ಸೂಪರ್ ಸ್ಟಾರ್ ರಜನಿಕಾಂತ್‌ಗೆ ಮತ್ತೆ ಕೊರೊನಾ ಪರೀಕ್ಷೆ
ಸೂಪರ್ ಸ್ಟಾರ್ ರಜನಿಕಾಂತ್ ಅವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದ ಕಾರಣ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಸತತ ಚಿತ್ರೀಕರಣದಿಂದ ಬಳಲಿದ್ದು ರಜನಿ ಅವರ ರಕ್ತದ ಒತ್ತಡದಲ್ಲಿ ಏರಳಿತ ಕಂಡು ಬಂದಿದೆ ಎಂದು ಆಸ್ಪತ್ರೆ ಮಂಡಳಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತ್ತು.
ಪ್ರಸ್ತುತ, ರಜನಿ ಆರೋಗ್ಯದ ಮೇಲೆ ವೈದ್ಯರು ನಿಘಾ ವಹಿಸಿದ್ದು, ಇಂದು ಸಹ ಸಾಮಾನ್ಯ ಪರೀಕ್ಷೆಗಳನ್ನು ಮಾಡಲಾಗುವುದು ಎಂದು ತಿಳಿದು ಬಂದಿದೆ. ಇದರ ಜೊತೆಗೆ ಮತ್ತೊಮ್ಮೆ ತಲೈವಾಗೆ ಕೊವಿಡ್ ಪರೀಕ್ಷೆ ಮಾಡಲಾಗುತ್ತದೆಯಂತೆ.
ಅಣ್ಣಾತ್ತೆ ಸಿನಿಮಾ ಸೆಟ್‌ನಲ್ಲಿ ಏಂಟು ಜನರಿಗೆ ಕೊರೊನಾ ವೈರಸ್ ತಗುಲಿದ್ದು, ಕೂಡಲೇ ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು. ಸೆಟ್‌ನಲ್ಲಿ ಕೊವಿಡ್ ಪತ್ತೆಯಾದ ಕಾರಣ ಮುಂಜಾಗ್ರತೆಯಿಂದ ರಜನಿಕಾಂತ್ ಅವರಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು.

ಡಿಸೆಂಬರ್ 22 ರಂದು ತಲೈವಾಗೆ ಕೊವಿಡ್ ಪರೀಕ್ಷೆ ಒಳಗಾಗಿದ್ದರು. ಫಲಿತಾಂಶದಲ್ಲಿ ನೆಗಿಟಿವ್ ಬಂದಿತ್ತು. ಆದರೂ ರಜನಿ ಅವರನ್ನು ಐಸೋಲೇಶನ್ ವಾರ್ಡ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಲಾಕ್‌ಡೌನ್ ವೇಳೆಯೂ ರಜನಿಕಾಂತ್ ಅವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿತ್ತು. ಆಗ ಮನೆಯಲ್ಲಿದ್ದ ಕಾರಣ ಸಂಪೂರ್ಣವಾಗಿ ವಿಶ್ರಾಂತಿ ಪಡೆದಿದ್ದರು. ಆದ್ರೀಗ, ಶೂಟಿಂಗ್‌ನಲ್ಲಿ ಪಾಲ್ಗೊಂಡ ಕಾರಣ ಬಳಲಿದ್ದಾರೆ ಎನ್ನಲಾಗಿದೆ.
ಸದ್ಯದ ಮಾಹಿತಿ ಪ್ರಕಾರ, ದಿನಕ್ಕೆ 14 ಗಂಟೆಗಳ ಕಾಲ ರಜನಿ ಕೆಲಸ ಮಾಡ್ತಿದ್ದರು ಎಂದು ಹೇಳಲಾಗಿದೆ. ಡಿಸೆಂಬರ್ 31 ರಂದು ರಾಜಕೀಯ ಪಕ್ಷದ ಹೆಸರನ್ನು ಘೋಷಿಸಲಿರುವ ತಲೈವಾ ಅದಕ್ಕಾಗಿ ತಯಾರಿ ಸಹ ನಡೆಸಿದ್ದಾರೆ. ಅದಕ್ಕೂ ಮುಂಚೆ ಅಣ್ಣಾತ್ತೆ ಸಿನಿಮಾದ ಶೂಟಿಂಗ್ ಎಷ್ಟು ಸಾಧ್ಯವೋ ಅಷ್ಟು ಬೇಗ ಮುಗಿಸೋಣ ಎಂಬ ಯೋಜನೆಯಲ್ಲಿದ್ದರು.


Click it and Unblock the Notifications











