ಅನಾರೋಗ್ಯದಿಂದ ಆಸ್ಪತ್ರೆಗೆ ತಲೈವಾ; 'ವೆಟ್ಟೆಯಾನ್' ಸೆನ್ಸಾರ್, ಟ್ರೈಲರ್ ಕಥೆಯೇನು?

ರಜನಿಕಾಂತ್ ನಟನೆಯ ಕಾಪ್ ಡ್ರಾಮಾ 'ವೆಟ್ಟೆಯಾನ್' ಮುಂದಿನ ವಾರ ತೆರೆಗೆ ಬರಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಲಿದೆ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ನಟ ರಜನಿಕಾಂತ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಸಹಜವಾಗಿಯೇ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಚೆನ್ನೈ ಅಪೊಲೊ ಆಸ್ಪತ್ರೆಯಲ್ಲಿ ತಲೈವಾಗೆ ನುರಿತ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಗಂಭೀರ ಹೊಟ್ಟೆ ನೋವಿನ ಸಮಸ್ಯೆಯಿಂದ ರಜನಿಕಾಂತ್ ನಿನ್ನೆ(ಸೆಪ್ಟೆಂಬರ್ 30) ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'ವೆಟ್ಟೆಯಾನ್' ಸಿನಿಮಾ ಟ್ರೈಲರ್ ಇಂದು(ಅಕ್ಟೋಬರ್ 1) ಬಿಡುಗಡೆ ಆಗಬೇಕಿತ್ತು. ಸೂಪರ್ ಸ್ಟಾರ್ ಆಸ್ಪತ್ರೆಗೆ ದಾಖಲಾಗಿರುವುದರಿಂದ ಟ್ರೈಲರ್ ರಿಲೀಸ್ ಮುಂದೂಡಲಾಗುತ್ತಿದೆ.

Rajinikanth s Vettaiyan censor and runtime trailer from Oct 2

ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಜ್ಞಾನವೇಲ್ 'ವೆಟ್ಟೆಯಾನ್' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಅಮಿತಾಬ್ ಬಚ್ಚನ್, ಫಹಾಸ್ ಫಾಸಿಲ್, ರಾಣ ದಗ್ಗುಬಾಟಿ, ಮಂಜು ವಾರಿಯರ್ ಸೇರಿದಂತೆ ದೊಡ್ಡ ತಾರಾಗಣ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿದೆ. ಅನಿರುದ್ದ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟೀಸರ್ ಅಭಿಮಾನಿಗಳ ಮನಗೆದ್ದಿತ್ತು.

'ಜೈಲರ್' ಬಳಿಕ ರಜನಿಕಾಂತ್ ನಟಿಸಿರುವ ಸಿನಿಮಾ ಇದು. ಈ ಬಾರಿ ಪೊಲೀಸ್ ಆಫೀಸರ್ ಆಗಿ ತಲೈವಾ ಅಬ್ಬರಿಸಿದ್ದಾರೆ. ಎನ್‌ಕೌಂಟರ್ ಸ್ಪೆಷಲಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಮರ್ಷಿಯಲ್ ಅಂಶಗಳ ಜೊತೆಗೆ ಒಂದೊಳ್ಳೆ ಸಂದೇಶವನ್ನು ಈ ಚಿತ್ರದಲ್ಲಿ ಕೊಡಲಾಗುತ್ತಿದೆ. ಎನ್‌ಕೌಂಟರ್ ಸರೀನಾ? ತಪ್ಪಾ? ಎನ್ನುವ ಚರ್ಚೆ ಈ ಚಿತ್ರದಲ್ಲಿ ನಡೆದಿರುವಂತೆ ಕಾಣುತ್ತಿದೆ. ಇತ್ತೀಚೆಗಷ್ಟೆ 'ವೆಟ್ಟೆಯಾನ್' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೆದಿತ್ತು.

ರಜಿನಿಕಾಂತ್ ಎದುರು ಅಮಿತಾಬ್ ಬಚ್ಚನ್ ಮುಖ್ಯವಾದ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಹಾಗಾಗಿ ಉತ್ತರ ಭಾರತದಲ್ಲೂ 'ವೆಟ್ಟೆಯಾನ್' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಇನ್ನು ಕನ್ನಡಕ್ಕೂ ಸಿನಿಮಾ ಡಬ್ ಆಗಿ ಬರ್ತಿದೆ. ಬಿಗ್‌ಬಿ ಪಾತ್ರಕ್ಕೆ AI ತಂತ್ರಜ್ಞಾನ ಬಳಸಿ ಸಾಧ್ಯವಾದಷ್ಟು ಅವರ ವಾಯ್ಸ್ ಅನ್ನೇ ಡಬ್ ಮಾಡಲಾಗಿದೆ. ಟೀಸರ್‌ನಲ್ಲಿ ಅದರ ಝಲಕ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಈ ಹಿಂದೆ 'ಜೈಭೀಮ್' ಚಿತ್ರ ಕಟ್ಟಿಕೊಟ್ಟು ಜ್ಞಾನವೇಲ್ ಗೆದ್ದಿದ್ದರು. ಇದೀಗ ತಲೈವಾ ಜೊತೆ ಕೈ ಜೋಡಿಸಿದ್ದು ಒಂದೊಳ್ಳೆ ಚಿತ್ರವನ್ನು ಪ್ರೇಕ್ಷಕರು ನಿರೀಕ್ಷಿಸುತ್ತಿದ್ದಾರೆ. ಅಕ್ಟೋಬರ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಸೆನ್ಸಾರ್ ಕೆಲಸ ಮುಗಿದಿದ್ದು ಯು/ಎ ಸರ್ಟಿಫಿಕೇಟ್ ಸಿಕ್ಕಿದೆ ಎಂದು ಚಿತ್ರತಂಡ ಘೋಷಿಸಿದೆ. ಇನ್ನು 'ವೆಟ್ಟೆಯಾನ್' ಚಿತ್ರದ ರನ್‌ಟೈಮ್ 2 ಗಂಟೆ 43 ಸಿನಿಮಾ ಎನ್ನಲಾಗ್ತಿದೆ.

ರಜನಿಕಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ಯಾರು ಆತಂಕಗೊಳ್ಳುವ ಅಗತ್ಯ ಇಲ್ಲ ಎಂದು ಆಪ್ತ ಮೂಲಗಳಿದ ಮಾಹಿತಿ ಸಿಕ್ಕಿರುವುದಾಗಿ ವರದಿಯಾಗಿದೆ. ಇಂದು(ಅಕ್ಟೋಬರ್ 1) ಸಂಜೆ ವೇಳೆಗೆ ತಲೈವಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ನಾಳೆ (ಅಕ್ಟೋಬರ್ 2) 'ವೆಟ್ಟೆಯಾನ್' ಚಿತ್ರದ ಆಕ್ಷನ್ ಪ್ಯಾಕ್ಡ್ ಟ್ರೈಲರ್ ರಿಲೀಸ್ ಆಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ.

ದಸರಾ ಸಂಭ್ರಮದಲ್ಲಿ 'ವೆಟ್ಟೆಯಾನ್' ಸಿನಿಮಾ ತೆರೆಗೆ ಬರ್ತಿದೆ. ಇದೇ ಕಾರಣಕ್ಕೆ ಅಕ್ಟೋಬರ್ 10ಕ್ಕೆ ಬರಬೇಕಿದ್ದ 'ಕಂಗುವ' ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಆಗಿದೆ. ತಲೈವಾ ಸಿನಿಮಾ ಜೊತೆ ಪೈಪೋಟಿ ಬೇಡ ಎಂದು ಚಿತ್ರತಂಡ ಈ ನಿರ್ಧಾರಕ್ಕೆ ಬಂದಿತ್ತು. ಸೂರ್ಯ ನಟನೆಯ 'ಕಂಗುವ' ನವೆಂಬರ್ 15ಕ್ಕೆ ತೆರೆಗೆ ಬರಲಿದೆ. ಇನ್ನು 'ವೆಟ್ಟೆಯಾನ್' ರಿಲೀಸ್ ಮರುದಿನ ಕನ್ನಡದ 'ಮಾರ್ಟಿನ್' ಸಿನಿಮಾ ತೆರೆಗಪ್ಪಳಿಸಲಿದೆ.

More from Filmibeat

English summary
Rajinikanth hospitalised; Vettaiyan Trailer is set to release on Oct 2
Read more about: rajinikanth kollywood tamil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X