twitter
    For Quick Alerts
    ALLOW NOTIFICATIONS  
    For Daily Alerts

    ತಮಿಳು ಚಿತ್ರರಂಗದಲ್ಲೂ ಡಿಮ್ಯಾಂಡ್: ದೊಡ್ಡ ಸ್ಟಾರ್ ನಟನ ಚಿತ್ರಕ್ಕೆ ರಶ್ಮಿಕಾ ಬೇಕೇ ಬೇಕು.!

    |

    Recommended Video

    ಒಂದು ಚಿತ್ರಕ್ಕೆ ರಶ್ಮಿಕಾ ಈಗ ಕೇಳುತ್ತಿರೋದು ಎಷ್ಟು ಕೋಟಿ ಗೊತ್ತಾ..? | FILMIBEAT KANNADA

    ನಾಲ್ಕು ವರ್ಷಗಳ ಹಿಂದಿನ ಫ್ಲ್ಯಾಶ್ ಬ್ಯಾಕ್ ಗೆ ಹೋದರೆ, ರಶ್ಮಿಕಾ ಮಂದಣ್ಣ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಆದ್ರೀಗ, ಕೊಡಗಿನ ಈ ಕುವರಿ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ.. ಟಾಲಿವುಡ್ ಮತ್ತು ಕಾಲಿವುಡ್ ನಲ್ಲೂ ಟಾಕ್ ಜೋರಾಗಿದೆ.

    'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಲ್ಲಿ ಮತ್ತು ತೆಲುಗು ಸಿನಿ ಅಂಗಳದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

    ಈಗ ನಟಿ ರಶ್ಮಿಕಾ ಮಂದಣ್ಣ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಸದ್ಯಕ್ಕೆ ತಮಿಳಿನ ಒಂದು ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ಹೀಗಿರುವಾಗಲೇ, ಕಾಲಿವುಡ್ ನಲ್ಲೂ ಆಕೆಗೆ ಡಿಮ್ಯಾಂಡ್ ಹೆಚ್ಚಾಗಿದೆ. ತಮಿಳಿನ ಸ್ಟಾರ್ ನಟರೊಬ್ಬರ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಬೇಕೇ ಬೇಕಂತೆ.! ಮುಂದೆ ಓದಿರಿ...

    ಕಾಲಿವುಡ್ ನಲ್ಲಿ ರಶ್ಮಿಕಾ ನಟಿಸುತ್ತಿರುವ ಚಿತ್ರ ಯಾವುದು.?

    ಕಾಲಿವುಡ್ ನಲ್ಲಿ ರಶ್ಮಿಕಾ ನಟಿಸುತ್ತಿರುವ ಚಿತ್ರ ಯಾವುದು.?

    'ಸುಲ್ತಾನ್' ಚಿತ್ರದ ಮೂಲಕ ಕಾಲಿವುಡ್ ಗೆ ನಟಿ ರಶ್ಮಿಕಾ ಮಂದಣ್ಣ ಎಂಟ್ರಿಕೊಟ್ಟಿದ್ದಾರೆ. ಭಾಗ್ಯರಾಜ್ ಕಣ್ಣನ್ ನಿರ್ದೇಶನ ಮಾಡುತ್ತಿರುವ 'ಸುಲ್ತಾನ್' ಚಿತ್ರಕ್ಕೆ ಕಾರ್ತಿ ಹೀರೋ ಆಗಿದ್ದರೆ, ರಶ್ಮಿಕಾ ಮಂದಣ್ಣ ಹೀರೋಯಿನ್. ಸದ್ಯ ಶೂಟಿಂಗ್ ಹಂತದಲ್ಲಿ ಇರುವ ಈ ಸಿನಿಮಾ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಲಿದೆ.

    ಮಹೇಶ್ ಬಾಬು, ಅಲ್ಲು ಅರ್ಜುನ್ ಆಯ್ತು: ರಶ್ಮಿಕಾ ಮುಂದಿನ ಹೀರೋ ಈ 'ಬಿಗ್' ಸ್ಟಾರ್.!ಮಹೇಶ್ ಬಾಬು, ಅಲ್ಲು ಅರ್ಜುನ್ ಆಯ್ತು: ರಶ್ಮಿಕಾ ಮುಂದಿನ ಹೀರೋ ಈ 'ಬಿಗ್' ಸ್ಟಾರ್.!

    ತಮಿಳಿನ ಸ್ಟಾರ್ ನಟ ಸೂರ್ಯಗೆ ರಶ್ಮಿಕಾ ನಾಯಕಿ.?

    ತಮಿಳಿನ ಸ್ಟಾರ್ ನಟ ಸೂರ್ಯಗೆ ರಶ್ಮಿಕಾ ನಾಯಕಿ.?

    'ಸುಲ್ತಾನ್' ಚಿತ್ರದಲ್ಲಿ ಬಿಜಿಯಾಗಿರುವ ರಶ್ಮಿಕಾ ಮಂದಣ್ಣಗೆ ಮತ್ತೊಂದು ದೊಡ್ಡ ಆಫರ್ ತಮಿಳು ಸಿನಿಮಾ ಅಂಗಳದಲ್ಲಿ ಲಭಿಸಿದೆ. ನಟ ಸೂರ್ಯ ಹಾಗೂ ನಿರ್ದೇಶಕ ಹರಿ ಕಾಂಬಿನೇಶನ್ ನಲ್ಲಿ ಮೂಡಿಬರಲಿರುವ ಹೊಸ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಆಯ್ಕೆ ಆಗುವ ಸಾಧ್ಯತೆ ಹೆಚ್ಚಿದೆ.

    ಮತ್ತೆ ಸಂಭಾವನೆ ಜಾಸ್ತಿ: ನಟಿ ರಶ್ಮಿಕಾ ಮಂದಣ್ಣ ಇನ್ನಷ್ಟು ಕಾಸ್ಟ್ಲಿ.?ಮತ್ತೆ ಸಂಭಾವನೆ ಜಾಸ್ತಿ: ನಟಿ ರಶ್ಮಿಕಾ ಮಂದಣ್ಣ ಇನ್ನಷ್ಟು ಕಾಸ್ಟ್ಲಿ.?

    ಮಾಳವಿಕಾ ಮೋಹನನ್ ಜಾಗಕ್ಕೆ ರಶ್ಮಿಕಾ ಮಂದಣ್ಣ.?

    ಮಾಳವಿಕಾ ಮೋಹನನ್ ಜಾಗಕ್ಕೆ ರಶ್ಮಿಕಾ ಮಂದಣ್ಣ.?

    ನಟ ಸೂರ್ಯ ಅಭಿನಯದ ಹರಿ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರಕ್ಕೆ ಮಾಳವಿಕಾ ಮೋಹನನ್ ನಾಯಕಿ ಆಗಿ ಆಯ್ಕೆ ಆಗಿದ್ದರು. ಆದ್ರೀಗ, ಮಾಳವಿಕಾ ಮೋಹನನ್ ಜಾಗಕ್ಕೆ ರಶ್ಮಿಕಾ ಮಂದಣ್ಣ ರನ್ನ ಕರೆತರುವ ಪ್ಲಾನಿಂಗ್ ನಡೆಯುತ್ತಿದೆ. ಈಗಾಗಲೇ, ಚಿತ್ರತಂಡ ರಶ್ಮಿಕಾ ಮಂದಣ್ಣ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

    ರಶ್ಮಿಕಾ ಮಂದಣ್ಣ ಚಿತ್ರಕ್ಕೆ ವಿಜಯ್ ಸೇತುಪತಿ ವಿಲನ್!ರಶ್ಮಿಕಾ ಮಂದಣ್ಣ ಚಿತ್ರಕ್ಕೆ ವಿಜಯ್ ಸೇತುಪತಿ ವಿಲನ್!

    ಮೊದಲು ತಮ್ಮ ಈಗ ಅಣ್ಣ.!

    ಮೊದಲು ತಮ್ಮ ಈಗ ಅಣ್ಣ.!

    'ಸುಲ್ತಾನ್' ಚಿತ್ರದಲ್ಲಿ ಕಾರ್ತಿ ಜೊತೆಗೆ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಕಾರ್ತಿ ಸಹೋದರ, ಕಾಲಿವುಡ್ ನ ಸ್ಟಾರ್ ನಟ ಸೂರ್ಯ ಜೊತೆಗೂ ರಶ್ಮಿಕಾ ಮಂದಣ್ಣ ಸಿನಿಮಾ ಮಾಡ್ತಾರೆ ಎಂಬ ಸುದ್ದಿ ಹಬ್ಬಿದೆ.

    ಸದ್ಯಕ್ಕೆ ರಶ್ಮಿಕಾ ಬಿಜಿ.!

    ಸದ್ಯಕ್ಕೆ ರಶ್ಮಿಕಾ ಬಿಜಿ.!

    ತೆಲುಗಿನ 'ಸರಿಲೇರು ನೀಕೆವ್ವರು' ಸಿನಿಮಾದ ಬಳಿಕ 'ಭೀಷ್ಮ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಇದರ ಜೊತೆಗೆ ಅಲ್ಲು ಅರ್ಜುನ್ ರವರ ಇನ್ನೂ ಶೀರ್ಷಿಕೆ ಫಿಕ್ಸ್ ಆಗದ ಚಿತ್ರ ಮತ್ತು ತಮಿಳಿನ 'ಸುಲ್ತಾನ್' ಚಿತ್ರಗಳು ಸದ್ಯ ರಶ್ಮಿಕಾ ಮಂದಣ್ಣ ಕೈಯಲ್ಲಿವೆ. ಈ ಬಿಜಿ ಶೆಡ್ಯೂಲ್ ಮಧ್ಯೆ ಸೂರ್ಯ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಕಾಲ್ ಶೀಟ್ ಕೊಡ್ತಾರಾ, ನೋಡೋಣ.

    English summary
    According to the Latest Grapevine, Rashmika Mandanna to replace Malavika Mohanan in Suriya's next Film.
    Monday, February 3, 2020, 16:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X