ಶಂಕರ್ ಪ್ಯಾನ್ ಇಂಡಿಯಾ 3ಡಿ ಸಿನಿಮಾದ ರಾಮ್ ಚರಣ್ ಪಾತ್ರ ಬಹಿರಂಗ
ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ 3ಡಿ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮೊದಲ ಬಾರಿಗೆ ತೆಲುಗು ಸ್ಟಾರ್ ರಾಮ್ ಚರಣ್ ಗೆ ಶಂಕರ್ ಆಕ್ಷನ್ ಕಟ್ ಹೇಳುತ್ತಿದ್ದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.
ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ಶಂಕರ್ ಮತ್ತಾ ರಾಮ್ ಚರಣ್ ಸಿನಿಮಾದ ಬಗ್ಗೆ ದಿನಕ್ಕೊಂದು ಸುದ್ದಿ ಕೇಳಿಬರುತ್ತಿರುತ್ತೆ. ರಾಮ್ ಚರಣ್ ಗೆ ನಾಯಕಿಯಾರಾಗ್ತಾರೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದ್ರೆ ಮತ್ತೊಂದೆಡೆ ಬೇರೆ ಬೇರೆ ಭಾಷೆಯ ದೊಡ್ಡ ಕಲಾವಿದರು ಶಂಕರ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಸಹ ಹರಿದಾಡುತ್ತಿದೆ. ಇದೀಗ ಚಿತ್ರದ ಬಗ್ಗೆ ಮತ್ತೊಂದು ಸುದ್ದಿ ಹೊರಬಿದ್ದಿದೆ. ಮುಂದೆ ಓದಿ..

IAS ಅಧಿಕಾರಿಯಾದ ರಾಮ್ ಚರಣ್?
ಚಿತ್ರದಲ್ಲಿ ರಾಮ್ ಚರಣ್ ಪಾತ್ರ ರಿವೀಲ್ ಆಗಿದೆ. ಶಂಕರ್ ನಿರ್ದೇಶನದ ಚಿತ್ರದಲ್ಲಿ ರಾಮ್ ಚರಣ್ IAS ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ವ್ಯವಸ್ಥೆಯನ್ನು ಬದಲಾಯಿಸುವ ಪ್ರಾಮಾಣಿಕ ಅಧಿಕಾರಿ ಪಾತ್ರದಲ್ಲಿ ರಾಮ್ ಚರಣ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಖ್ಯಾತ ಗೀತರಚನೆಕಾರ ವಿವೇಕ್ ಎಂಟ್ರಿ
ಇನ್ನು ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಖ್ಯಾತ ಗೀತರಚನೆಕಾರ ಮತ್ತು ಸಂಭಾಷಣೆಗಾರ ವಿವೇಕ್ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಮರ್ಸೆಲ್, ಬಿಗಿಲ್, ದರ್ಬಾರ್, ಸೂರರೈ ಪೊಟ್ರು ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಿಗೆ ಸಾಹಿತ್ಯ ರಚಿಸಿರುವ ವಿವೇಕ್, ಶಂಕರ್ ಸಿನಿಮಾಗೂ ಕೆಲಸ ಮಾಡಲು ಸಜ್ಜಾಗಿದ್ದಾರೆ.

ಚಿತ್ರದಲ್ಲಿ ಇರ್ತಾರಾ ಬಹುಭಾಷ ಸ್ಟಾರ್ಸ್ಟ್?
ಚಿತ್ರದ ಮತ್ತೊಂದು ವಿಶೇಷ ಎಂದರೆ ಬೇರೆ ಭಾಷೆಯ ಸ್ಟಾರ್ ಕಲಾವಿದರು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಂತೆ. ಕನ್ನಡದಿಂದ ಸುದೀಪ್, ತೆಲುಗು ನಟ ಚಿರಂಜೀವಿ, ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹೆಸರುಗಳು ಸಹ ಕೇಳಿಬರುತ್ತಿದೆ. ಆದರೆ ಇದ್ಯಾವುದರ ಬಗ್ಗೆಯೂ ಸಿನಿಮಾತಂಡ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.
Recommended Video

ಯಾವಾಗ ಪ್ರಾರಂಭವಾಗಲಿದೆ ಸಿನಿಮಾ?
ದುಬಾರಿ ವೆಚ್ಚದಲ್ಲಿ ತಯಾರಾಗುತ್ತಿರುವ ಪ್ಯಾನ್ ಇಂಡಿಯಾ 3ಡಿ ಸಿನಿಮಾ ಜುಲೈಯಲ್ಲಿ ಪ್ರಾರಂಭ ಮಾಡಿ ಈ ವರ್ಷದ ಕೊನೆಯಲ್ಲಿ ಮುಗಿಸುವ ಪ್ಲಾನ್ ಮಾಡಿದೆ ಚಿತ್ರತಂಡ. ಆದರೆ ಕೊರೊನಾ ಹಾವಳಿಯಿಂದ ಲೆಕ್ಕಾಚಾರ ತಲೆಕಳಗಾದರೂ ಅಚ್ಚರಿ ಇಲ್ಲ. ಈ ಸಿನಿಮಾ ಮುಗಿಸಿ ಶಂಕರ್ ಬಾಲಿವುಡ್ ನಟ ರಣ್ವೀರ್ ಸಿಂಗ್ ಗೆ ನಿರ್ದೇಶನ ಮಾಡಲಿದ್ದಾರೆ.


Click it and Unblock the Notifications