'ರಾಮಾಯಣ', 'ಟಾಕ್ಸಿಕ್‌'ಗೂ ಮುನ್ನ 'ಕೂಲಿ' ಚಿತ್ರದಲ್ಲೇ ಆ ಕ್ರಾಂತಿ?

ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ 5 ಭಾಷೆಗಳಲ್ಲಿ ತೆರೆಗೆ ಬರ್ತಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಾಗಾರ್ಜುನ, ಉಪೇಂದ್ರ ಹಾಗೂ ಆಮೀರ್ ಖಾನ್ ಕೂಡ ಬಣ್ಣ ಹಚ್ಚಿದ್ದಾರೆ.

ಆಗಸ್ಟ್ 14ಕ್ಕೆ 'ಕೂಲಿ' ಸಿನಿಮಾ ತೆರೆಗೆ ಬರಲಿದೆ. ಅದೇ ದಿನ ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ 'ವಾರ್- 2' ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ತೆಲುಗು ಹಾಗೂ ತಮಿಳು ಭಾಷೆಗಳಿಗೆ ಮಾತ್ರ ಈ ಸಿನಿಮಾ ಡಬ್ ಆಗಿ ಬರ್ತಿದೆ. ಇತ್ತೀಚೆಗೆ 'ಕೂಲಿ' ಚಿತ್ರದ ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

Rajinikanth s Coolie Sparks Buzz Over AI Lip-Sync Tech Ahead of Yash s Toxic and Ramayana

ಅನಿರುದ್ದ್ ರವಿಚಂದರ್ 'ಕೂಲಿ' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. 'ಚಿಕಿಟು' ಸಾಂಗ್ ಅನ್ನು ಸ್ವತಃ ಅನಿರುದ್ದ್ ಹಾಡಿದ್ದು ಲಿರಿಕಲ್ ವೀಡಿಯೋ ಸಾಂಗ್‌ನಲ್ಲಿ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ನಡು ನಡುವೆ ಸೂಪರ್ ಸ್ಟಾರ್ ಸ್ಟೈಲಿಶ್ ಡ್ಯಾನ್ಸ್ ಝಲಕ್ ಕೂಡ ನೋಡಬಹುದು. ನಿರೀಕ್ಷಿತ ಮಟ್ಟದಲ್ಲಿ ಸಾಂಗ್ ಮೂಡಿಬರದೇ ಇದ್ದರೂ ಕೇಳ್ತಾ ಕೇಳ್ತಾ ಇಷ್ಟವಾಗುವಂತಿದೆ.

ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಿಡಿಸಿಕೊಳ್ಳುವಲ್ಲಿ ಚಿತ್ರರಂಗ ಸದಾ ಮುಂದಿರುತ್ತದೆ. ಸದ್ಯ ಇದು ಎಐ ಜಮಾನ. ಈ ತಂತ್ರಜ್ಞಾನ ಬಳಸಿ ನಾನಾ ಪ್ರಯತ್ನಗಳನ್ನು ಮಾಡಲಾಗ್ತಿದೆ. ಇದೇ ತಂತ್ರಜ್ಞಾನದಲ್ಲಿ ಫೀಚರ್ ಸಿನಿಮಾ ಕಟ್ಟಿಕೊಡುವ ಪ್ರಯತ್ನಗಳು ನಡೀತಿದೆ. ಈಗಾಗಲೇ ಕೆಲ ಸಿನಿಮಾಗಳಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ. ದಿನ ದಿನಕ್ಕೆ ಎಐ ತಂತ್ರಜ್ಞಾನವನ್ನು ಅಪ್‌ಡೇಟ್ ಮಾಡಲಾಗುತ್ತಿದ್ದು ಮುಂದೆ ಇದು ಪ್ರಪಂಚದಲ್ಲಿ ಏನೆಲ್ಲಾ ಚಮತ್ಕಾರ ಮಾಡುತ್ತದೆ ಎನ್ನುವುದು ಊಹಿಸುವುದಕ್ಕೂ ಕಷ್ಟ ಎನ್ನುವಂತಾಗಿದೆ.

Rajinikanth s Coolie Sparks Buzz Over AI Lip-Sync Tech Ahead of Yash s Toxic and Ramayana

ಯಶ್ ನಟನೆಯ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರವನ್ನು ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಇಂಗ್ಲೀಷ್ ಭಾಷೆಗಳಲ್ಲಿ ಕೂಡ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇನ್ನುಳಿದಂತೆ ಭಾರತದ ವಿವಿಧ ಭಾಷೆಗಳಲ್ಲಿ ಮಾತ್ರವಲ್ಲದೇ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಮಾಡಿ ಬಿಡುವ ಲೆಕ್ಕಾಚಾರ ನಡೀತಿದೆ. ಆದರೆ ಸಿನಿಮಾ ಡಬ್ ಮಾಡಿದಂತೆ ಕಾಣದೇ ಅದೇ ಭಾಷೆಯಲ್ಲಿ ಚಿತ್ರೀಕರಿಸಿದಂತೆ ಬಹಳ ನೈಜವಾಗಿ ಕಟ್ಟಿಕೊಡುವ ಪ್ರಯತ್ನ ಶುರುವಾಗಿದೆ.

'ರಾಮಾಯಣ' ಚಿತ್ರವನ್ನು ದೇಶ ವಿದೇಶದ ಭಾಷೆಗಳಿಗೆ ಡಬ್ ಮಾಡುತ್ತೇವೆ. ಆದರೆ ಆಯಾ ಭಾಷೆಯಲ್ಲೇ ಕಲಾವಿದರು ಮಾತನಾಡಿದ್ದಂತೆ ಲಿಪ್ ಸಿಂಕ್ ಮಾಡುವ ಪ್ರಯತ್ನ ನಡೀತಿದೆ. ಹಾಗಾಗಿ ಇದು ಡಬ್ ಸಿನಿಮಾ ಎನ್ನುವ ಅನುಮಾನ ಕೂಡ ಬರುವುದಿಲ್ಲ ಎಂದು ಈಗಾಗಲೇ ಚಿತ್ರತಂಡ ಹೇಳಿದೆ. ಇದೇ ರೀತಿ ಯಶ್ ನಟನೆಯ 'ಟಾಕ್ಸಿಕ್' ಚಿತ್ರವನ್ನು ಬೇರೆ ಭಾಷೆಗಳಲ್ಲಿ ತೋರಿಸುವ ಸಾಧ್ಯತೆ ದಟ್ಟವಾಗಿದೆ.

ಹೀಗೆ ಆಯಾ ಭಾಷೆಗಳಿಗೆ ಕಲಾವಿದರ ಮಾತುಗಳನ್ನು ನೈಜವಾಗಿ ಲಿಪ್‌ಸಿಂಕ್ ಮಾಡುವುದು ಯಶಸ್ವಿಯಾದರೆ ಚಿತ್ರರಂಗದಲ್ಲಿ ಇದು ಕ್ರಾಂತಿಗೆ ನಾಂದಿ ಹಾಡಿದಂತಾಗುತ್ತದೆ. 'ರಾಮಾಯಣ' ಚಿತ್ರದ ಮೂಲಕ ಇದಕ್ಕೆ ದೊಡ್ಡ ಬಲ ಸಿಗಲಿದೆ. ಆದರೆ ಅದಕ್ಕೂ ಮುನ್ನ 'ಕೂಲಿ' ಚಿತ್ರದಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರಾ? ಎನ್ನುವ ಪ್ರಶ್ನೆ ಮೂಡಿದೆ. ಅದಕ್ಕೆ ಕಾರಣ 'ಚಿಕಿಟು' ತೆಲುಗು ವರ್ಷನ್ ಲಿರಿಕಲ್ ವೀಡಿಯೋ ಸಾಂಗ್.

'ಚಿಕಿಟು' ತೆಲುಗು ಸಾಂಗ್ ನೋಡಿದರೆ ಅದರಲ್ಲಿ ಅನಿರುದ್ಧ್ ಲಿಪ್‌ಸಿಂಕ್ ಮಾಡಿರುವುದ ಗೊತ್ತಾಗುತ್ತದೆ. ಅಂದರೆ ತಮಿಳಿನಲ್ಲಿ ಮಾತ್ರ ಸಾಂಗ್ ಶೂಟ್ ಮಾಡಿ ಬಳಿಕ ಎಐ ತಂತ್ರಜ್ಞಾನ ಬಳಸಿ ಹೀಗೆ ತೆಲುಗಿನಲ್ಲಿ ಹಾಡು ಹಾಡಿದಂತೆ ತೋರಿಸಲಾಗಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ಕೂಡ ಇದನ್ನು ಅಳವಡಿಸಿಕೊಂಡಿದ್ದಾರಾ? ಎನ್ನುವ ಊಹಾಪೋಹ ಶುರುವಾಗಿದೆ. ಅದೇ ನಿಜವಾಗಿದ್ದರೆ ಈ ಪ್ರಯತ್ನ ಮಾಡಿದ ಮೊದಲ ಭಾರತೀಯ ಸಿನಿಮಾ 'ಕೂಲಿ' ಆಗಲಿದೆ.

'ರಾಮಾಯಣ' ಹಾಗೂ 'ಟಾಕ್ಸಿಕ್' ಚಿತ್ರಗಳ ಡಬ್ಬಿಂಗ್ ವಿಚಾರದಲ್ಲಿ ಹೀಗೆ ಲಿಪ್‌ಸಿಂಕ್ ತಂತ್ರಜ್ಞಾನ ಬಳಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಅದಕ್ಕೂ ಮುನ್ನ 'ಕೂಲಿ' ಚಿತ್ರದ ಮೂಲಕ ಇದು ಪರಿಚಯವಾಗುತ್ತಾ? ಅಥವಾ ಬರೀ 'ಚಿಕಿಟು' ತೆಲುಗು ಸಾಂಗ್ ಮಟ್ಟಿಗೆ ಇದನ್ನು ಬಳಸಿಕೊಂಡಿದ್ದಾರಾ? ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Fans are abuzz over the possible use of AI-powered lip-sync in the Coolie Telugu lyrical song 'Chikitu'. Could this revolutionary tech debut before Yash’s 'Toxic' and Nitesh Tiwari's 'Ramayana'?;
Read more about: yash toxic rajinikanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X