'ತಮಿಳು ಮನೆಯ ಸೊಸೆ ಆಗಬೇಕು ಅನ್ನೋದು ನನ್ನ ಆಸೆ'- ರಶ್ಮಿಕಾ ಮಂದಣ್ಣ

'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ದಕ್ಷಿಣ ಇಂಡಸ್ಟ್ರಿ ಜೊತೆ ಜೊತೆಗೆ ಬಾಲಿವುಡ್‌ನಲ್ಲೂ ಅದೃಷ್ಟ ಪಡೆದುಕೊಂಡವರು. ಸೌತ್ ನಟರ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಹೀರೋಯಿನ್ ಆಗಿ ಮಿಂಚಿದ ನಟಿ ಈಗ ಬಿಟೌನ್‌ನಲ್ಲಿ ಬ್ಯುಸಿಯಿದ್ದಾರೆ. ಈ ಮಧ್ಯೆ ತಮಿಳಿನಲ್ಲಿ ಅಭಿನಯಿಸಿದ್ದ ಚೊಚ್ಚಲ ಸಿನಿಮಾ ತೆರೆಕಂಡು ಒಳ್ಳೆಯ ಪ್ರದರ್ಶನ ಕಂಡಿದೆ.

Recommended Video

ರಶ್ಮಿಕಾ ಮಂದಣ್ಣ ಕೈ ಹಿಡಿಯಲಿರುವ ತಮಿಳು ಹುಡುಗ ಯಾರು..? | Filmibeat Kannada

ತಮಿಳು ಸಿನಿಮಾ ಹಿಟ್ ಆಗುತ್ತಿದ್ದಂತೆ ರಶ್ಮಿಕಾ ಮಂದಣ್ಣ ಮದುವೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ. 'ತಮಿಳು ಮನೆಯ ಸೊಸೆ ಆಗಬೇಕು ಅನ್ನೋದು ನನ್ನ ಆಸೆ' ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತಮಿಳುನಾಡು ಸೊಸೆಯಾಗುವ ಬಗ್ಗೆ ಮಾತನಾಡಿರುವ ರಶ್ಮಿಕಾ ಈಗ ಸೋಶಿಯಲ್ ಮೀಡಿಯಾದ ಹಾಟ್ ಟಾಪಿಕ್ ಆಗಿದ್ದಾರೆ. ಮುಂದೆ ಓದಿ...

ತಮಿಳು ಮನೆಯ ಸೊಸೆ ಆಗಬೇಕು ಎಂದ ರಶ್ಮಿಕಾ

ತಮಿಳು ಮನೆಯ ಸೊಸೆ ಆಗಬೇಕು ಎಂದ ರಶ್ಮಿಕಾ

'ನನಗೆ ತಮಿಳು ಸಂಸ್ಕೃತಿ, ಸಂಪ್ರದಾಯ ಅಂದರೆ ತುಂಬಾ ಇಷ್ಟ. ವಿಶೇಷವಾಗಿ ತಮಿಳರ ಊಟ, ಆಹಾರ ಪದಾರ್ಥಗಳು ಬಹಳ ಇಷ್ಟವಾಗುತ್ತದೆ. ತಮಿಳರ ಮನೆಯ ಸೊಸೆ ಆಗಬೇಕು ಅನ್ನೋದೆ ನನ್ನ ಆಸೆ' ಎಂದು ಸಂದರ್ಶನವೊಂದರಲ್ಲಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ. ತೆಲುಗಿನ ಈನಾಡು, ಟಿವಿ9 ಹಾಗೂ ಜಸ್ಟಸ್.ಕಾಮ್ ವೆಬ್‌ಸೈಟ್‌ಗಳು ಈ ಸುದ್ದಿ ವರದಿ ಮಾಡಿದೆ.

ತಮಿಳಿನಲ್ಲಿ ಮಾಡಿರುವುದು ಒಂದೇ ಸಿನಿಮಾ

ತಮಿಳಿನಲ್ಲಿ ಮಾಡಿರುವುದು ಒಂದೇ ಸಿನಿಮಾ

ಕನ್ನಡ, ತೆಲುಗಿನಲ್ಲಿ ದೊಡ್ಡ ಯಶಸ್ಸು ಕಂಡಿರುವ ನಟಿ ರಶ್ಮಿಕಾ ಮಂದಣ್ಣ ತಮಿಳಿನಲ್ಲಿ ಮಾಡಿರುವುದು ಒಂದೇ ಸಿನಿಮಾ. ಕಾರ್ತಿ ಅಭಿನಯದ 'ಸುಲ್ತಾನ'. ಈ ಚಿತ್ರ ಏಪ್ರಿಲ್ 2 ರಂದು ಬಿಡುಗಡೆಯಾಗಿ ಸಕ್ಸಸ್ ಕಂಡಿದೆ. ಈ ಚಿತ್ರದಲ್ಲಿ ರಶ್ಮಿಕಾ ಪಕ್ಕಾ ತಮಿಳುನಾಡಿನ ಹಳ್ಳಿ ಹುಡುಗಿ ಪಾತ್ರ ಮಾಡಿದ್ದರು.

ನಿಶ್ಚಿತಾರ್ಥ ಬ್ರೇಕ್ ಅಪ್!

ನಿಶ್ಚಿತಾರ್ಥ ಬ್ರೇಕ್ ಅಪ್!

ರಶ್ಮಿಕಾ ಮಂದಣ್ಣ ಈಗಾಗಲೇ ಕನ್ನಡ ನಟ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ ವೈಯಕ್ತಿಕ ಕಾರಣಗಳಿಂದ ಈ ಎಂಗೇಜ್‌ಮೆಂಟ್ ಬ್ರೇಕ್ ಅಪ್ ಆಯಿತು. ಈ ಘಟನೆ ಆದ್ಮೇಲೆ ತಮ್ಮ ವೃತ್ತಿ ಜೀವನದ ಕಡೆ ಹೆಚ್ಚು ಗಮನ ಹರಿಸಿದ ರಶ್ಮಿಕಾ ಅದರಲ್ಲಿ ಸಕ್ಸಸ್ ಸಹ ಕಂಡಿದ್ದಾರೆ.

'ತೆಲುಗು ಪಿಲ್ಲ' ಎನ್ನುವಷ್ಟು ಸಕ್ಸಸ್

'ತೆಲುಗು ಪಿಲ್ಲ' ಎನ್ನುವಷ್ಟು ಸಕ್ಸಸ್

ಚಲೋ, ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಅಂತಹ ಸಿನಿಮಾಗಳು ರಶ್ಮಿಕಾಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದೆ. ಮಹೇಶ್ ಬಾಬು ಜೊತೆ 'ಸರಿಲೇರು ನೀಕೆವ್ವರು' ಸಿನಿಮಾ ಮಾಡಿದ್ರು. ನಿತೀನ್ ಜೊತೆ 'ಭೀಷ್ಮ' ಸಿನಿಮಾದಲ್ಲೂ ನಟಿಸಿದ್ದಾರೆ. ಪ್ರಸ್ತುತ, ಅಲ್ಲು ಅರ್ಜುನ್ ಜೊತೆ 'ಪುಷ್ಪ' ಚಿತ್ರ ಮಾಡ್ತಿದ್ದಾರೆ.

ಬಾಲಿವುಡ್‌ನಲ್ಲಿ ಎರಡು ಸಿನಿಮಾ

ಬಾಲಿವುಡ್‌ನಲ್ಲಿ ಎರಡು ಸಿನಿಮಾ

ಸಿದ್ಧಾರ್ಥ್ ಮಲ್ಹೋತ್ರ ಅಭಿನಯದ 'ಮಿಷನ್ ಮಿಜ್ನು' ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇದು ರಶ್ಮಿಕಾ ನಟನೆಯ ಮೊದಲ ಹಿಂದಿ ಸಿನಿಮಾ. ಈ ಚಿತ್ರದ ಜೊತೆಯಲ್ಲಿ 'ಗುಡ್ ಬೈ' ಎನ್ನುವ ಮತ್ತೊಂದು ಬಾಲಿವುಡ್ ಸಿನಿಮಾ ಮಾಡ್ತಿದ್ದಾರೆ. ಈ ಪ್ರಾಜೆಕ್ಟ್‌ನಲ್ಲಿ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

More from Filmibeat

English summary
Some Telugu and Tamil Media reports Rashmika Mandanna wants to marry Tamil Person.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X