For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ರೀ-ರಿಲೀಸ್ ಆಗುತ್ತಿದೆ 'ಬಾಷಾ'

  |
  ರಜಿನಿಕಾಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್ | FILMIBEAT KANNADA

  ಸೂಪರ್ ಸ್ಟಾರ್ ರಜನಿಕಾಂತ್ ಸಿನಿ ಜೀವನದಲ್ಲಿ ಮೈಲಿಗಲು ಸ್ಥಾಪಿಸಿದ ಸಿನಿಮಾ 'ಬಾಷಾ'. 1995ರಲ್ಲಿ ತೆರೆಗೆ ಬಂದ 'ಬಾಷಾ' ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ತಲೈವಾ ಲುಕ್, ಸ್ಟೈಲ್, ಖದರ್ ಗೆ ಅಭಿಮಾನಿಗಳು ಕೇಕೆಹಾಕಿದ್ದರು. ಅಂದು ಚಿತ್ರಾಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ ಬಾಷಾ ಮತ್ತೀಗ ಅಭಿಮಾನಿಗಳ ಮುಂದೆ ಬರ್ತಿದೆ.

  ಸೂಪರ್ ಸ್ಟಾರ್ ರಜನಿಕಾಂತ್ ಹುಟ್ಟುಹಬ್ಬಕ್ಕೆ ಬಾಷಾ ಸಿನಿಮಾವನ್ನು ರೀ-ರಿಲೀಸ್ ಮಾಡುವ ಮೂಲಕ ತಲೈವಾ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡುತ್ತಿದ್ದಾರೆ. ತಲೈವಾ ಜನ್ಮದಿನ ಮುಂದಿನ ತಿಂಗಳು 12ಕ್ಕೆ. ಆದರೆ ಒಂದು ದಿನ ಮುಂಚಿತವಾಗಿಯೆ ಅಂದರೆ ಡಿಸೆಂಬರ್ 11ಕ್ಕೆ ಬಾಷಾ ತೆರೆಗೆ ಬರುತ್ತಿದೆ. ಇಂದಿನ ಪೀಳಿಗೆಯ ಯುವಕರು ತಲೈವಾನ ಬಾಷಾ ಖದರ್ ಅನ್ನು ಚಿತ್ರಮಂದಿರಗಳಲ್ಲಿ ನೋಡಿ ಆನಂದಿಸಬಹುದು.

  ಐಕಾನ್ ಆಫ್ ಗೋಲ್ಡನ್ ಜುಬ್ಲಿ ಅವಾರ್ಡ್ ಪಡೆದ ನಟ ರಜನಿಕಾಂತ್ಐಕಾನ್ ಆಫ್ ಗೋಲ್ಡನ್ ಜುಬ್ಲಿ ಅವಾರ್ಡ್ ಪಡೆದ ನಟ ರಜನಿಕಾಂತ್

  'ಬಾಷಾ' ಸುರೇಶ್ ಕೃಷ್ಣ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಸೂಪರ್ ಸ್ಟಾರ್ ರಜಿನಿಕಾಂತ್ ಗೆ ಜೋಡಿಯಾಗಿ ಖ್ಯಾತ ನಟಿ ನಗ್ಮಾ ಕಾಣಿಸಿಕೊಂಡಿದ್ದರು. ಅಂದು ದಾಖಲೆ ಬರೆದಿದ್ದ ಬಾಷಾ ಮತ್ತೆ ಚಿತ್ರಮಂದಿರಕ್ಕೆ ಬರ್ತಿದೆ ಅಂದರೆ ಅಭಿಮಾನಿಗಳು ನೋಡಲು ಕಾತರರಾಗಿದ್ದಾರೆ.

  ರಜನಿಕಾಂತ್ ಸದ್ಯ ದರ್ಬಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿಯಾಗಿದೆ. ಈಗಾಗಲೆ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು ತಲೈವಾ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ದರ್ಬಾರ್ ಮುಂದಿನ ವರ್ಷ ತೆರೆಗೆ ಬರುತ್ತಿದೆ.

  English summary
  Super star Rajinikanth star super hit Baasha movie will re-release on December 12th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X