For Quick Alerts
  ALLOW NOTIFICATIONS  
  For Daily Alerts

  ಅಮೆರಿಕ ಕ್ಲಿನಿಕ್ ಎದುರು ಮಗಳ ಜೊತೆ ರಜನಿ, ಫೋಟೋ ವೈರಲ್

  |

  ಸೂಪರ್ ಸ್ಟಾರ್ ರಜನಿಕಾಂತ್ ಅಮೆರಿಕಾದ ಮೆಯೊ ಕ್ಲಿನಿಕ್ ಎದುರು ನಡೆದು ಬರುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗಳು ಐಶ್ವರ್ಯ ಧನುಶ್ ಜೊತೆ ರಜನಿ ಕ್ಲಿನಿಕ್ ಮುಂಭಾಗದಲ್ಲಿ ರಸ್ತೆ ದಾಟುತ್ತಿರುವ ಫೋಟೋ ಸದ್ದು ಮಾಡ್ತಿದೆ.

  ಆರೋಗ್ಯ ತಪಾಸಣೆ ಹಿನ್ನೆಲೆ ಯುಎಸ್‌ ತೆರಳಿರುವ ರಜನಿಕಾಂತ್, ಮೆಯೊ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಮಧ್ಯರಾತ್ರಿ ಅಮೆರಿಕಾ ತೆರಳಿದ ಸೂಪರ್‌ಸ್ಟಾರ್ ರಜನಿಕಾಂತ್ಮಧ್ಯರಾತ್ರಿ ಅಮೆರಿಕಾ ತೆರಳಿದ ಸೂಪರ್‌ಸ್ಟಾರ್ ರಜನಿಕಾಂತ್

  ಜೂನ್ 19 ರಂದು ರಜನಿಕಾಂತ್ ಮತ್ತು ಪತ್ನಿ ಲತಾ ಚೆನ್ನೈನಿಂದ ಹೊರಟಿದ್ದರು. ಅದಕ್ಕೂ ಮುಂಚೆ ಐಶ್ವರ್ಯ ಮತ್ತು ಧನುಶ್ ದಂಪತಿ ಚಿತ್ರೀಕರಣ ಹಿನ್ನೆಲೆ ಯುಎಸ್‌ ತೆರಳಿದ್ದರು. ರಜನಿ ಅಮೆರಿಕಾ ತಲುಪಿದ ನಂತರ ಮಗಳು ಐಶ್ವರ್ಯ ಪೋಷಕರ ಜೊತೆ ಸೇರಿದ್ದಾರೆ.

  2016ರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕಿಡ್ನಿ ಸಂಬಂಧಿತ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆ ಆರೋಗ್ಯ ತಪಾಸಣೆಯ ಕಾರಣದಿಂದ ಅಮೆರಿಕಾ ಹೋಗಿರುವುದಾಗಿ ವರದಿಯಾಗಿದೆ.

  ರಜನಿಯ ಆರೋಗ್ಯ ತಪಾಸಣೆ ಮುಗಿಸಿ ಕೆಲವು ದಿನ ಅಲ್ಲಿಯೇ ಉಳಿಯಲಿದ್ದಾರೆ. ಬಳಿಕ, ಭಾರತಕ್ಕೆ ರಜನಿ ಕುಟುಂಬ ಬರುವುದಾಗಿ ತಿಳಿದು ಬಂದಿದೆ.

  ಅಣ್ಣಾತ್ತೆ ಸಿನಿಮಾದಲ್ಲಿ ತಲೈವಾ

  ಇನ್ನುಳಿದಂತೆ ರಜನಿಕಾಂತ್ ಅಣ್ಣಾತ್ತೆ ಸಿನಿಮಾದ ಚಿತ್ರೀಕರಣದಲ್ಲಿದ್ದರು. ಸಿರುತೈ ಶಿವ ನಿರ್ದೇಶನದಲ್ಲಿ ಈ ಚಿತ್ರದ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆದಿತ್ತು. ಚಿತ್ರೀಕರಣ ಮುಗಿಸಿ ಚೆನ್ನೈಗೆ ಹಿಂತಿರುಗಿದ್ದ ರಜನಿಕಾಂತ್ ಈಗ ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ಹೋಗಿದ್ದಾರೆ.

  ಮುಂಬೈನಿಂದ ಅಭಿಮಾನಿಗೆ ಬುದ್ದಿ ಹೇಳಿದ ರಶ್ಮಿಕ! | Filmmibeat Kannada

  ರಜನಿಕಾಂತ್ ಜೊತೆ ನಯನತಾರ, ಕೀರ್ತಿ ಸುರೇಶ್, ಹಿರಿಯ ನಟ ಮೀನಾ, ಖುಷ್ಬೂ, ಪ್ರಕಾಶ್ ರಾಜ್, ಸೂರಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ಈ ಸಿನಿಮಾ ನಿರ್ಮಿಸುತ್ತಿದ್ದು, ಡಿ ಇಮ್ಮನ್ ಸಂಗೀತ ಇದೆ. ಈಗಾಗಲೇ ಪ್ರಕಟಿಸಿರುವಂತೆ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 4ಕ್ಕೆ ಥಿಯೇಟರ್‌ಗೆ ಬರಲಿದೆ.

  English summary
  Superstar Rajinikanth latest Photos from america outside of mayo hospital goes viral in Social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X