ಕೊನೆ ದಿನಗಳ ಎಣಿಸುತ್ತಿರುವ ಬೆಂಗಳೂರು ಬಾಲಕಿಯ ಆಸೆ ಈಡೇರಿಸಿದ ರಜನಿಕಾಂತ್

ರಜನೀಕಾಂತ್, ಅಭಿಮಾನಿಗಳಿಗೆ ದೇವರಿದ್ದಂತೆ. ರಜನೀಕಾಂತ್ ಸಹ ತಮ್ಮ ಅಭಿಮಾನಿಗಳನ್ನು ಅಷ್ಟೇ ಪ್ರೀತಿಸುತ್ತಾರೆ. ಅಭಿಮಾನಿಗಳನ್ನು ಪ್ರೀತಿಸುವುದು, ಗೌರವಿಸುವುದನ್ನು ತಾವು ಡಾ.ರಾಜ್‌ಕುಮಾರ್ ಅವರಿಂದ ಕಲಿತಿದ್ದಾಗಿ ಸ್ವತಃ ರಜನೀಕಾಂತ್ ಹೇಳಿಕೊಂಡಿದ್ದಾರೆ.

ಬೆಂಗಳೂರಿನ ಬಾಲಕಿ ಸೌಮ್ಯಾ ರಜನೀಕಾಂತ್ ಅನ್ನು ನೋಡಬೇಕು ಎಂಬ ಆಸೆ ವ್ಯಕ್ತಪಡಿಸಿದ್ದರು. ಆ ಯುವತಿಯ ಆಸೆಯನ್ನು ತೀರಿಸುವ ಪ್ರಯತ್ನ ಮಾಡಿದ್ದಾರೆ ರಜನೀಕಾಂತ್. ದೊಡ್ಡ ದೊಡ್ಡ ನಿರ್ಮಾಪಕರಿಗೇ ಸಿಕ್ಕದ ರಜನೀಕಾಂತ್ ದರ್ಶನ್ ಬೆಂಗಳೂರಿನ ಬಾಲಕಿ ಸೌಮ್ಯಾಗೆ ಸಿಕ್ಕಿದ್ದಕ್ಕೆ ಕಾರಣವೂ ಇದೆ.

ಸೌಮ್ಯಾಗೆ ಮೆದುಳಿನ ಕಾಯಿಲೆ ಇದೆ. ಆಕೆ ತೀವ್ರ ಗಂಭೀರ ಸ್ಥಿತಿಯಲ್ಲಿದ್ದಾಳೆ. ಬದುಕುವುದೇ ಕಷ್ಟ ಎಂಬ ಮಾತುಗಳನ್ನು ವೈದ್ಯರೇ ಆಡಿಬಿಟ್ಟಿದ್ದಾರೆ. ದಿನಗಳನ್ನು ಎಣಿಸುತ್ತಾ ಹಾಸಿಗೆಯಲ್ಲಿ ಮಲಗಿರುವ ಸೌಮ್ಯಾ ರಜನೀಕಾಂತ್‌ರ ದೊಡ್ಡ ಅಭಿಮಾನಿಯಾಗಿದ್ದು, ತಾನು ರಜನೀಕಾಂತ್ ಅನ್ನು ಒಮ್ಮೆ ನೋಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

Rajinikanth Talked To Sowmya Who Is Suffering From Brain Stroke

ರಜನೀಕಾಂತ್‌ಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರು ಸೌಮ್ಯಾಳ ಮನೆಗೆ ಬರಲು ಆಗಿಲ್ಲ. ಆದರೆ ಆಕೆಯೊಂದಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ರಜನೀಕಾಂತ್, ಸೌಮ್ಯಾ ಜೊತೆಗೆ ಮಾತನಾಡಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ.

ಸೌಮ್ಯಾಗೆ ವಿಡಿಯೋ ಕರೆ ಮಾಡಿರುವ ರಜನೀಕಾಂತ್, ''ಹಲೋ ಸೌಮ್ಯಾ, ಹೇಗಮ್ಮಾ ಇದ್ದೀಯ. ಆರಾಮವಾಗಿರು ನಿನಗೆ ಏನೂ ಆಗುವುದಿಲ್ಲ. ಸಾರಿ ಮಗಳೇ, ನಾನು ನಿನ್ನನ್ನು ಬಂದು ಭೇಟಿ ಆಗಲು ಆಗುತ್ತಿಲ್ಲ. ಕೊರೊನಾ ಇದೆ, ಜೊತೆಗೆ ನನಗೂ ಆರೋಗ್ಯ ಸರಿ ಇಲ್ಲ. ಇಲ್ಲವಾದರೆ ಖಂಡಿತ ಬಂದು ನಿನ್ನನ್ನು ಭೇಟಿ ಆಗಿರುತ್ತಿದ್ದೆ ಮಗಳೇ. ಧೈರ್ಯವಾಗಿರು ಮಗಳೇ, ದೇವರು ಇದ್ದಾನೆ, ಏನೂ ಆಗುವುದಿಲ್ಲ. ನಾನು ನಿನಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ನೋಡು ನಿನ್ನ ಮುಖ ಎಷ್ಟು ಚೆನ್ನಾಗಿದೆ, ಎಷ್ಟು ಚೆನ್ನಾಗಿ ನಗುತ್ತಿದ್ದೀಯ. ನಿನ್ನ ನಗು ಬಹಳ ಚೆನ್ನಾಗಿದೆ. ಏನೂ ಆಗುವುದಿಲ್ಲ ಮಗುವೆ, ಆರಾಮವಾಗಿರಮ್ಮ'' ಎಂದಿದ್ದಾರೆ ರಜನೀಕಾಂತ್.

ರಜನೀಕಾಂತ್‌ ಹೋಗಲು ಆಗದಿದ್ದರೂ ಬೆಂಗಳೂರಿನಲ್ಲಿಯೇ ಇರುವ ರಜನೀಕಾಂತ್ ಅವರ ಸಹೋದರ ಸತ್ಯನಾರಾಯಣ್ ಅವರು ಸೌಮ್ಯಾಳ ಮನೆಗೆ ಹೋಗಿ ಬಾಲಕಿಗೆ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ. ರಜನೀಕಾಂತ್ ಬೆಂಗಳೂರಿಗೆ ಬಂದಾಗ ಖಂಡಿತ ಅವರನ್ನು ನಿಮ್ಮ ಮನೆಗೆ ಕರೆದುಕೊಂಡು ಬರುವೆ ಎಂದು ಸತ್ಯನಾರಾಯಣ್, ಸೌಮ್ಯಾಗೆ ಹೇಳಿದ್ದಾರೆ.

ರಜನೀಕಾಂತ್ ಹೀಗೆ ಹಲವರ ಆಸೆ ತೀರಿಸಿದ್ದಾರೆ. ತಮ್ಮನ್ನು ಕಾಣುವ ಆಸೆ ಇಟ್ಟು ಬರುವ ಹಲವು ವ್ಯಕ್ತಿಗಳನ್ನು ರಜನೀಕಾಂತ್ ಭೇಟಿ ಮಾಡಿದ್ದಾರೆ. ಆರೋಗ್ಯ ಸಮಸ್ಯೆ ಹೊಂದಿ ಸಹಾಯ ಕೇಳಿ ಬರುವವರಿಗೂ ಸಹಾಯ ಮಾಡಿದ್ದಾರೆ.

ರಜನೀಕಾಂತ್ ಸ್ವತಃ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 'ಅಣ್ಣಾತೆ' ಸಿನಿಮಾದ ಚಿತ್ರೀಕರಣದ ವೇಳೆ ರಜನೀಕಾಂತ್‌ಗೆ ಆರೋಗ್ಯ ಸಮಸ್ಯೆ ಎದುರಾಯಿತು. ರಾಜಕೀಯ ಪಕ್ಷ ಘೋಷಣೆ ಮಾಡಬೇಕೆಂದು ಸರ್ವ ತಯಾರಿ ಮಾಡಿಕೊಂಡಿದ್ದ ರಜನೀಕಾಂತ್ ಹಠಾತ್ತನೆ ಎದುರಾದ ಆರೋಗ್ಯ ಸಮಸ್ಯೆಯಿಂದಾಗಿ ರಾಜಕೀಯದಿಂದ ದೂರ ಉಳಿಯಬೇಕಾಯಿತು.

ರಜನೀಕಾಂತ್ ನಟಿಸಿರುವ 'ಅಣ್ಣಾತೆ' ಸಿನಿಮಾ ನವೆಂಬರ್ 04 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಯಿತು. ಕೆಲವೇ ದಿನಗಳಲ್ಲಿ 'ಅಣ್ಣಾತೆ' ಸಿನಿಮಾ 200 ಕೋಟಿಗೂ ಹೆಚ್ಚು ಹಣ ಗಳಿಸಿ, ಈ ವರ್ಷದ ಅತಿ ಹೆಚ್ಚು ಗಳಿಕೆಯ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿತು. ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸಹ ಬಿಡುಗಡೆ ಆಗಿ ಬಹುದೊಡ್ಡ ಯಶಸ್ಸು ಗಳಿಸಿತು. ನೆಟ್‌ಫ್ಲಿಕ್ಸ್‌ನಲ್ಲಿ 'ಅಣ್ಣಾತೆ' ಸಿನಿಮಾದ ತಮಿಳು ಹಾಗೂ ಹಿಂದಿ ಡಬ್‌ ಆವೃತ್ತಿಗಳು ಭಾರತದಲ್ಲಿ ನಂಬರ್ 1 ಟ್ರೆಂಡ್‌ನಲ್ಲಿದ್ದವು.

More from Filmibeat

English summary
Actor Rajinikanth talked to Sowmya who is suffering from brain stroke. Rajinikanth talked to Sowmya and said she should be strong nothing will happen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X