ತಮಿಳು-ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ನಟ ರಾಕೇಶ್ ಅಡಿಗ

'ಜೋಶ್' ಚಿತ್ರದ ಮೂಲಕ ಕನ್ನಡಿಗರ ಗಮನ ಸೆಳೆದಿದ್ದ ನಟ ರಾಕೇಶ್ ಅಡಿಗ ಈಗ ತೆಲುಗು ಮತ್ತು ತಮಿಳು ಇಂಡಸ್ಟ್ರಿ ಪ್ರವೇಶಿಸುತ್ತಿದ್ದಾರೆ. ತ್ರಿಭಾಷಾ ಚಿತ್ರದ ಮೂಲಕ ಪರಭಾಷೆಯಲ್ಲಿ ಮೋಡಿ ಮಾಡಲು ಸಜ್ಜಾಗುತ್ತಿದ್ದಾರೆ.

ಪ್ರತಿಭಾನ್ವಿತರ ತಂಡ ಸೇರಿ ತಯಾರು ಮಾಡುತ್ತಿರುವ ಚಿತ್ರದಲ್ಲಿ ರಾಕೇಶ್ ಅಡಿಗ ಪ್ರಧಾನ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರಕ್ಕೆ 'ರೂಂ' ಎಂದು ಹೆಸರಿಡಲಾಗಿದ್ದು, ಪದ್ಮ ಮಗನ್ ನಿರ್ದೇಶಿಸುತ್ತಿದ್ದಾರೆ.

ಪದ್ಮ ಮಗನ್ ಈ ಹಿಂದೆ ಪಲ್ಲವನ್ (2003), ಅಮ್ಮುವಾಗಿಯಾ ನಾನ್ (2007), ನೇಟ್ರು ಇಂಡ್ರು (2014) ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಈಗ ರೂಂ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ 'ಮಾರ್ಚ್ 30' ಎಂಬ ಬ್ಯಾನರ್‌ನಲ್ಲಿ ಅಶ್ವಿನ್ ಕೆ ಬಂಡವಾಳ ಹಾಕುತ್ತಿದ್ದಾರೆ.

Rakesh Adiga debut tamil and telugu industry with Room Movie

ಎಂಎಸ್ ಪ್ರಭು ಅವರ ಛಾಯಾಗ್ರಹಣವಿದೆ. ವಿನೋದ್ ಯಜಮನ್ಯ ಸಂಗೀತ ಒಳಗೊಂಡಿದೆ. ಸಿಎಸ್ ಪ್ರೇಮ್ ಅವರ ಸಂಕಲನ ಹಾಗೂ ಪಿ ರಾಜು ಅವರು ಕಲಾ ನಿರ್ದೇಶನ ಮಾಡಲಿದ್ದಾರೆ. ಪೂರ್ಣಿಮಾ ಅವರು ಕಾಸ್ಟ್ಯೂಮ ಡಿಸೈನರ್ ಆಗಿದ್ದಾರೆ.

ರಾಕೇಶ್ ಅಡಿಗ ಪ್ರಮುಖ ಪಾತ್ರದಲ್ಲಿ ನಟಿಸಲಿರುವ ರೂಂ ಚಿತ್ರದಲ್ಲಿ ಅಭಿಷೇಕ್ ವರ್ಮಾ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಮನೋ ಚಿತ್ರ ನಾಯಕಿ. ನಾಯಕಿಯ ಪತಿ ಪಾತ್ರವನ್ನು ರಾಕೇಶ್ ಅಡಿಗ ಮಾಡಲಿದ್ದಾರೆ. ಅಶ್ವಿನ್ ಕೆ, ಬ್ಯಾನರ್ಜಿ, ಸುಷ್ಮಾ ಚೆರ್ರಿ, ಸಂಪತ್ ರಾಜ್, ಥೇರಿ ಧೀನಾ, ಯೋಕೇಶ್ ಸಹ ತಾರಬಳಗದಲ್ಲಿದ್ದಾರೆ.

ಇನ್ನು ರಾಕೇಶ್ ಅಡಿಗ ಕೊನೆಯದಾಗಿ 'ಮಂಡ್ಯ ಟು ಮುಂಬೈ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಟೋರಿಯಸ್, ಡವ್ ಸಿನಿಮಾಗಳಲ್ಲಿ ನಟಿಸುತ್ತಿದ್ದು, ತಮ್ಮದೇ ನಿರ್ದೇಶನದಲ್ಲಿ 'ನೈಟ್ ಔಟ್' ಚಿತ್ರ ತೆರೆ ಕಂಡಿತ್ತು.

More from Filmibeat

English summary
Kannada actor Rakesh Adiga debut tamil and telugu industry with trilingual film Room. the movie directed by padma magan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X