್ಲಿ ಐವರಿಗೆ ಗೌರವ ಸಲ್ಲಿಸಿ ಹೋದ ಸುಶಾಂತ್, ಯಾರವರು?

  ದೊಡ್ಡ ತಾರಾಬಳಗವಿದೆ

  ದೊಡ್ಡ ತಾರಾಬಳಗವಿದೆ

  ಅಣ್ಣಾತೆ ನಿರ್ದೇಶಕ ಸಿರುಥೈ ಶಿವಾ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಖುಷ್ಬೂ, ಮೀನಾ, ಕೀರ್ತಿ ಸುರೇಶ್, ನಯನತಾರಾ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ದೊಡ್ಡ ತಾರಾಬಳಗವೆ ಸಿನಿಮಾದಲ್ಲಿದೆ. ಚಿತ್ರಕ್ಕೆ ಸನ್ ಪಿಕ್ಟರ್ಸ್ ಬಂಡವಾಳ ಹೂಡುತ್ತಿದೆ.

  ಹೈದರಾಬಾದ್ ನಿಂದ ಚೆನ್ನೈಗೆ ಚಿತ್ರೀಕರಣ ಶಿಫ್ಟ್

  ಹೈದರಾಬಾದ್ ನಿಂದ ಚೆನ್ನೈಗೆ ಚಿತ್ರೀಕರಣ ಶಿಫ್ಟ್

  ಅಣ್ಣಾತೆ ಸಿನಿಮಾ ಮತ್ತೆ ಚಿತ್ರೀಕರಣಕ್ಕೆ ಹೊರಡಲು ಸಿದ್ಧತೆ ನಡೆಸುತ್ತಿದೆ. ಹೈದರಾಬಾದ್ ನಿಂದ ಚೆನ್ನೈಗೆ ಚಿತ್ರೀಕರಣ ಶಿಫ್ಟಾ ಮಾಡಲಾಗಿದೆ. ಉಳಿದ ಭಾಗವನ್ನು ಚೆನ್ನೈನಲ್ಲಿಯೇ ಚಿತ್ರೀಕರಣ ಮಾಡಲು ಸಿನಿಮಾತಂಡ ನಿರ್ಧರಿಸಿದೆ. ತಮಿಳುನಾಡು ಸರ್ಕಾರ ಅನುಮತಿ ನೀಡಿದ ನಂತರ ಚಿತ್ರೀಕರಣಕ್ಕೆ ಹೊರಡುತ್ತಿದೆಯಂತೆ. ಸಿನಿಮಾ ಮುಂದಿನ ತೆರೆಗೆ ಬರುತ್ತಿದೆ.

  English summary
  Rajinikanth starrer most expected Annaatthe movie story leaked. Keerthy Suresh, Khushboo and meera character revealed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X