ನನ್ನ ಪತಿಗೆ ನನಗಿಂತ ತಮನ್ನಾ ಮುಖ್ಯ ಅಂತೆ, ಮತ್ತೆ ನಾನ್ಯಾಕೆ? ಎಂದ ರಂಭಾ
ಬಹುಭಾಷಾ ನಟಿ ರಂಭಾ ಕೆಲ ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸ್ತಿಲ್ಲ. ಮಕ್ಕಳ ಲಾಲಾನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಕಂಬ್ಯಾಕ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಈ ಹಿಂದೆ ರಂಭಾ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಬಳಿಕ ಎಲ್ಲವೂ ತಣ್ಣಗಾಗಿತ್ತು.
ಉದ್ಯಮಿ ಇಂದ್ರಕುಮಾರ್ ಪದ್ಮನಾಥನ್ ಎಂಬುವವರನ್ನು ರಂಭಾ ಮದುವೆ ಆಗಿದ್ದಾರೆ. 15 ವರ್ಷಗಳ ಹಿಂದೆ ಇಬ್ಬರ ಮದುವೆ ನಡೆದಿತ್ತು. ಸೌತ್ ಸಿನಿದುನಿಯಾದಲ್ಲಿ ಬಹಳ ಬ್ಯುಸಿಯಾಗಿದ್ದ ಚೆಲುವೆ ಬಳಿಕ ಸೈಲೆಂಟ್ ಆಗಿಬಿಟ್ಟರು. ದಂಪತಿಗೆ ಮೂವರು ಮಕ್ಕಳಿದ್ದಾರೆ. 2010ರಲ್ಲಿ ಬಂದಿದ್ದ 'ಪೆಣ್ಣ್ ಸಿಂಗಂ' ರಂಭಾ ನಟಿಸಿದ ಕೊನೆಯ ಸಿನಿಮಾ.

ಇತ್ತೀಚೆಗೆ ಸಾಕಷ್ಟು ಸಂದರ್ಶನಗಳಲ್ಲಿ ರಂಭಾ ಭಾಗವಹಿಸುತ್ತಿದ್ದಾರೆ. ತಮ್ಮ ವೈಯಕ್ತಿಯ ಜೀವನ, ಸಿನಿಮಾಗಳ ದಿನಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದೇ ವೇಳೆ ತಮ್ಮ ಪತಿಯ ಬಗ್ಗೆಯೂ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮನ್ನಾ ಕಾರಣಕ್ಕೆ ಇವತ್ತಿಗೂ ಪತಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡ್ತಿಲ್ಲ ಎನ್ನುವ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಪತಿ ಪತ್ನಿ ಒಬ್ಬರನ್ನು ಒಬ್ಬರು ಫಾಲೋ ಮಾಡುವುದು ಗೊತ್ತೇಯಿದೆ. ಆದರೆ ರಂಭಾ ಮಾತ್ರ ಇವತ್ತಿಗೂ ಇನ್‌ಸ್ಟಾಗ್ರಾಮ್‌ನಲ್ಲಿ ಪತಿ ಇಂದ್ರಕುಮಾರ್ ಅವರ ಅಕೌಂಟ್ ಫಾಲೋ ಮಾಡ್ತಿಲ್ಲ. ಅದಕ್ಕೆ ಕಾರಣ ತಮನ್ನಾ ಎಂದಿದ್ದಾರೆ. ಅದು ಯಾಕೆ ಇನ್ನುವುದನ್ನು ಆಕೆ ಹೇಳಿರುವ ವೀಡಿಯೋ ವೈರಲ್ ಆಗುತ್ತಿದೆ.
ರಂಭಾ ತಾವು ಬಹಳ ಚೈಲ್ಡಿಶ್ ಎಂದು ತಮಿಳು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆ ವೀಡಿಯೋ ಈ ವೈರಲ್ ಆಗುತ್ತಿದೆ. ನಾನು ಎ. ಆರ್ ರಹಮಾನ್ ಸರ್ ಮ್ಯೂಸಿಕ್ ಹಾಡುಗಳಿಗೆ ಹೆಜ್ಜೆ ಹಾಕಿದ್ದೇನೆ. ಆದರೆ ಈವರೆಗೆ ಅವರನ್ನು ಭೇಟಿ ಆಗಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಅವರನ್ನು ಕೆಲವೊಮ್ಮೆ ಫಾಲೋ ಮಾಡುತ್ತೇನೆ, ಅವರು ಪ್ರತಿಕ್ರಿಯಿಸಲಿಲ್ಲ ಎಂದು ಅನ್‌ಫಾಲೋ ಮಾಡುತ್ತೇನೆ. ಮತ್ತೆ ಕೆಲ ಕೆಲ ದಿನಗಳ ಬಳಿಕ ಮತ್ತೆ ಫಾಲೋ ಮಾಡುತ್ತೇನೆ. ಮತ್ತೆ ಅನ್‌ಫಾಲೋ ಮಾಡೋದು ಮಾಡುತ್ತಿರುತ್ತೀನಿ, ಈಗ ಕೂಡ ಫಾಲೋ ಮಾಡ್ತಿದ್ದೀನಾ ಇಲ್ವಾ? ಗೊತ್ತಿಲ್ಲ ಎಂದು ಹೇಳಿ ರಂಭಾ ನಕ್ಕಿದ್ದಾರೆ.
ಕೆಲವೊಮ್ಮೆ ನಟಿ ಮೀನಾ ಅವರನ್ನು ಅನ್‌ಫಾಲೋ ಮಾಡುತ್ತೇನೆ. ನೀವು ರಿಪ್ಲೇ ಮಾಡಲಿಲ್ಲ, ಲೈಕ್ ಮಾಡಲಿಲ್ಲ ಎನ್ನುತ್ತೇನೆ. ಅವರು ಅಯ್ಯೋ ಏನಮ್ಮಾ ಇದೆಲ್ಲಾ ಎಂದು ನಗುತ್ತಾರೆ. ಬಳಿಕ ಈಗ ಮಾಡ್ತೀನಿ ಎಂದು ಫಾಲೋ ಮಾಡ್ತಿನಿ. ನಿಮಗೆ ಗೊತ್ತಾ? ಇನ್‌ಸ್ಟಾಗ್ರಾಮ್‌ನಲ್ಲಿ ನಾನು ಇವತ್ತಿಗೂ ನನ್ನ ಪತಿಯನ್ನು ಫಾಲೋ ಮಾಡ್ತಿಲ್ಲ. ನಾನು ಹೇಳ್ದೆ ನನ್ನನ್ನೇ ನೀವು ಮೊದಲು ಫಾಲೋ ಮಾಡಬೇಕು ಅಂತ. ಆದರೆ ಅವರು ಮೊದಲು ತಮನ್ನಾಳನ್ನು ಫಾಲೋ ಮಾಡುತ್ತಿದ್ದಾರೆ. ಓಕೆ ಅವಳನ್ನೇ ಇಟ್ಕೊಳಿ, ಅವಳನ್ನೇ ಫಾಲೋ ಮಾಡಿ ಎನ್ನುತ್ತೇನೆ.
ಈಗ ಬೇಕಿದ್ದರೆ ನನ್ನ ಇನ್‌ಸ್ಟಾಗ್ರಾಂ ಚೆಕ್ ಮಾಡಿ. ನಾನು ಈ ಕ್ಷಣಕ್ಕೂ ನನ್ನ ಪತಿಯ ಅಕೌಂಟ್ ಫಾಲೋ ಮಾಡ್ತಿಲ್ಲ. ಅವರು ತಮನ್ನಾಳನ್ನು ಫಾಲೋ ಮಾಡಲಿ, ಆದರೆ ಪತ್ನಿಯಾಗಿ ನಾನು ಮೊದಲ ಆದ್ಯತೆ ಆಗಿರಬೇಕಲ್ಲ, ಬೇರೆ ಎಲ್ಲಿ ನಾನು ನನ್ನ ಹಕ್ಕು ಚಲಾಯಿಸಲು ಸಾಧ್ಯ, ನಿಜ ಅಲ್ವಾ? ಎಂದು ರಂಭಾ ನಕ್ಕಿದ್ದಾರೆ.
ಕನ್ನಡ ಸಿನಿಮಾಗಳಲ್ಲಿ ಕೂಡ ರಂಭಾ ನಟಿಸಿದ್ದಾರೆ. ಜಗ್ಗೇಶ್ ಜೊತೆ 'ಸರ್ವರ್ ಸೋಮಣ್ಣ' ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. 'ಓ ಪ್ರೇಮವೇ', 'ಬಾವ ಬಾಮೈದ', 'ಸಾಹುಕಾರ', 'ಪಾಂಡು ರಂಗ ವಿಠಲ', 'ಗಂಡುಗಲಿ ಕುಮಾರರಾಮ' ಸೇರಿ ಕೆಲ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಒಂದಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಶೀಘ್ರದಲ್ಲೇ ಮತ್ತೆ ಕ್ಯಾಮರಾ ಮುಂದೆ ಬರಲಿದ್ದಾರೆ.


Click it and Unblock the Notifications











