For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ರಜನಿಕಾಂತ್ ಗೆ ತೃತೀಯ ಲಿಂಗಿ ಪಾತ್ರ ಮಾಡುವಾಸೆ.!

  |

  ಕಳೆದ ನಾಲ್ಕು ದಶಕಗಳಿಂದ ತಮಿಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿರುವವರು ರಜನಿಕಾಂತ್. 45 ವರ್ಷಗಳ ಸಿನಿ ಜರ್ನಿಯಲ್ಲಿ ತರಹೇವಾರಿ ಪಾತ್ರಗಳನ್ನು ರಜನಿಕಾಂತ್ ಪೋಷಿಸಿದ್ದಾರೆ. ಭಿನ್ನ-ವಿಭಿನ್ನ ರೋಲ್ ಗಳಿಗೆ ಜೀವ ತುಂಬಿದ್ದಾರೆ.

  ಇಂತಿಪ್ಪ ರಜನಿಕಾಂತ್ ಗೆ ಇದೀಗ ಒಂದು ಆಸೆ ಮೂಡಿದೆ. ತೃತೀಯ ಲಿಂಗಿ ಪಾತ್ರದಲ್ಲಿ ನಟಿಸುವ ಇಚ್ಛೆಯನ್ನ ರಜನಿಕಾಂತ್ ಬಹಿರಂಗ ಪಡಿಸಿದ್ದಾರೆ.

  ''ಇದುವರೆಗೂ ಎಲ್ಲಾ ತರಹದ ಸಿನಿಮಾಗಳಲ್ಲಿ ನಟಿಸಿದ್ದೇನೆ. 160 ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. 45 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೇನೆ. ತೃತೀಯ ಲಿಂಗಿ ಪಾತ್ರದಲ್ಲಿ ನಟಿಸಬೇಕು ಎಂದುಕೊಂಡಿದ್ದೇನೆ'' ಎಂದು ರಜನಿಕಾಂತ್ ಹೇಳಿದ್ದಾರೆ.

  ಸೂಪರ್ ಸ್ಟಾರ್ ರಜನಿಕಾಂತ್ ಜೊತೆ 'ಪುಟ್ನಂಜ' ಬೆಡಗಿಯ ರೋಮ್ಯಾನ್ಸ್ಸೂಪರ್ ಸ್ಟಾರ್ ರಜನಿಕಾಂತ್ ಜೊತೆ 'ಪುಟ್ನಂಜ' ಬೆಡಗಿಯ ರೋಮ್ಯಾನ್ಸ್

  ಹಾಗಾದ್ರೆ, ತೃತೀಯ ಲಿಂಗಿ ಪಾತ್ರದಲ್ಲಿ ನಟಿಸುವ ಆಫರ್ ಸಿಕ್ಕಿದ್ಯಾ ಅಂತ ಕೇಳಿದರೆ ''ಇನ್ನೂ ಅಂತಹ ಅವಕಾಶ ಸಿಕ್ಕಿಲ್ಲ'' ಎಂದಿದ್ದಾರೆ ರಜನಿಕಾಂತ್.

  ರಜನಿಕಾಂತ್ ಅಭಿನಯದ 'ದರ್ಬಾರ್' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ಇತ್ತೀಚೆಗಷ್ಟೇ ನಡೆಯಿತು. ಇದೇ ವೇಳೆ ಮರಾಠಿ ಚಿತ್ರದಲ್ಲೂ ಅಭಿನಯಿಸುವ ಇಂಗಿತವನ್ನ ರಜನಿಕಾಂತ್ ಹೊರ ಹಾಕಿದ್ದಾರೆ.

  ಸೂಪರ್ ಸ್ಟಾರ್ ರಿಂದ ಮಹಾ ನಟಿಯ ಮಹಾ ಆಸೆ ಈಡೇರಿತುಸೂಪರ್ ಸ್ಟಾರ್ ರಿಂದ ಮಹಾ ನಟಿಯ ಮಹಾ ಆಸೆ ಈಡೇರಿತು

  ಮರಾಠಿ ಮೂಲದ ಕುಟುಂಬದಲ್ಲಿ ಶಿವಾಜಿ ರಾವ್ ಗಾಯಕ್ವಾಡ್ ಆಗಿ ಹುಟ್ಟಿದ ರಜನಿಕಾಂತ್ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಈಗಲೂ ಮನೆಯಲ್ಲಿ ಮರಾಠಿ ಮಾತನಾಡುವ ರಜನಿಕಾಂತ್ ಅವಕಾಶ ಸಿಕ್ಕರೆ ಮರಾಠಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡ್ತಾರಂತೆ.

  ಅಂದ್ಹಾಗೆ, ಇದೀಗ ಬಿಡುಗಡೆಗೆ ಸಿದ್ಧವಾಗಿರುವ 'ದರ್ಬಾರ್' ಚಿತ್ರದಲ್ಲಿ ರಜನಿಕಾಂತ್ ಮುಂಬೈ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ಮುಂದಿನ ವರ್ಷ ನಿಮ್ಮ ಮುಂದೆ ಬರಲಿದೆ.

  English summary
  Super Star Rajinikanth wants to play Transgender role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X