ಅಷ್ಟು ದೊಡ್ಡ ಸೂಪರ್‌ಸ್ಟಾರ್ ಆದರೂ ಅವರಲ್ಲಿ ಇನ್ನು ಸರಳತೆ, ಮುಗ್ಧತೆ ಇದೆ: ತಮನ್ನಾ ಹೀಗಂದಿದ್ದು ಯಾರ ಬಗ್ಗೆ?
ಈ ವರ್ಷದ ಬಿಗ್ ಹಿಟ್ ಹಾಡು ಎಂದರೆ ಅದು ತಮನ್ನಾ ಭಾಟಿಯಾ ಅವರ 'ಕಾವಾಲಾ' ಹಾಡು. ಬಾಲಿವುಡ್, ಟಾಲಿವುಡ್, ಕಾಲಿವುಡ್‌ಗಳಲ್ಲಿ ಸಾಲು ಸಾಲು ಸಿನಿಮಾಗಳು, ವೆಬ್ ಸೀರಿಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಈ ವರ್ಷ ಫುಲ್ ಬ್ಯುಸಿಯಾಗಿದ್ದಾರೆ.
ತಮ್ಮ ಸಿನಿ ಕೆರಿಯರ್ ಮತ್ತು ಸಹೋದ್ಯೋಗಿಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಾವು ಭೇಟಿಯಾದ ಅತ್ಯಂತ ವಿನಮ್ರ ವ್ಯಕ್ತಿ ಎಂದರೆ ನಟ ರಜನಿಕಾಂತ್ ಎಂದು ಹೇಳಿದ್ದಾರೆ. ರಜನಿಕಾಂತ್ ಜೊತೆಗೆ ತಮನ್ನಾ ಜೈಲರ್ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದ ಕಾವಾಲಾ ಹಾಡು ಸೂಪರ್ ಡೂಪರ್ ಹಿಟ್ ಆಗಿದೆ.

ಇತ್ತೀಚೆಗೆ ನಟಿ ತಮನ್ನಾ ಭಾಟಿಯಾ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಶೋಸ್ಟಾಪರ್ ಆಗಿದ್ದರು. ಈ ವೇಳೆಮಾರ್ಪಟ್ಟರು. ರಜನಿಕಾಂತ್ ಜೊತೆಗಿನ ಬ್ಲಾಕ್‌ಬಸ್ಟರ್ 'ಜೈಲರ್' ಸಿನಿಮಾ ಮತ್ತು ಅವರೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಇಂಡಿಯಾ ಟುಡೇ ಸಂದರ್ಶನ ನಡೆಸಿದೆ. ಅವರ ಜೊತೆಗೆ ಮಾತನಾಡಿರುವ ತಮನ್ನಾ ರಜನಿಕಾಂತ್ ಅವರ ವ್ಯಕ್ತಿತ್ವವನ್ನು ಹಾಡಿ ಹೊಗಳಿದ್ದಾರೆ.
'ಜೈಲರ್' ಚಿತ್ರದಲ್ಲಿ ರಜಿನಿಕಾಂತ್ ಜೊತೆ ಕೆಲಸ ಮಾಡಿರುವ ತಮನ್ನಾ
ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ತಮನ್ನಾ ಭಾಟಿಯಾ, "ಅವರು ನಾನು ಭೇಟಿಯಾದ ಅತ್ಯಂತ ವಿನಮ್ರ ವ್ಯಕ್ತಿ. ಅಂತಹ ಸೂಪರ್ಸ್ಟಾರ್ಡಮ್ ಅನ್ನು ನೋಡಿದರು ಕೂಡ ಒಂದು ರೀತಿಯ ಸರಳತೆ ಮತ್ತು ಮುಗ್ಧತೆ ಯನ್ನು ಹಾಗೆ ಇರಿಸಿಕೊಳ್ಳುವುದು ತುಂಬಾ ಕಷ್ಟ. ಆದರೆ, ಅವರು ಹಾಗೆ ಇದ್ದಾರೆ. ಇದನ್ನು ನೋಡಲು ತುಂಬಾ ಖುಷಿಯಾಗುತ್ತದೆ" ಎಂದಿದ್ದಾರೆ.

ಮುಂದುವರಿದು ಮಾತನಾಡಿರುವ ತಮನ್ನಾ ಭಾಟಿಯಾ ರಜನಿಕಾಂತ್ ಜೊತೆ ಕೆಲಸ ಮಾಡಿದ್ದು ಆಶೀರ್ವಾದ ಎಂದು ಹೇಳಿದ್ದಾರೆ. "ಅವರ (ರಜನಿಕಾಂತ್) ಜೊತೆ ಕೆಲಸ ಮಾಡುವ ಕನಸು ನನಸಾಗಿದೆ. ಜೈಲರ್ ಸೆಟ್‌ನಲ್ಲಿ ಕಳೆದ ದಿನಗಳನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ರಜನಿಕಾಂತ್ ಅವರು ನನಗೆ ಆಧ್ಯಾತ್ಮಿಕ ಪ್ರಯಾಣದ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ಪುಸ್ತಕಕ್ಕೆ ಅವರು ಹಸ್ತಾಕ್ಷರ ಕೂಡ ಹಾಕಿದ್ದಾರೆ" ಎಂದು ತಮನ್ನಾ ಹೇಳಿದ್ದಾರೆ.
ಕಾವಾಲಾ ಹಾಡಿನ ಕ್ರೇಜ್
ಜೈಲರ್ ಸಿನಿಮಾದ ಕಾವಾಲಾ ಹಾಡಿನ ಕ್ರೇಜ್ ಹೇಗಿತ್ತು ಎಂದರೆ ಇಡೀ ದೇಶದಲ್ಲಿ ಕೋಟ್ಯಾಂತರ ರಿಲ್ಸ್‌ಗಳು ಮಾಡಲಾಗಿತ್ತು. ನಟಿ ತಮನ್ನಾ ಡ್ಯಾನ್ಸ್ ಮತ್ತು ಲುಕ್‌ಗೆ ಇಡೀ ಸಿನಿ ಪ್ರೇಮಿಗಳು ಫಿದಾ ಆಗಿದ್ದರು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಜಪಾನ್‌ನ ಭಾರತದ ರಾಯಭಾರಿ ಹಿರೋಷಿ ಸುಜುಕಿ ಅವರು ಈ ಹಾಡಿಗೆ ಹೆಜ್ಜೆ ಹಾಕಿದ್ದರು. ಜಪಾನೀಸ್ ಯೂಟ್ಯೂಬರ್ ಮೇಯೊ ಸ್ಯಾನ್ ಅವರೊಂದಿಗೆ ವಿಡಿಯೋ ಮಾಡಿದ್ದರು. "ಜಪಾನೀಸ್ ಯೂಟ್ಯೂಬರ್ ಮೇಯೊ ಸ್ಯಾನ್ ಜೊತೆಗಿನ ಕಾವಾಲಾ ಡ್ಯಾನ್ಸ್ ವೀಡಿಯೊ... ರಜನಿಕಾಂತ್ ಅವರ ಮೇಲಿನ ನನ್ನ ಪ್ರೀತಿ ಮುಂದುವರಿಯುತ್ತದೆ.." ಎಂದು ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಈ ವರ್ಷದ ತಮಿಳು ಸೂಪರ್ ಹಿಟ್ ಜೈಲರ್ ಗಲ್ಲಾಪೆಟ್ಟಿಗೆಯಲ್ಲಿ ಹಲವು ದಾಖಲೆಗಳನ್ನು ಉಡೀಸ್ ಮಾಡಿದೆ. ವಿಶ್ವದಾದ್ಯಂತ 650 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ. ಇನ್ನು ನಟಿ ತಮನ್ನಾ ಭಾಟಿಯಾ ಅವರ ಹಲವು ವೆಬ್ ಸೀರಿಸ್‌ಗಳು ಬಿಡುಗಡೆಯಾಗಿವೆ. ಅವರ ಮಲಯಾಳಂ ಚಿತ್ರ ಬಾಂದ್ರಾ, ತಮಿಳು ಚಿತ್ರ ಅರಣ್ಮೈ 4 ಮತ್ತು ಹಿಂದಿ ಚಿತ್ರ ವೇದಾ ಬಿಡುಗಡೆಗೆ ಸಾಲುಗಟ್ಟಿ ನಿಂತಿವೆ.


Click it and Unblock the Notifications










