twitter
    For Quick Alerts
    ALLOW NOTIFICATIONS  
    For Daily Alerts

    ರಜನಿಕಾಂತ್ ರಾಜಕೀಯ ಎಂಟ್ರಿಗೆ ಎರಡು ವಿಘ್ನ!

    |

    ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಬಿಟ್ಟು ರಾಜಕೀಯಕ್ಕೆ ಬರಲು ಸಜ್ಜಾಗುತ್ತಿದ್ದಾರೆ. ತಮಿಳುನಾಡಿನ ಮುಂಬರುವ ಚುನಾವಣೆಯಲ್ಲಿ ತಲೈವಾ ಪಾರ್ಟಿ ಸ್ಪರ್ಧೆ ಮಾಡಲಿದ್ದು, ರಜನಿ ಸಿಎಂ ಆಗ್ತಾರೆ ಎಂಬ ಆಸೆ ಹುಟ್ಟಿಕೊಂಡಿದೆ.

    ಇದುವರೆಗೂ ರಾಜಕೀಯ ಪಾರ್ಟಿ ಘೋಷಿಸುವುದಾಗಲಿ ಅಥವಾ ಅಧಿಕೃತವಾಗಿ ಸ್ಪರ್ಧೆ ಮಾಡುತ್ತೇನೆ ಎಂದಾಗಲಿ ರಜನಿಕಾಂತ್ ಹೇಳಿಲ್ಲ. ಆದ್ರೀಗ, ಸೂಪರ್ ಸ್ಟಾರ್ ರಾಜಕೀಯ ಎಂಟ್ರಿಗೆ ಎರಡು ವಿಘ್ನ ಎದುರಾಗಿದೆಯಂತೆ.

    ಚಿತ್ರರಂಗದ ಲೆಕ್ಕಾಚಾರ ಉಲ್ಟಾ ಮಾಡಿದ ರಜನಿಯ 'ದರ್ಬಾರ್' ಸಂಭಾವನೆ!ಚಿತ್ರರಂಗದ ಲೆಕ್ಕಾಚಾರ ಉಲ್ಟಾ ಮಾಡಿದ ರಜನಿಯ 'ದರ್ಬಾರ್' ಸಂಭಾವನೆ!

    ಎರಡು ಕಡೆಯಿಂದ ತಲೈವಾಗೆ ಸವಾಲು ಎದುರಾಗಿದ್ದು, ಈ ಎರಡು ವಿಘ್ನವನ್ನು ನಿವಾರಿಸಿಕೊಂಡರೆ ಮಾತ್ರ ಬಾಷಾ ತಮಿಳುನಾಡು ಪಾಲಿಟಿಕ್ಸ್ ಬರುವ ಆಸೆ ಸುಲಭವಾಗಲಿದೆ. ಇಲ್ಲವಾದಲ್ಲಿ, ಇದು ತಲೈವಾಗೆ ಸಂಕಷ್ಟವಾಗಲಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ, ರಜನಿಗೆ ಕಂಟಕವಾಗಲಿರುವ ಆ ಎರಡು ವಿಘ್ನ ಯಾವುದು?

    ಫ್ಯಾಮಿಲಿ ವಿರೋಧ ಇದೆ

    ಫ್ಯಾಮಿಲಿ ವಿರೋಧ ಇದೆ

    ರಜನಿಕಾಂತ್ ಅವರು ರಾಜಕೀಯಕ್ಕೆ ಬರುವುದು ರಜನಿ ಕುಟುಂಬಕ್ಕೆ ಇಷ್ಟ ಇಲ್ಲ ಎಂಬ ವಿಷ್ಯ ಈಗ ಬಹಿರಂಗವಾಗಿದೆ. ಪ್ರಸ್ತುತ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ರಜನಿಕಾಂತ್ ಅವರು ಅದಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಬಹುದು. ಅವರಿಗೆ ಈಗಿನ ರಾಜಕೀಯ ಸರಿ ಹೋಗಲ್ಲ ಎಂಬ ಅಭಿಪ್ರಾಯ ಮನೆಯವರಲ್ಲಿದೆಯಂತೆ.

    'ನನ್ನನ್ನು ಕೇಸರಿ ಮಾಡಲು ಅನೇಕ ಪ್ರಯತ್ನಗಳು ನಡೆದವು, ಆದರೆ ಅವರ ಬಲೆಗೆ ಬೀಳಲಿಲ್ಲ: ರಜನಿಕಾಂತ್'ನನ್ನನ್ನು ಕೇಸರಿ ಮಾಡಲು ಅನೇಕ ಪ್ರಯತ್ನಗಳು ನಡೆದವು, ಆದರೆ ಅವರ ಬಲೆಗೆ ಬೀಳಲಿಲ್ಲ: ರಜನಿಕಾಂತ್

    ಅಭಿಮಾನಿಗಳಿಗೂ ಇಷ್ಟ ಇಲ್ಲ

    ಅಭಿಮಾನಿಗಳಿಗೂ ಇಷ್ಟ ಇಲ್ಲ

    ರಜನಿಕಾಂತ್ ಅವರು ರಾಜಕೀಯಕ್ಕೆ ಬರುವುದು ಕೇವಲ ಕುಟುಂಬಕ್ಕೆ ಮಾತ್ರವಲ್ಲ, ಅವರ ಆಪ್ತ ಅಭಿಮಾನಿಗಳಿಗೂ ಹಾಗೂ ಆಪ್ತ ಸ್ನೇಹಿತರಿಗೂ ಇಷ್ಟವಿಲ್ಲವಂತೆ. ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಮುಂದುವರಿಯಬೇಕು. ಅದರ ಮೂಲಕವೇ ಆ ಆದರ್ಶಗಳನ್ನ ಜನರಿಗೆ ತಿಳಿಸಬೇಕು ಎಂಬ ಆಸೆ ಹೊಂದಿದ್ದಾರಂತೆ.

    ಸೌತ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ 'ಬಾಸ್' ಯಾರು?ಸೌತ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ 'ಬಾಸ್' ಯಾರು?

    2017ರಲ್ಲಿ ಏನು ಹೇಳಿದ್ದರು

    2017ರಲ್ಲಿ ಏನು ಹೇಳಿದ್ದರು

    2017 ರಲ್ಲಿ ರಾಜಕೀಯ ಪ್ರವೇಶಿಸುವ ಬಗ್ಗೆ ರಜನಿಕಾಂತ್ ಮಾತನಾಡಿದ್ದರು. ತಮ್ಮ ಪಕ್ಷವು 'ಆಧ್ಯಾತ್ಮಿಕ ರಾಜಕೀಯ'ದ ಮೂಲಕ ಸಮಾಜವನ್ನು ಸುಧಾರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದರು. ತಮಿಳುನಾಡು ವಿಧಾನಸಭಾ ಚುನಾವಣೆ 2021 ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಆಗಲೇ ಸಣ್ಣ ಮಟ್ಟದ ಸುಳಿವು ನೀಡಿದ್ದರು. ಆದರೆ, ಆ ಮಾತು ಹೇಳಿ ಎರಡು ವರ್ಷ ಆಗಿದ್ದರೂ ತಮ್ಮ ಪಕ್ಷದ ಸಂಘಟನೆ ಆಗಲಿ ಅಥವಾ ಪಕ್ಷ ಕಟ್ಟುವ ಹಂತಕ್ಕಾಗಲಿ ತಲೈವಾ ಮುಂದಾಗಿಲ್ಲ ಎನ್ನುವುದು ಅನುಮಾನ ಮೂಡಿಸಿದೆ.

    ಈ ಎರಡು ಚಾಲೆಂಜ್ ಹೇಗೆ ಸ್ವೀಕರಿಸುತ್ತಾರೆ?

    ಈ ಎರಡು ಚಾಲೆಂಜ್ ಹೇಗೆ ಸ್ವೀಕರಿಸುತ್ತಾರೆ?

    ರಜನಿಕಾಂತ್ ಅವರಂತೆ ಕಮಲ್ ಹಾಸನ್ ಕೂಡ ರಾಜಕೀಯ ಪಕ್ಷ ಹುಟ್ಟಾಕಿ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆದರೆ, ಒಂದೇ ಒಂದು ಸೀಟು ಗೆದ್ದಿರಲಿಲ್ಲ. ಬಹುಶಃ ರಜನಿಕಾಂತ್ ಅವರು ಈ ಬಗ್ಗೆ ಚಿಂತಿಸರಬಹಯದು. ಇದರ ಜೊತೆ ಕುಟುಂಬ ಹಾಗೂ ಅಭಿಮಾನಿಗಳನ್ನು ಒಪ್ಪಿಸಿ ಪಾಲಿಟಿಕ್ಸ್ ಗೆ ಜೈ ಅಂತಾರಾ? ಕಾದುನೋಡಬೇಕಿದೆ.

    English summary
    Superstar Rajinikanth want to face two challenge for entering politics. what is the two Challenge?
    Tuesday, November 26, 2019, 19:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X