ನನ್ನ ಹೃದಯದಲ್ಲಿ ಚೆನ್ನೈಗೆ ತುಂಬಾ ವಿಶೇಷವಾದ ಸ್ಥಾನ ಇದೆ - ರಶ್ಮಿಕಾ ಮಂದಣ್ಣ...!

ಕನ್ನಡ ಕುರಿತು ಮಾತನಾಡಬಾರದ್ದನ್ನು ಮಾತನಾಡಿ ಕನ್ನಡಿಗರನ್ನು ಕೆಣಕಿ ಸದ್ಯ ಕಮಲ್ ಹಾಸನ್, ನ್ಯಾಯಾಲಯದ ಬಾಗಿಲು ಬಡೆಯುತ್ತಾ ಕುಂತಿದ್ದಾರೆ. ಕರುನಾಡಿನೆಲ್ಲೆಡೆ ಥಗ್ ಲೈಫ್ ಬಿಡುಗಡೆಯಾಗದಿರುವುದಕ್ಕೆ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಕಮಲ್ ಹಾಸನ್ ವಿರುದ್ಧ ಕನ್ನಡಿಗರ ಆಕ್ರೋಶ ಇನ್ನೂ ಕಡಿಮೆಯಾಗಿಲ್ಲ. ಕ್ಷಮೆ ಕೇಳುವವರೆಗೆ ಆಕ್ರೋಶ ಕಡಿಮೆಯಾಗುವುದಿಲ್ಲ ಕೂಡ. ಹೀಗಿರುವಾಗ ಇದೀಗ ರಶ್ಮಿಕಾ ಮಂದಣ್ಣ ಕನ್ನಡಿಗರನ್ನು ಕೆರಳಿಸಿದ್ದಾರೆ. ಚೆನ್ನೈ ಮೇಲೆ ತಮಗೆ ಇರುವ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಹೌದು, ರಶ್ಮಿಕಾ ಮಂದಣ್ಣ ಪಕ್ಕದ ಮನೆಯ ಸ್ಟಾರ್ ಧನುಷ್ ಜೊತೆ ಚಿತ್ರವೊಂದನ್ನು ಮಾಡಿದ್ದಾರೆ. ಆ ಚಿತ್ರದ ಹೆಸರು ಕುಬೇರ. ಇದೇ ಜೂನ್ 20ರಂದು ಈ ಚಿತ್ರ ತೆರೆಗೆ ಬರಲಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ರಶ್ಮಿಕಾ ಮಂದಣ್ಣ ಮತ್ತು ಧನುಷ್ ಶುರು ಮಾಡಿದ್ಧಾರೆ.

rashmika-mandanna-says-chennai-holds-a-special-place-in-her-heart-amid-kannada-tamil-controversy

ಚಿತ್ರದ ಪ್ರಚಾರಾರ್ಥ ಕಳೆದ ವಾರ ನಡೆದ ಕುಬೇರ್ ಚಿತ್ರದ ಗ್ರ್ಯಾಂಡ್ ಕಾರ್ಯಕ್ರಮದ ಕೆಲ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ಚೆನ್ನೈ ಮೇಲೀನ ತಮ್ಮ ಪ್ರೀತಿಯನ್ನು ಕೂಡ ಹೊರ ಹಾಕಿದ್ದಾರೆ.

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರಶ್ಮಿಕಾ ಮಂದಣ್ಣ ಕುಬೇರ ಚಿತ್ರದ ಪ್ರಚಾರವನ್ನು ನಾವು ಚೆನ್ನೈನಲ್ಲಿ ಆರಂಭಿಸಿದ್ದೇವೆ. ನನ್ನ ಬಾಲ್ಯವನ್ನು ನಾನು ಇಲ್ಲಿ ಕಳೆದ ಕಾರಣ ನನ್ನ ಹೃದಯದಲ್ಲಿ ಚೆನ್ನೈಗೆ ವಿಶೇಷವಾದ ಸ್ಥಾನ ಇದೆ. ನನಗೆ ಖುಷಿ ಇದೆ. ನಾನು ಅಂದು { ಕಾರ್ಯಕ್ರಮದ ದಿನ } ತುಂಬಾನೇ ನಕ್ಕಿದ್ದೇನೆ ಎಂದು ಬರೆದುಕೊಂಡಿದ್ಧಾರೆ.

ರಶ್ಮಿಕಾ ಅವರ ಈ ಚೆನ್ನೈ ಮೇಲಿನ ಪ್ರೀತಿಯನ್ನು ಅನೇಕ ಕನ್ನಡಿಗರು ಸದ್ಯ ಟೀಕಿಸುತ್ತಿದ್ದಾರೆ. ಅಂದ್ಹಾಗೇ 2019ರಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಆಪ್ತ ಸ್ನೇಹಿತ ವಿಜಯ್ ದೇವರಕೊಂಡ ಜೊತೆ ಡಿಯರ್ ಕಾಮ್ರೇಡ್ ಚಿತ್ರವನ್ನು ಮಾಡಿದ್ದರು.

ಈ ಚಿತ್ರದ ಪ್ರಚಾರದ ಸಮಯದಲ್ಲಿ 'ಡೆಕ್ಕನ್ ಕ್ರಾನಿಕಲ್‌'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ರಶ್ಮಿಕಾ ಮಂದಣ್ಣ ನಾನು ನನ್ನ ಬಾಲ್ಯವನ್ನು ಕಳೆದಿದ್ದು ಚೆನ್ನೈನಲ್ಲಿಯೇ ಎಂದು ಹೇಳಿದ್ದರು. ನಮ್ಮ ತಂದೆ ಇಲ್ಲಿ ಕೆಲಸ ಮಾಡುತ್ತಿದ್ದರಿಂದ ನಾವು ಚೆನ್ನೈನಲ್ಲಿನ ಡಿಫೆನ್ಸ್ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದೇವು ಎಂದು ಹೇಳಿದ್ದ ರಶ್ಮಿಕಾ ಮಂದಣ್ಣ ನಾನು ರಸ್ಕಿನ್ ಎಂಬ ಶಾಲೆಯಲ್ಲಿ ಆಗ ಓದುತ್ತಿದ್ದೆ ಆ ಶಾಲೆ ಈಗ ಇದೆಯಾ ಇಲ್ಲವಾ ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದರು. ಆ ನಂತರ ನಾವು ಕೂರ್ಗ್‌ಗೆ ಸ್ಥಳಾಂತರಗೊಂಡೆವು ಎಂದು ಹೇಳಿದ್ದ ರಶ್ಮಿಕಾ ನಾನು ಕಲಿತ ಮೊದಲ ಭಾಷೆ ತಮಿಳು ಎಂದು ಹೇಳಿದ್ದರು.

ಹೀಗೆ ಅಂದು ತಮ್ಮ ತಮಿಳು ಪ್ರೇಮವನ್ನು ಮತ್ತು ಇಂದು ತಮ್ಮ ಚೆನ್ನೈ ಮೇಲಿನ ಪ್ರೇಮವನ್ನು ವ್ಯಕ್ತಪಡಿಸಿರುವ ರಶ್ಮಿಕಾ ಮಂದಣ್ಣ ಕೈಯಲ್ಲಿ ಸದ್ಯ ಹಲವಾರು ಸಿನಿಮಾಗಳಿವೆ. ಆ ಪೈಕಿ ಆಗಸ್ಟ್‌ನಲ್ಲಿ ರಶ್ಮಿಕಾ ಮಂದಣ್ಣ ಕಾಕ್‌ಟೈಲ್ 2 ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ಧಾರೆ. ಈ ಚಿತ್ರದಲ್ಲಿ ಶಾಹಿದ್ ಕಪೂರ್ ನಾಯನಾದರೆ ಬಾಲಿವುಡ್‌ನ ಬೆಡಗಿ ಕೃತಿ ಸನೋನ್ ಚಿತ್ರದ ಮತ್ತೊಬ್ಬ ನಾಯಕಿ.

ಈ ಚಿತ್ರವನ್ನು ಹೊರತು ಪಡಿಸಿದರೆ ಧನುಷ್ ಅಭಿನಯದ ಕುಬೇರ ಚಿತ್ರದಲ್ಲಿ ಕೂಡ ರಶ್ಮಿಕಾ ನಾಯಕಿ. ಈ ಜೂನ್ 20ರಂದು ಈ ಚಿತ್ರ ತೆರೆಗೆ ಬರಲಿದೆ. ತೆಲುಗಿನ ದಿ ಗರ್ಲ್‌ಫ್ರೆಂಡ್ ಚಿತ್ರ ಕೂಡ ತೆರೆಗೆ ಬರಲು ಸಿದ್ಧವಾಗಿದೆ. ಇದರ ನಡುವೆ ಆಯುಶ್ಮಾನ್ ಖುರಾನ ಜೊತೆ ಥಾಮಾ ಸಿನಿಮಾವನ್ನು ಮಾಡುತ್ತಿರುವ ರಶ್ಮಿಕಾ ಮಂದಣ್ಣ ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾಗುತ್ತಿರುವ ರೇನ್ ಬೋ ಚಿತ್ರದಲ್ಲಿ ಕೂಡ ರಶ್ಮಿಕಾ ಅಭಿನಯಿಸುತ್ತಿದ್ಧಾರೆ. ಈ ಚಿತ್ರದಲ್ಲಿ ದೇವ್ ಮೋಹನ್ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

More from Filmibeat

English summary
Amid the ongoing tensions between Kannada and Tamil communities, actress Rashmika Mandanna expressed her affection for Chennai, saying the city holds a special place in her heart.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X