ಸೂಪರ್ ಸ್ಟಾರ್ ರಜನಿಕಾಂತ್ ಜಾರಿ ಬಿದ್ರಾ? ವಿಡಿಯೋ ವೈರಲ್

ತಮಿಳಿನ 'ಕೂಲಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಆಗಸ್ಟ್ 14ಕ್ಕೆ ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ದೊಡ್ಡಮಟ್ಟದಲ್ಲಿ ಗೆಲ್ಲುವ ಲೆಕ್ಕಾಚಾರ ಶುರುವಾಗಿದೆ.

ನಾಗಾರ್ಜುನ, ಉಪೇಂದ್ರ, ಆಮೀರ್ ಖಾನ್ ಹಾಗೂ ಶ್ರುತಿ ಹರಿಹರನ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅನಿರುದ್ಧ್ ರವಿಚಂದರ್ ಸಂಗೀತದಲ್ಲಿ 'ಕೂಲಿ' ಆಲ್ಬಮ್ ಹಿಟ್ ಆಗಿದೆ. ಆಗಸ್ಟ್ 2ರಂದು ಟ್ರೈಲರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಭಾರೀ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ರಜನಿಕಾಂತ್ 150 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಕನ್ನಡಕ್ಕೂ ಸಿನಿಮಾ ಡಬ್ ಬಿಡುಗಡೆಯಾಗಲಿದೆ.

Rajinikanth s Coolie Hype Soars as Viral Fall Down Video Sparks Confusion

ಸದ್ಯ ರಜನಿಕಾಂತ್ ಮನೆಯ ಕಾಂಪೌಂಡ್ ಒಳಗೆ ವಾಕ್ ಮಾಡುತ್ತಾ ಬಿದ್ದಂತೆ ವೀಡಿಯೋವೊಂದು ವೈರಲ್ ಆಗ್ತಿದೆ. ಟೀಶರ್ಟ್, ಶಾರ್ಟ್ಸ್ ಧರಿಸಿ ವ್ಯಕ್ತಿಯೊಬ್ಬ ಮುಂದೆ ಹೋಗುವುದು, ತಿರುಗಿ ಬರುವಾಗ ನ್ಯೂಸ್ ಪೇಪರ್ ಹಿಡಿದು ವಾಪಸ್ ಬರುತ್ತಾರೆ. ಈ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಕೂಡಲೇ ಎದ್ದು ಬಂದಿದ್ದಾರೆ.

ನೋಡು ಕೊಂಚ ರಜನಿಕಾಂತ್ ರೀತಿಯಲ್ಲೇ ಆ ವ್ಯಕ್ತಿ ವೀಡಿಯೋದಲ್ಲಿ ಕಾಣುತ್ತಾರೆ. ಬಹಳ ಸಿಂಪಲ್ ಆಗಿ ರಜನಿಕಾಂತ್ ರೀತಿ ನಡೆದು ಹೋಗುತ್ತಾರೆ. ಅವರ ಸಣಕಲು ದೇಹ, ಬೋಳು ತಲೆ ಎಲ್ಲವೂ ಸೂಪರ್ ಸ್ಟಾರ್ ಎನಿಸುವಂತೆ ಕಾಣುತ್ತದೆ. ಆದರೆ ಅದು ರಜನಿಕಾಂತ್ ಅಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಹೆಚ್ಚು ಕಮ್ಮಿ ಇದೇ ಗೆಟಪ್‌ನಲ್ಲಿ ರಜನಿಕಾಂತ್ ರಸ್ತೆಯಲ್ಲಿ ವಾಕಿಂಗ್ ಹೋಗಿದ್ದರು ಎಂದು ಫೋಟೊವೊಂದು ವೈರಲ್ ಆಗಿತ್ತು. ಇದೀಗ ರಜನಿಕಾಂತ್ ಬಿದ್ದುಬಿಟ್ರು ಎಂದು ವೀಡಿಯೋ ತೇಲಿ ಬಿಟ್ಟಿದ್ದಾರೆ.

ರಜನಿಕಾಂತ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಕೂಲಿ' ಸಿನಿಮಾ ಮುಗಿಯುವ ಮುನ್ನ 'ಜೈಲರ್'-2 ಸಿನಿಮಾ ಘೋಷಣೆ ಆಗಿತ್ತು. ಚಿತ್ರದ ಚಿತ್ರೀಕರಣದಲ್ಲಿ ಕೂಡ ಸೂಪರ್ ಸ್ಟಾರ್ ಭಾಗಿ ಆಗುತ್ತಿದ್ದಾರೆ. ನೆಲ್ಸನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಿವರಾಜ್‌ಕುಮಾರ್ ಹಾಗೂ ಮೋಹನ್ ಲಾಲ್ ಸೀಕ್ವೆಲ್‌ನಲ್ಲಿ ಕೂಡ ತಲೈವಾ ಜೊತೆ ಅಬ್ಬರಿಸಲಿದ್ದಾರೆ. ತೆಲುಗು ನಟ ಬಾಲಕೃಷ್ಣ ಕೂಡ ಮುಖ್ಯವಾದ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ.

ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲೇ 'ಜೈಲರ್'-2 ಸಿನಿಮಾ ನಿರ್ಮಾಣವಾಗುತ್ತಿದೆ. 'ಕೂಲಿ' ಚಿತ್ರವನ್ನು ಕೂಡ ಇದೇ ಸಂಸ್ಥೆ ನಿರ್ಮಿಸಿದೆ. ತೆಲುಗು ನಿರ್ದೇಶಕ ವಿವೇಕ್ ಅತ್ರೇಯ ಹೇಳಿದ ಕಥೆಯನ್ನು ರಜನಿಕಾಂತ್ ಮೆಚ್ಚಿದ್ದಾರೆ ಎನ್ನಲಾಗ್ತಿದೆ. 'ಜೈಲರ್'-2 ಬಳಿಕ ಅದೇ ಚಿತ್ರದಲ್ಲಿ ತಲೈವಾ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಹೀಗೆ ಸಾಕಷ್ಟು ಮಂದಿ ಸೂಪರ್ ಸ್ಟಾರ್‌ಗೆ ಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.

ವಯಸ್ಸು 70 ದಾಟಿದ್ರು ರಜನಿಕಾಂತ್ ಕ್ರೇಜ್ ಕಮ್ಮಿ ಆಗಿಲ್ಲ. ತಲೈವಾ ಎನರ್ಜಿ ಕೂಡ ಹಾಗೆ ಇದೆ. ಅದೇ ಕಾರಣಕ್ಕೆ ಮತ್ತಷ್ಟು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿ ಅಭಿಮಾನಿಗಳನ್ನು ರಂಜಿಸಬೇಕು ಎಂದು ಅವರು ಮನಸ್ಸು ಮಾಡಿದ್ದಾರೆ. ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮುಂದೆ ಮತ್ತಷ್ಟು ಅದ್ಭುತ ಪಾತ್ರಗಳಲ್ಲಿ ಪ್ರೇಕ್ಷಕರ ಅವರನ್ನು ನೋಡಬಹುದು. ಎಲ್ಲಕ್ಕಿಂತ ಮೊದಲು 'ಕೂಲಿ' ಚಿತ್ರದಲ್ಲಿ ತಲೈವಾ ಆರ್ಭಟ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

More from Filmibeat

English summary
ajinikanth’s Coolie Set for August 14 Release Amid Viral Video Buzz and Huge Expectations, rajinikanth fall down
Read more about: rajinikanth kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X