ಅಬ್ಬಬ್ಬಾ, ಹೊಸ ದಾಖಲೆ ಬರೆದ ರಜಿನಿಕಾಂತ್, ಬಿಡುಗಡೆಗೂ ಮೊದಲೇ ₹250 ಕೋಟಿ ಗಳಿಸಿದ ಕೂಲಿ

ರಜಿನಿಕಾಂತ್ ಸಿನಿಮಾಗಳಂದ್ರೆ ಹಾಗೆಯೇ. ಬಿಡುಗಡೆಗೂ ಮುನ್ನವೇ ಅಬ್ಬರ.. ಆರ್ಭಟ ಶುರುವಾಗುತ್ತೆ. ಕೇವಲ ಭಾರತದಲ್ಲಿ ಮಾತ್ರ ಅಲ್ಲ ಸಪ್ತಸಾಗರದಾಚೆ ಕೂಡ ರಜಿನಿಯ ಧ್ಯಾನ ಶುರುವಾಗುತ್ತೆ. ಅಭಿಮಾನಿಗಳು ಚಿತ್ರ ನೋಡಲು ತುದಿಗಾಲಿನಲ್ಲಿ ನಿಲ್ಲುತ್ತಾರೆ. ಚಿತ್ರದ ಬುಕ್ಕಿಂಗ್ ಶುರುವಾಗುತ್ತಿದ್ದಂತೆಯೇ ಮುಗಿ ಬಿದ್ದು ಟಿಕೆಟ್ ಖರೀದಿ ಮಾಡುತ್ತಾರೆ. ಇನ್ನೂ.. ನಿರ್ಮಾಪಕರ ಪಾಲಿಗೆ ರಜಿನಿಕಾಂತ್ ಮೊದಲಿಂದ ಚಿನ್ನದ ಮೊಟ್ಟೆ ಇಡುವ ಕೋಳಿಯೇ.

ಅಲ್ಲೊಮ್ಮೆ.. ಇಲ್ಲೊಮ್ಮೆ.. ರಜಿನಿಯ ಚಿತ್ರಗಳು ಸೋತಿರಬಹುದು. ನಿರ್ಮಾಪಕರ, ವಿತರರಕರ, ಕೈ ಕಚ್ಚಿರಬಹುದು. ಆದರೆ.. ಬಹುತೇಕ ಬಾರಿ ರಜಿನಿಯ ಚಿತ್ರಗಳೂ ಬಿಡುಗಡೆಗೆ ಮುನ್ನವೇ ನಿರ್ಮಾಪಕರಿಗೆ ಹಾಕಿದ ಬಂಡವಾಳವನ್ನು ಮರಳಿಸಿವೆ. ಭರ್ಜರಿ ಲಾಭವನ್ನು ಕೂಡ ಮಾಡಿ ಕೊಟ್ಟಿವೆ. ಇದಕ್ಕೆ ''ಕೂಲಿ'' ಸದ್ಯದ ಉದಾಹರಣೆ.

Rajinikanth s Coolie Is a Blockbuster Before Release Mints 250 Cr in Pre-Release Business

ಹೌದು, ''ಕೂಲಿ''.. ಇನ್ನೇನು ಈ ಶುಕ್ರವಾರ { ಆಗಸ್ಟ್ 14 } ಬಿಡುಗಡೆಯಾಗುತ್ತಿರುವ ಸಿನಿಮಾ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರವನ್ನು ನೋಡಲು ಅನೇಕರು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಕೇವಲ ರಜಿನಿಕಾಂತ್ ಮಾತ್ರವಲ್ಲ ಬದಲಿಗೆ ಆಮಿರ್ ಖಾನ್, ನಾಗಾರ್ಜುನ, ಉಪೇಂದ್ರ, ಶ್ರುತಿ ಹಾಸನ್, ಕೂಡ ಇದ್ದಾರೆ. ಹೀಗಾಗಿ ಈ ಚಿತ್ರದ ಸುತ್ತ ಮುತ್ತ ಸಾಕಷ್ಟು ಕುತೂಹಲ ಪ್ರೇಕ್ಷಕರಲ್ಲಿದೆ.

ಈ ಕುತೂಹಲಕ್ಕೆ ಇನ್ನೂ ಕೆಲ ದಿನಗಳಲ್ಲಿ ತೆರೆ ಬೀಳಲಿದೆಯಾದರೂ ಸದ್ಯ ರಜಿನಿಯ ''ಕೂಲಿ'' ಬಿಡುಗಡೆಗೆ ಮುನ್ನವೇ ₹250 ಕೋಟಿಯನ್ನು ಗಳಿಸಿದೆ. ಈ ಮೂಲಕ ಹೊಸದೊಂದು ದಾಖಲೆಯನ್ನು ಬರೆದಿದೆ. ಹೌದು, ''ಪಿಂಕ್‌ವಿಲ್ಲಾ'' ವರದಿಯ ಪ್ರಕಾರ ರಜಿನಿಯ ''ಕೂಲಿ'' ಚಿತ್ರದ ಸ್ಯಾಟ್‌ಲೈಟ್, ಡಿಜಿಟಲ್, ಮತ್ತು ಆಡಿಯೋ ಹಕ್ಕುಗಳು ದಾಖಲೆ ಮೊತ್ತಕ್ಕೆ ಬಿಕರಿಯಾಗಿವೆ.

ಇನ್ನು ಆಗಲೇ ಹೇಳಿದಂತೆ ರಜಿನಿ ಕ್ರೇಜ್ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಹೊರದೇಶಗಳಲ್ಲಿಯೂ ಕೂಡ ರಜಿನಿಯ ಹವಾ ಇದೆ. ರಜಿನಿಯ ಹೆಸರಿಗೆ ಬೆಲೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಅಂತರಾಷ್ಟ್ರೀಯ ಹಕ್ಕುಗಳು ₹68 ಕೋಟಿಗೆ ಮಾರಾಟವಾಗಿದೆ, ಈ ಮೂಲಕ ವಿದೇಶಗಳಲ್ಲಿ ಅತೀ ಹೆಚ್ಚಿನ ಹಣಕ್ಕೆ ಮಾರಾಟವಾದ ಎರಡನೇ ತಮಿಳು ಚಿತ್ರ ಎನ್ನುವ ಹೆಗ್ಗಳಿಕೆಗೆ ''ಕೂಲಿ'' ಪಾತ್ರವಾಗಿದೆ ಎಂದು ''ಪಿಂಕ್‌ವಿಲ್ಲಾ'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಅಂದ್ಹಾಗೇ ಇದೇ ''ಪಿಂಕ್‌ವಿಲ್ಲಾ'' ವರದಿಯ ಪ್ರಕಾರ ''ಕೂಲಿ'' ಚಿತ್ರಕ್ಕೆ ₹375ಕೋಟಿ ಖರ್ಚಾಗಿದೆ. ಆ ಪೈಕಿ ಈಗಾಗಲೇ ₹250 ಕೋಟಿ ಹಣ ಮರಳಿ ಬಂದಿದ್ದು ಬಾಕಿ ಉಳಿದ 34% ಹಣ ನಿರ್ಮಾಣ ಸಂಸ್ಥೆ ''ಸನ್ ಪಿಕ್ಚರ್ಸ್‌''ಗೆ ಲಾಭದ ಜೊತೆ ಬಂದು ಸೇರಲಿದೆ. ಈಗಾಗಲೇ ಹಲವು ಟ್ರೇಡ್ ವಿಶ್ಲೇಷಕರು ಲೆಕ್ಕಾಚಾರ ಹಾಕಿರುವಂತೆ ''ಕೂಲಿ'' ಚಿತ್ರದ ಮೊದಲ ದಿನದ ಗಳಿಕೆ ₹100ಕೋಟಿಗೂ ಅಧಿಕವಾಗಿರಲಿದೆ.

rajinikanths-coolie-is-a-blockbuster-before-release-mints-250-cr-in-pre-release-business

ಇನ್ನು ಮತ್ತೊಂದು ಕಡೆ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಹೊರದೇಶಗಳಲ್ಲಿ ಅಡ್ವಾನ್ಸ್‌ ಬುಕ್ಕಿಂಗ್‌ನಿಂದಲೇ ಈ ಚಿತ್ರ ಈಗಾಗಲೇ ₹30 ಕೋಟಿಯನ್ನು ಗಳಿಸಿದೆ. ವಿಶೇಷ ಅಂದರೆ ಇದೇ ಲೋಕೇಶ್ ಕನಕರಾಜ್ ನಿರ್ದೇಶನದ ವಿಜಯ್ ಅಭಿನಯದ ''ಲಿಯೋ'' ಮೊದಲ ದಿನ ವಿದೇಶಗಳಲ್ಲಿ ಮೊದಲ ದಿನ ₹66 ಕೋಟಿಯನ್ನು ಗಳಿಸಿತ್ತು. ''ಕೂಲಿ'' ಈ ದಾಖಲೆಯನ್ನು ಕೂಡ ಮುರಿಯುವ ಸಾಧ್ಯತೆ ಇದ್ದು ವಿದೇಶಿ ನೆಲದಲ್ಲಿ ಮೊದಲ ದಿನ ಅತೀ ಹೆಚ್ಚು ಹಣ ಗಳಿಸಿದ ತಮಿಳು ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುವ ಸಾಧ್ಯತೆ ಇದೆ.

ಇನ್ನುಳಿದಂತೆ ''ಕೂಲಿ'' ಚಿತ್ರವನ್ನು ಮೊದಲು ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ಕನ್ನಡಿಗರಿಗೆ ಸಿಗಲಿದೆ. ಯಾಕೆಂದರೆ ಕರ್ನಾಟಕದಲ್ಲಿ ಹಲವಡೆ ಬೆಳ್ಳಗ್ಗೆ 6ಕ್ಕೆ ಚಿತ್ರದ ಪ್ರದರ್ಶನ ಶುರುವಾಗಲಿದೆ. ಆದರೆ ತಮಿಳುನಾಡಿನಲ್ಲಿ ಚಿತ್ರದ ಮೊದಲ ಪ್ರದರ್ಶನ ಬೆಳಗ್ಗೆ 9ರಿಂದ ಆರಂಭವಾಗಲಿದೆ.

More from Filmibeat

English summary
Rajinikanth's "Coolie" shatters records before its release, earning an unprecedented ₹250 crore from satellite and digital rights. Get the full financial breakdown here.
Read more about: rajinikanth kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X