For Quick Alerts
  ALLOW NOTIFICATIONS  
  For Daily Alerts

  ಸಿಎಂ ಮಗನ ಸಿನಿಮಾಕ್ಕೆ ಸ್ಟಾರ್ ನಟನ ಪುತ್ರಿ ನಾಯಕಿ

  |

  ತಮಿಳುನಾಡು ವಿಧಾನಸಭೆ ಚುನಾವಣೆ ಕೆಲವು ದಿನಗಳ ಹಿಂದಷ್ಟೆ ಮುಗಿದಿದ್ದು ಡಿಎಂಕೆ ಪಕ್ಷ ಅಧಿಕಾರಕ್ಕೆ ಏರಿ ಸ್ಟ್ಯಾಲಿನ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

  ಸ್ಟ್ಯಾಲಿನ್ ಪುತ್ರ ಉದಯನಿಧಿ ಸ್ಟ್ಯಾಲಿನ್ ಸಹ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ. ಸಿನಿಮಾ ನಟರೂ ಆಗಿರುವ ಉದಯನಿಧಿ ಸ್ಟ್ಯಾಲಿನ್‌ಗೆ ಇದು ಮೊದಲ ಚುನಾವಣೆ ಆಗಿತ್ತು. ಉದಯನಿಧಿ ಸ್ಟ್ಯಾಲಿನ್ ಅವರ ತಾತ ಕರುಣಾನಿಧಿ ಅವರ ಸ್ವಂತ ಕ್ಷೇತ್ರದಿಂದ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.

  ಚುನಾವಣೆ ಮುಗಿದ ಬಳಿಕ ಮತ್ತೆ ನಟನೆಗೆ ಮರಳಿರುವ ಉದಯನಿಧಿ ಸ್ಟ್ಯಾಲಿನ್ ಹಿಂದಿಯ 'ಆರ್ಟಿಕಲ್ 15' ಸಿನಿಮಾದ ತಮಿಳು ರೀಮೇಕ್‌ನಲ್ಲಿ ನಟಿಸಲಿದ್ದಾರೆ. ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ನಾಯಕಿಯ ಆಯ್ಕೆ ಈಗಷ್ಟೆ ಮುಗಿದಿದೆ.

  ರಾಜಶೇಖರ್ ಪುತ್ರಿ ಶಿವಾನಿ

  ರಾಜಶೇಖರ್ ಪುತ್ರಿ ಶಿವಾನಿ

  ತೆಲುಗಿನ ಸ್ಟಾರ್ ನಟರಲ್ಲಿ ಒಬ್ಬರಾದ ರಾಜಶೇಖರ್ ಅವರ ಮಗಳು ಶಿವಾನಿ ರಾಜಶೇಖರ್ 'ಆರ್ಟಿಕಲ್ 15' ಸಿನಿಮಾದ ತಮಿಳು ರೀಮೇಕ್‌ನಲ್ಲಿ ಉದಯನಿಧಿ ಸ್ಟ್ಯಾಲಿನ್ ಜೊತೆಗೆ ನಟಿಸಲಿದ್ದಾರೆ. ಶಿವಾನಿ ರಾಜಶೇಖರ್‌ಗೆ ಇದು ಇನ್ನೂ ಎರಡನೇಯ ಸಿನಿಮಾ. ಇದಕ್ಕೂ ಮುನ್ನಾ ತಮಿಳಿನ 'ಅನ್ಬರಿವ್' ಸಿನಿಮಾದಲ್ಲಿ ನಟಿಸಿದ್ದಾರೆ.

  ಆಯುಷ್‌ಮಾನ್ ಖುರಾನಾ ನಟಿಸಿದ್ದ ಸಿನಿಮಾ

  ಆಯುಷ್‌ಮಾನ್ ಖುರಾನಾ ನಟಿಸಿದ್ದ ಸಿನಿಮಾ

  ಹಿಂದಿಯಲ್ಲಿ ಆಯುಷ್‌ಮಾನ್ ಖುರಾನಾ ನಟಿಸಿದ್ದ 'ಆರ್ಟಿಕಲ್ 15' ಸಿನಿಮಾವು ಜಾತಿ ಪದ್ಧತಿ ವಿರುದ್ಧ ಪೊಲೀಸ್ ಹಿರಿಯ ಅಧಿಕಾರಿಯೊಬ್ಬ ಸಿಡಿದೇಳುವ ಕತೆಯನ್ನು ಹೊಂದಿತ್ತು. ಅದೇ ಸಿನಿಮಾವನ್ನು ತಮಿಳಿನಲ್ಲಿ ನಿರ್ಮಿಸಲಾಗುತ್ತಿದ್ದು ಸಿನಿಮಾವನ್ನು ಅರುಣರಾಜ ಕಾಮರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಣ ಮಾಡುತ್ತಿರುವುದು ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್.

  ಬುಡಕಟ್ಟು ಸಮುದಾಯದ ಯುವತಿ ಪಾತ್ರದಲ್ಲಿ ಶಿವಾನಿ

  ಬುಡಕಟ್ಟು ಸಮುದಾಯದ ಯುವತಿ ಪಾತ್ರದಲ್ಲಿ ಶಿವಾನಿ

  'ಆರ್ಟಿಕಲ್ 15' ನಲ್ಲಿ ಎರಡು ಮುಖ್ಯ ಮಹಿಳಾ ಪಾತ್ರಗಳು ಇದ್ದು ಬುಡಕಟ್ಟು ಸಮುದಾಯದ ಯುವತಿಯ ಪಾತ್ರದಲ್ಲಿ ಶಿವಾನಿ ರಾಜಶೇಖರ್ ನಟಿಸುತ್ತಿದ್ದಾರೆ. ನಾಯಕನ ಪ್ರೇಯಸಿ ಪಾತ್ರದಲ್ಲಿ ತಾನ್ಯಾ ರವಿಚಂದ್ರನ್ ನಟಿಸಲಿದ್ದಾರೆ. ಸಿನಿಮಾದಲ್ಲಿ ಬುಡಕಟ್ಟು ಯುವತಿಯ ಪಾತ್ರಕ್ಕೆ ಹೆಚ್ಚಿನ ಪ್ರಾದಾನ್ಯತೆ ಇದೆ. ಇದೇ ಸಿನಿಮಾದಲ್ಲಿ ನಟ ಆರಿ ಸಹ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಪ್ರಪಂಚದ ಶ್ರೀಮಂತ ಮಹಿಳೆಯನ್ನು ಪರಿಚಯಿಸಿದ ಸೋನು ಸೂದ್ | Filmibeat Kannada
  ಶಿವಾನಿ ನಟಿಸಿದ್ದ ಮೊದಲ ಸಿನಿಮಾ ನಿಂತುಹೋಗಿತ್ತು

  ಶಿವಾನಿ ನಟಿಸಿದ್ದ ಮೊದಲ ಸಿನಿಮಾ ನಿಂತುಹೋಗಿತ್ತು

  ಶಿವಾನಿ ರಾಜಶೇಖರ್ ನಟಿಯಾಗುವುದಕ್ಕೆ ಮುನ್ನವೇ ಸಿನಿಮಾ ನಿರ್ಮಾಪಕಿ ಆಗಿದ್ದರು. ಶಿವಾನಿ ನಟಿಸಿದ್ದ 'ಟು ಸ್ಟೇಟ್ಸ್' ತೆಲುಗು ಸಿನಿಮಾ ಸೆಟ್ಟೇರಿತಾದರೂ ಸಿನಿಮಾದ ಚಿತ್ರೀಕರಣ ಮುಗಿಯುವ ಮುನ್ನವೇ ನಿಂತು ಹೋಯಿತು. ಇದೀಗ ದೊಡ್ಡ ಬ್ಯಾನರ್‌ನಲ್ಲಿ ಸಿಎಂ ಮಗನ ಜೊತೆಗೆ ನಟಿಸುವ ಅವಕಾಶ ಶಿವಾನಿಗೆ ಒದಗಿದೆ.

  English summary
  Telugu actor Rajshekhar's daughter Shivani Rajshekhar will act with Tamil Nadu CM's son Udayanidhi Stalin.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X