ರಶ್ಮಿಕಾಗೆ ಸಿಕ್ಕಿತು ತಮಿಳು ನಟ ವಿಜಯ್‌ ಚಿತ್ರ, ಪೂಜಾ ಹೆಗ್ಡೆಗೆ ತಪ್ಪಿದ ಅವಕಾಶ!

ನಟಿ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದ ಬಳಿಕ ಮತ್ತಷ್ಟು ಖ್ಯಾತಿ ಗಳಿಸಿದ್ದಾರೆ. ಪುಷ್ಪ ಚಿತ್ರದಲ್ಲಿ ಆಕೆಗೆ ಸಿಕ್ಕ ಯಶಸ್ಸು, ಮತ್ತಷ್ಟು ಸಿನಿಮಾ ಕೆರಿಯರ್‌ಗೆ ಪುಷ್ಟಿ ಕೊಟ್ಟಿದೆ. ಪುಷ್ಪ ಸರಣಿ ಚಿತ್ರದ ಬಳಿಕ ರಶ್ಮಿಕಾ ಮಂದಣ್ಣ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಯಾವ ನಟನ ಜೊತೆಗೆ ಅಭಿನಯಿಸುತ್ತಾರೆ ಎನ್ನುವ ಕುತೂಹಲ ಹಬ್ಬಿದೆ.

ನಟಿ ರಶ್ಮಿಕಾ ಮಂದಣ್ಣ ಸಿನಿಮಾಗಳ ವಿಚಾರ ಬಂದಾಗ, ಆಕೆ ಯಾವ ಸ್ಟಾರ್ ನಟನ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನುವ ಬಗ್ಗೆಯೇ ಹೆಚ್ಚಿನ ಕುತೂಹಲ ಇರುತ್ತದೆ. ಯಾಕೆಂದರೆ ರಶ್ಮಿಕಾ ಮಂದಣ್ಣ ಅವರ ಟ್ರ್ಯಾಕ್ ರೆಕಾರ್ಡ್ ಹಾಗೆ ಇದೆ. ರಶ್ಮಿಕಾ ಬಹುತೇಕ ಸಿನಿಮಾಗಳನ್ನು ಸ್ಟಾರ್ ನಟರ ಜೊತೆಗೆ ಮಾಡಿದ್ದಾರೆ.

ಈಗ ಮತ್ತೊಬ್ಬ ಸ್ಟಾರ್ ನಟನ ಜೊತೆಗೆ ರಶ್ಮಿಕಾ ಮಂದಣ್ಣ ಹೆಸರು ಕೇಳಿ ಬರುತ್ತಿದೆ. ಇದು ಗಾಳಿ ಸುದ್ದಿ ಅಲ್ಲ, ಸ್ವತಃ ಚಿತ್ರತಂಡ ರಶ್ಮಿಕಾಳ ಮೊರೆ ಹೋಗಿದೆ ಎನ್ನುವ ಸುದ್ದಿ ತಮಿಳು ಚಿತ್ರರಂಗದಲ್ಲಿ ಹಬ್ಬಿದೆ. ಅದು ಮತ್ಯಾರು ಅಲ್ಲ, ತಮಿಳು ನಟ ವಿಜಯ್.

ತಮಿಳು ಸ್ಟಾರ್ ನಟ ವಿಜಯ್ ಜೊತೆ ರಶ್ಮಿಕಾ ಸಿನಿಮಾ!

ತಮಿಳು ಸ್ಟಾರ್ ನಟ ವಿಜಯ್ ಜೊತೆ ರಶ್ಮಿಕಾ ಸಿನಿಮಾ!

ನಟಿ ರಶ್ಮಿಕಾ ಮಂದಣ್ಣ ಮುಂದಿನ ಸಿನಿಮಾ ತಮಿಳು ಸಿನಿಮಾ ಆಗಿರಲಿದೆಯಂತೆ. ರಶ್ಮಿಕಾ ಸದ್ಯ ತಮಿಳು ಚಿತ್ರರಂಗದಲ್ಲಿ ಸ್ಟಾರ್ ಆಗಿ ಮಿಂಚುವುದು ಬಾಕಿ ಇದೆ. ರಶ್ಮಿಕಾ ಹೆಸರು ತಮಿಳು ನಟ ವಿಜಯ್ ಜೊತೆಗೆ ಕೇಳಿ ಬರುತ್ತಿದೆ. ನಟ ವಿಜಯ್ 66ನೇ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಆಗಲಿದ್ದಾರಂತೆ. ಈ ವಿಚಾರ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿದೆ. ಹೌದು ಈಗಾಗಲೇ ಚಿತ್ರಕ್ಕೆ ರಶ್ಮಿಕಾಳನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಚರ್ಚೆ ಚಿತ್ರತಂಡದಲ್ಲಿ ಶುರುವಾಗಿದೆಯಂತೆ.

ವಿಜಯ್‌ಗೆ ರಶ್ಮಿಕಾ ನಾಯಕಿ, ಇದು ನಿರ್ದೇಶಕನ ನಿರ್ಧಾರ!

ವಿಜಯ್‌ಗೆ ರಶ್ಮಿಕಾ ನಾಯಕಿ, ಇದು ನಿರ್ದೇಶಕನ ನಿರ್ಧಾರ!

ವಿಜಯ್ ಅಭಿನಯದ ಈ ಚಿತ್ರಕ್ಕೆ ತೆಲುಗು ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನ ಇದೆ. ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಫೈನಲ್ ಆಗಿದ್ದು, ನಾಯಕಿಯ ಹುಡುಕಾಟದಲ್ಲಿದೆ ಚಿತ್ರತಂಡ. ಚಿತ್ರದ ನಿರ್ದೇಶಕ ವಂಶಿ ಪೈಡಿಪಲ್ಲಿ ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ಸಲಹೆ ನೀಡಿದ್ದಾರಂತೆ. ಚಿತ್ರದ ಕತೆಗೆ ತಕ್ಕ ಹಾಗೆ ನಾಯಕಿಯ ಪಾತ್ರಕ್ಕೆ ನಟಿ ರಶ್ಮಿಕಾ ಮಂದಣ್ಣ ಸರಿಹೊಂದುತ್ತಾರೆ ಎಂದು ಹೇಳಿದ್ದಾರಂತೆ.

ವಿಜಯ್ 66ನೇ ಚಿತ್ರಕ್ಕೆ ಪೂಜಾ ಹೆಗ್ಡೆ, ಕಿಯಾರ ಹೆಸರು!

ವಿಜಯ್ 66ನೇ ಚಿತ್ರಕ್ಕೆ ಪೂಜಾ ಹೆಗ್ಡೆ, ಕಿಯಾರ ಹೆಸರು!

ಅಷ್ಟಕ್ಕೂ ರಶ್ಮಿಕಾ ಮಂದಣ್ಣಗೂ ಮೊದಲು ಈ ಚಿತ್ರಕ್ಕೆ ಇನ್ನು ಇಬ್ಬರು ಸ್ಟಾರ್ ನಟಿಯರ ಹೆಸರು ಕೇಳಿ ಬಂದಿತ್ತಂತೆ. ವಿಜಯ್ 66ನೇ ಚಿತ್ರಕ್ಕೆ ಮೊದಲು ಪೂಜಾ ಹೆಗ್ಡೆ ಮತ್ತು ಕಿಯಾರಾ ಅಡ್ವಾನಿ ಹೆಸರು ಕೇಳಿ ಬಂದಿತ್ತು. ಆದರೆ ಅವರೆಲ್ಲರನ್ನು ಹಿಂದಿಕ್ಕಿ, ರಶ್ಮಿಕಾ ಮಂದಣ್ಣ ಹೆಸರು ಮುನ್ನೆಲೆಗೆ ಬಂದಿದೆ. ಈ ಮೂಲಕ ನಟಿ ರಶ್ಮಿಕಾ ಮಂದಣ್ಣ ತಮಿಳಿನಲ್ಲೂ ಯಶಸ್ಸಿನ ಜಾತ್ರೆ ಶುರು ಮಾಡುವ ಸೂಚನೆ ಕೊಟ್ಟಿದ್ದಾರೆ. ಈ ಹಿಂದೆ ರಶ್ಮಿಕಾ ಅಭಿಮಾನಿಗಳು ವಿಜಯ್ ಜೊತೆಗೆ ಸಿನಿಮಾ ಮಾಡುವಂತೆ ಮನವಿ ಮಾಡಿ, ಸಾಮಾಜಿಕ ಜಾಲತಾಣಲದಲ್ಲಿ ಅಭಿಯಾನ ನಡೆಸಿದ್ದರು.

ತಮಿಳಿನಲ್ಲೂ ರಶ್ಮಿಕಾ ನಂಬರ್ 1 ಆಗುತ್ತಾರ?

ತಮಿಳಿನಲ್ಲೂ ರಶ್ಮಿಕಾ ನಂಬರ್ 1 ಆಗುತ್ತಾರ?

ಕನ್ನಡದಲ್ಲಿ ಸಾಲು ಸಾಲು ಸ್ಟಾರ್ ನಟರ ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ನಂತರ ತೆಲುಗಿನಲ್ಲಿ ಹೆಚ್ಚು ಸದ್ದು ಮಾಡಿದ. ವಿಜಯ್ ದೇವರಕೊಂಡ, ಮಹೇಶ್ ಬಾಬು, ಅಲ್ಲು ಅರ್ಜುನ್ ಅಂತಹ ಸ್ಟಾರ್ ನಟರ ಜೊತೆಗೆ ಅಭಿನಯಿಸಿದ್ದಾರೆ. ಇನ್ನು ಅತ್ತ ಬಾಲಿವುಡ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರ, ಅಮಿತಾಬ್ ಬಚ್ಚನ್ ಜೊತೆಗೆ ತೆರೆಹಂಚಿಕೊಂಡಿದ್ದಾರೆ. ತಮಿಳಿನಲ್ಲಿ ರಶ್ಮಿಕಾ ಮಂದಣ್ಣ ನಟ ಕಾರ್ತಿ ಜೊತೆಗೆ 'ಸುಲ್ತಾನ್' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈಗ ವಿಜಯ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಬಂದಿದೆ. ಹಾಗಾಗಿ ರಶ್ಮಿಕಾ ತಮಿಳಿನಲ್ಲೂ ಸ್ಟಾರ್‌ ನಟಿಯಾಗಿ ಮಿಂಚುವ ಎಲ್ಲಾ ಸಾಧ್ಯತೆಗಳು ಇವೆ.

More from Filmibeat

English summary
Rashimika To Act With Tamil Actor Vijay, Film Team Reject Pooja Hegde And Kiara Advani, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X