ದಿವಂಗತ ನಟ ವಿವೇಕ್‌ಗೆ ವಿಶೇಷ ಗೌರವ ಸಲ್ಲಿಸಿದ ರಮ್ಯಾ ಪಾಂಡಿಯನ್

ತಮಿಳು ಹಾಸ್ಯ ನಟ ವಿವೇಕ್ ಅವರ ಸಾವಿನ ಸುದ್ದಿ ಇಡೀ ಚಿತ್ರರಂಗಕ್ಕೆ ಆಘಾತ ತಂದಿತ್ತು. ವಿವೇಕ್ ಅವರು ಇನ್ನಿಲ್ಲ ಎನ್ನುವುದನ್ನೂ ಈಗಲೂ ಊಹಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಸ್ನೇಹಿತರು, ಆಪ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ವಿವೇಕ್ ಅವರು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ವಿಶೇಷ ಸಂಗತಿಯೆಂದರೆ ತಮಿಳುನಾಡಿನಾದ್ಯಂತ ಸುಮಾರು 33 ಲಕ್ಷ ಮರಗಳನ್ನು ನೆಡುವ ಕೆಲಸದಲ್ಲಿ ವಿವೇಕ್ ಪ್ರಮುಖ ಪಾತ್ರ ವಹಿಸಿದ್ದರು.

ವಿವೇಕ್ ಅವರ ಈ ಸಾಮಾಜಿಕ ಕಾರ್ಯದಿಂದ ಸ್ಫೂರ್ತಿಯಾಗಿರುವ ನಟಿ ರಮ್ಯಾ ಪಾಂಡಿಯನ್ ಈಗ ದಿವಂಗತ ನಟನಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.

Ramya Pandian planted 59 saplings at SP office Thiruvallur To Tribute Vivek

ವಿವೇಕ್ ಅವರ ಅಗಲಿಕೆ ಹಿನ್ನೆಲೆ ತಿರುವಳ್ಳೂರ್ ಎಸ್ ಪಿ ಕಚೇರಿಯಲ್ಲಿ 59 ಸಸಿಗಳನ್ನು ನೆಡುವ ಮೂಲಕ ನಟಿ ರಮ್ಯಾ ಪಾಂಡಿಯನ್ ಕೃತಜ್ಞತೆ ಸಲ್ಲಿಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಮ್ಯಾ ''ವಿವೇಕ್ ಅವರು ನನಗೆ ಸ್ಫೂರ್ತಿಯಾಗಿದ್ದಾರೆ ಮತ್ತು ಅವರು ಬಿಟ್ಟುಹೋದ ಪರಂಪರೆಯನ್ನು ಮುಂದುವರೆಸುವ ಭರವಸೆ ನೀಡುತ್ತಿದ್ದೇನೆ. ಅವರು ಯಾವಾಗಲೂ ನಮ್ಮ ಹೃದಯದಲ್ಲಿ ವಾಸಿಸುತ್ತಾರೆ'' ಎಂದರು.

ಈ ವೇಳೆ ತಿರುವಳ್ಳೂರ್ ಎಸ್‌ಪಿ ಅರವಿಂದನ್ ಅವರು ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Ramya Pandian planted 59 saplings at SP office Thiruvallur To Tribute Vivek

ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಮ್ಯಾ ಪಾಂಡಿಯನ್ 2015ರಲ್ಲಿ 'ಡಮ್ಮಿ ತಪ್ಪಾಸು' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ನಂತರ 'ಜೋಕರ್' ಮತ್ತು 'ಆನ್ ದೇವತೈ' ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಪ್ರಸ್ತುತ 2ಡಿ ಎಂಟರ್‌ಟೈನ್‌ಮೆಂಟ್ ಸಂಸ್ಥೆ ನಿರ್ಮಾಣದಲ್ಲಿ ಹೊಸ ಸಿನಿಮಾ ಮಾಡ್ತಿದ್ದಾರೆ. ವೆಬ್ ಸಿರೀಸ್‌ನಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ 4ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದರು.

Recommended Video

ಕೊರೊನಾ ಬಗ್ಗೆ ಹೆದರಿಸುವ ಬದಲು ಎದುರಿಸುವುದು ಹೇಗೆ ಅಂತಾ ತಿಳಿಸಿ | Filmibeat Kannada

More from Filmibeat

English summary
As a Tribute to Vivek, Ramya Pandian planted 59 saplings at SP office Thiruvallur, along with SP aravindhan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X