ಮಿಗ್ಜಾಮ್ ಚಂಡಮಾರುತಕ್ಕೆ ಚೆನ್ನೈ ತತ್ತರ: ತಲೈವಾ ಪೊಯೆಸ್ ಗಾರ್ಡನ್ ಮನೆಗೂ ಜಲದಿಗ್ಭಂದನ!

ಇತ್ತೀಚೆಗೆ ಮಿಗ್ಜಾಮ್ ಚಂಡಮಾರುತಕ್ಕೆ ಆರ್ಭಟಕ್ಕೆ ಚೆನ್ನೈ ಮಹಾನಗರಿ ತತ್ತರಿಸಿ ಹೋಗಿದೆ. ಈಗ ಪರಿಸ್ಥಿತಿ ಕೊಂಚ ಸಹಜ ಸ್ಥಿತಿಗೆ ಬರುತ್ತಿದೆ. ಆದರೆ ನಾಲ್ಕು ದಿನಗಳ ಹಿಂದೆ ಚೆನ್ನೈ ನಗರದ ಹಲವು ಪ್ರದೇಶಗಳು ಮುಳುಗಡೆಯಾಗಿತ್ತು. ಬಡವರು, ಶ್ರೀಮಂತರು ಎನ್ನುವ ಭೇದವಿಲ್ಲದೇ ಎಲ್ಲರೂ ಚೆನ್ನೈ ಪ್ರವಾಹ ಪರಿಸ್ಥತಿ ನಿರ್ಮಾಣವಾಗಿತ್ತು.

ತಮಿಳುನಾಡಿನ ನಾಲ್ಕು ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿ ಜನಸಾಮಾನ್ಯರು ಸಂಕಷ್ಟ ಎದುರಿಸುವಂತಾಯಿತು. ಚೆನ್ನೈ ವಿಮಾನ ನಿಲ್ದಾಣ ಸೇರಿದಂತೆ ಪ್ರತಿಷ್ಠಿತ ಬಡಾವಣೆಗಳು ಜಲಾವೃತವಾಗಿದ್ದವು. ಮಳೆಯಿಂದ ಮನೆಗಳಿಗೆ ನೀರು ನುಗ್ಗಿ, ವಿದ್ಯುತ್ ವ್ಯತ್ಯಯ ಉಂಟಾಗಿ ಜನ ಸಂಕಷ್ಟ ಎದುರಿಸಿದ್ದಾರೆ. ತಮಿಳು ಸಿನಿಮಾ ಕಲಾವಿದರು ಕೂಡ ಇದರಿಂದ ಸಮಸ್ಯೆ ಎದುರಿಸುವಂತಾಯಿತು. ನಟ ವಿಷ್ಣು ವಿಶಾಲ್, ನಟಿ ನಮಿತಾ ಸೇರಿದಂತೆ ಹಲವರ ಮನೆಗಳಿಗೆ ನೀರು ನುಗ್ಗಿ ಸಂಕಷ್ಟ ಎದುರಿಸುವಂತಾಯಿತು.

Rajinikanths house in Chennais Poes Garden was also affected by the flood

ಚೆನ್ನೈನ ಪ್ರತಿಷ್ಠಿಯ ಪೊಯೆಸ್ ಗಾರ್ಡನ್ ಭಾಗದಲ್ಲಿ ಸಿನಿಮಾ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ನಿವಾಸ ಕೂಡ ಅಲ್ಲೇ ಇದೆ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ಪೊಯೆಸ್ ಗಾರ್ಡನ್‌ ರಸ್ತೆಗಳಲ್ಲೆಲ್ಲಾ ನೀರು ತುಂಬಾ ಅವಾಂತರವಾಗಿತ್ತು. ರಜನಿಕಾಂತ್ ನಿವಾಸದ ರಸ್ತೆಗಳಲ್ಲಿ ನೀರು ತುಂಬಿದ್ದ ವಿಡಿಯೋ ಈಗ ವೈರಲ್ ಆಗುತ್ತಿದೆ.

ಸ್ಟಾರ್‌ ಆದರೂ ಸೂಪರ್ ಸ್ಟಾರ್ ಆದರೂ ಮಳೆ ಪ್ರಕೃತಿ ಮುಂದೆ ಎಲ್ಲರೂ ಒಂದೇ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಕಳೆದೊಂದು ವಾರದಿಂದ ರಜನಿಕಾಂತ್ ಶೂಟಿಂಗ್ ನಿಮಿತ್ತ ಬೇರೆ ಕಡೆ ಇದ್ದಾರೆ. ಮನೆಯಲ್ಲಿ ಇರಲಿಲ್ಲ ಎನ್ನಲಾಗುತ್ತಿದೆ. ಆದರೆ ಅವರ ಮನೆಯ ರಸ್ತೆಗಳಲ್ಲಿ ನೀರು ತುಂಬಿರುವ ವಿಡಿಯೋಗಳು ವೈರಲ್ ಆಗುತ್ತಿದೆ.

ಚೆನ್ನೈನ ಪಲ್ಲಿಕರಣ ನಾರಾಯಣಪುರಂ ಕೆರೆ ಒಡೆದು, ಬಹುಭಾಷಾ ನಟಿ ನಮಿತಾ ಮನೆಗೆ ನೀರು ನುಗ್ಗಿದ್ದು, ಮನೆಯಲ್ಲಿ ಆರು ಅಡಿಗಳಷ್ಟು ನೀರು ತುಂಬಿತ್ತು ಎಂದು ವರದಿ ಆಗಿತ್ತು. ಆಕೆ ತಮ್ಮ ಇಬ್ಬರು ಮಕ್ಕಳು ಮತ್ತು ಪತಿಯೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ಇದ್ದ ಸಂದರ್ಭದಲ್ಲಿ ಮಳೆ ಹೆಚ್ಚಾಗಿ ನೀರು ಹರಿದು ಬಂದಿತ್ತು. ಬಳಿಕ ರಕ್ಷಣಾ ಸಿಬ್ಬಂದಿ ಅವರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದಿದ್ದರು.

ನಟ ವಿಷ್ಣು ವಿಶಾಲ್ ಹಾಗೂ ಪತ್ನಿ ಜ್ವಾಲಾ ಗುಟ್ಟಾ ಸಹ ಚೆನ್ನೈ ಮಳೆಯಿಂದ ಸಂಕಷ್ಟಕ್ಕೆ ಈಡಾಗಿದ್ದರು. ನಟ ವಿಷ್ಣು ಮನೆಯಲ್ಲಿ ಮೊಬೈಲ್ ಸಿಗ್ನಲ್ ಸಿಗದೇ ಮನೆಯ ಮೇಲೆ ಏರಿ ರಕ್ಷಣೆಗಾಗಿ ಮನವಿ ಮಾಡಿದ್ದರು. ಚೆನ್ನೈ ಅಗ್ನಿಶಾಮಕ ಸಿಬ್ಬಂದಿ ದಂಪತಿಯನ್ನು ರಕ್ಷಿಸಿದ್ದರು. ಇನ್ನು ಬಾಲಿವುಡ್ ನಟ ಆಮೀರ್ ಖಾನ್ ಸಹ ವಿಷ್ಣು ವಿಶಾಲ್ ಮನೆಯಲ್ಲೇ ಇದ್ದರು ಎಂದು ವರದಿಯಾಗಿತ್ತು. ಅವರನ್ನು ಕೂಡ ರಕ್ಷಣಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬಂದಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗಿತ್ತು.

ಇನ್ನು ಚೆನ್ನೈ ಪ್ರವಾಹ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ತಮಿಳು ಕಲಾವಿದರು ದೇಣಿಗೆ ನೀಡಿದ್ದಾರೆ. ಅಭಿಮಾನಿಗಳು ಸಹಾಯ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ತಮಿಳುನಾಡಿನ ಕಾಂಚೀಪುರಂ, ಚೆನ್ನೈ, ಚೆಂಗಲ್ಪಟ್ಟು ಹಾಗೂ ತಿರುವಳ್ಳೂರು ಜಿಲ್ಲೆಗಳಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ನಟರಾದ ಸೂರ್ಯ ಹಾಗೂ ಸಹೋರ ಕಾರ್ತಿ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ನಟ ನಯನತಾರಾ ಸೇರಿದಂತೆ ಮತ್ತೆ ಕೆಲವರು ಸಹಾಯ ಹಸ್ತ ಚಾಚಿದ್ದಾರೆ.

More from Filmibeat

English summary
Rajinikanth's Poes Garden house suffers waterlogging, video goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X